ಕಾಲುವೆಗೆ ಬಿದ್ದ ಬಸ್ – ದುರಂತದಲ್ಲಿ 35 ಮಂದಿ ಸಾವು, 8 ಮಂದಿ ನಾಪತ್ತೆ..!
ಭೋಪಾಲ್: ಬಸ್ಸೊಂದು ಸೇತುವೆಯಿಂದ ಕಾಲುವೆಗೆ ಉರುಳಿ ಬಿದ್ದಿದ್ದು, 7 ಮಹಿಳೆಯರು ಸೇರಿದಂತೆ ಸುಮಾರು 39 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯ ಪ್ರದೇಶದ ಸಿಧಿ ಜಿಲ್ಲೆಯ ಪಾಟ್ನಾ ಗ್ರಾಮದ ಬಳಿ ನಡೆದಿದೆ.
ಇನ್ನೂ ಹಲವು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗ್ತಿದೆ. ಮೃತದೇಹಗಳ ಹುಡುಕಾಟ ನಡೆಯುತ್ತಿದೆ. 35ಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗಿದೆ. ಸಾವಿನ ಸಂಖ್ಯೆ 40 ದಾಟಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಲೇಡ್ ನಿಂದ ಬೇಕಾಬಿಟ್ಟು ಮೈ ಕೊಯ್ದುಕೊಂಡ ವೈದ್ಯ..!
ಇನ್ನೂ ಸುಮಾರು 20 ಪ್ರಯಾಣಿಕರು ನಾಪತ್ತೆಯಾಗಿದ್ದಾರೆಂದು ಹೇಳಲಾಗ್ತಿದೆ. ಇಂದು ಬೆಳಗ್ಗೆ 8.30 ರ ಸುಮಾರಿಗೆ ಸಿಧಿ ಜಿಲ್ಲಾ ಕೇಂದ್ರ ಕಚೇರಿಯಿಂದ 80 ಕಿ.ಮೀ ದೂರದಲ್ಲಿರುವ ಪಾಟ್ನಾ ಗ್ರಾಮದ ಬಳಿ ಇರುವ ಕಾಲುವೆಗೆ ಬಸ್ ಬಿದ್ದಿದ್ದು, 7 ಜನ ಈಜಿ ಸುರಕ್ಷಿತವಾಗಿ ಹೊರ ಬಂದಿದ್ದಾರೆ. ಅಪಘಾತಕ್ಕೀಡಾದ ಬಸ್ ನಲ್ಲಿ 54 ಪ್ರಯಾಣಿಕರಿದ್ದರು ಎನ್ನಲಾಗಿದೆ.
ಬೊಮ್ಮನಹಳ್ಳಿಯ ಅಪಾರ್ಟ್ ಮೆಂಟ್ ಒಂದರಲ್ಲೇ 103 ಮಂದಿಗೆ ಪಾಸಿಟಿವ್ : ಬಿಬಿಎಂಪಿ
ಬೆಳಗ್ಗೆ ಬಸ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿತ್ತು. ಕಾಲುವೆಯ ನೀರಿನ ಪ್ರಮಾಣ ಕಡಿಮೆ ಮಾಡಿದ ನಂತರವೇ ದೂರದಲ್ಲಿ ಬಸ್ ಕಾಣಿಸಿಕೊಂಡಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಸಾವಿನ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. 7 ಮಂದಿಯನ್ನು ರಕ್ಷಿಸಲಾಗಿದೆ. ಉಳಿದ ಎಂಟು ಮಂದಿಯ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.
FASTaag ಸ್ಕಾನ್ ಆಗದಕ್ಕೆ ದುಪಟ್ಟು ಹಣಕ್ಕೆ ಬೇಡಿಕೆ : ಲಾರಿ ಚಾಲಕರ ಗಲಾಟೆ
#GOBackModi ಟ್ವೀಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ‘ಕಿರಾತಕ ಬೆಡಗಿ’ ಓವಿಯ್ಯಾ!
ಮತ್ತೊಬ್ಬ ಬಾಲಿವುಡ್ ನ ಯುವ ನಟ ಆತ್ಮಹತ್ಯೆಗೆ ಶರಣು..!







