ಬೆಂಗಳೂರು: ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ನಿಧನಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬುಲೆಟ್ ಪ್ರಕಾಶ್ ಅವರ ಅಗಲಿಕೆ ಚಿತ್ರರಂಗ ಮತ್ತು ರಾಜಕಾರಣಕ್ಕೆ ತುಂಬಲಾರದ ನಷ್ಟ, ಅವರ ಅಗಲಿಕೆಯ ದುಃಖವನ್ನ ಭರಿಸುವ ಶಕ್ತಿಯನ್ನ ಭಗವಂತ ಅವ್ರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.
ಮುಂದುವರಿದು ಮಾತನಾಡಿದ ಸಿಎಂ ಬಿ ಎಸ್ ವೈ, ಬುಲೆಟ್ ಪ್ರಕಾಶ್ ನಟರಾಗಿ ಗುರುತಿಸಿಕೊಂಡಿದ್ರು, ರಾಜಕಾರಣದಲ್ಲೂ ಸಹ ಸಕ್ರಿಯರಾಗಿದ್ರು.ಅವರ ತಾಯಿ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ರು. ಬುಲೆಟ್ ಪ್ರಕಾಶ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಅವರು ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದ್ರು. ಪಕ್ಷ ಯಾವುದೇ ಕೆಲಸವನ್ನ ಪ್ರಕಾಶ್ ಗೆ ಒಪ್ಪಿಸಿದರೂ ಅವರು, ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು ಎಂದು ತಿಳಿಸಿದ್ದಾರೆ.








