ಚಂದನವನದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಕಿಡ್ನಿ ವೈಫಲ್ಯದಿಂದ ಇಂದು ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಆರು ದಿನಗಳಿಂದ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಕೆಲ ವರ್ಷಗಳಿಂದ ಸಿನಿಮಾ ಅವಕಾಶಕ್ಕಾಗಿ ಕಾದುಕುಳಿತ್ತಿದ್ದ ಪ್ರಕಾಶ್ ಅವರ ಕೈಯಲ್ಲಿ
ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುಂಚೆ 3 ಸಿನಿಮಾಗಳಿದ್ದವು. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ -2 ನಲ್ಲಿ ಬುಲೆಟ್ ಪ್ರಕಾಶ್ ನಟಿಸುತ್ತಿದ್ದರು. ಈ ಸಿನಿಮಾದ ಶೂಟಿಂಗ್ ಮುಗಿಸಿ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದ್ರೆ ಬುಲೆಟ್ ಪ್ರಕಾಶ್ ನಟಿಸಬೇಕಿದ್ದ ಕೆಲವು ದೃಶ್ಯಗಳ ಚಿತ್ರೀಕರಣ ಇನ್ನೂ ಬಾಕಿಯಿತ್ತು ಎನ್ನಲಾಗಿದೆ. ಇನ್ನುಳಿದಂತೆ ಪರಿಮಳ ಲಾಡ್ಜ್ ಸಿನಿಮಾದ ಶೂಟಿಂಗ್ ಅರ್ಧ ಮುಗಿದಿದ್ದು, ಮೆಹಬೂಬಾ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಡಬ್ಬಿಂಗ್ ಕೆಲಸ ಬಾಕಿಯಿತ್ತು. ಈ ನಡುವೆ ಬುಲೆಟ್ ಪ್ರಕಾಶ್ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.








