ಲಸಿಕೆ ಬಗ್ಗೆ ಯಾವುದೋ ವದಂತಿಗಳನ್ನು ನಂಬಿ ನೀವು ಬಲಿಪಶುಗಳಾಗಬೇಡಿ : ಕೆ. ಸುಧಾಕರ್
ಬೆಂಗಳೂರು : ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೋವಿಡ್ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.ಎರಡೂ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಹತ್ತು ಜಿಲ್ಲೆಗಳಲ್ಲಿ ಹೆಚ್ಚು ನಿಗಾ ವಹಿಸಬೇಕಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಹೇಳಿದ್ದಾರೆ.
ಅಲ್ಲದೇ ಆರ್ ಟಿಪಿಸಿಆರ್ ನೆಗೆಟೀವ್ ರಿಪೋರ್ಟ್ ಇಲ್ಲದ ಯಾರನ್ನೂ ಮಹಾರಾಷ್ಟ್ರ ಮತ್ತು ಕೇರಳದಿಂದ ಕರ್ನಾಟಕಕ್ಕೆ ಕಡ್ಡಾಯವಾಗಿ ಪ್ರವೇಶ ನೀಡದಂತೆ ತಾಂತ್ರಿಕ ಸಲಹಾ ಸಮಿತಿಯು ಸಲಹೆ ಮಾಡಿದೆ.ಈ ಸಂಬಂಧ ಗೃಹ ಇಲಾಖೆಯೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೋವಿಡ್ ಲಸಿಕೆ ತೆಗೆದುಕೊಳ್ಳಲು ಆರೋಗ್ಯ ಇಲಾಖೆಯ ಕೊರೊನಾ ವಾರಿಯರ್ಸ್ ಗಳು ಹಿಂಜರಿಯುತ್ತಿದ್ದಾರೆ.ಶೇ.50ರಷ್ಟು ಮಂದಿ ಮಾತ್ರ ಲಸಿಕೆ ತೆಗೆದುಕೊಂಡಿದ್ದಾರೆ. ಇದುವರೆಗೆ ಪ್ರಂಟ್ ಲೈನ್ ವಾರಿಯರ್ಸ್ ಗಳು ಹಿರಿಯ ಅಧಿಕಾರಿಗಳು ಲಸಿಕೆ ತೆಗೆದುಕೊಂಡು ಮಾದರಿಯಾಗಿದ್ದಾರೆ.ಹಾಗಾಗಿ ಯಾವುದೋ ವದಂತಿಗಳನ್ನು ನಂಬಿ ನೀವು ಬಲಿಪಶುಗಳಾಗಬೇಡಿ.ನೀವೇ ಲಸಿಕೆ ತೆಗೆದುಕೊಳ್ಳದೇ ಇದ್ದರೆ ಜನಸಾಮಾನ್ಯರ ಪಾಡೇನು ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ತಿಳಿ ಹೇಳಿದ್ರು.
ಇನ್ನೂ ಕೊರೊನಾ ಎರಡನೆ ಅಲೆ ಭೀತಿ ಎದುರಾಗಿದೆ. ಲಂಡನ್, ಬ್ರಜಿಲ್ ಮತ್ತು ದಕ್ಷಿಣ ಆಫ್ರಿಕಾದಿಂದ ರೂಪಾಂತರಿ ಕೊರೊನಾ ಬಂದಿದೆ.ಕರ್ನಾಟಕಕ್ಕೆ ಲಂಡನ್ ವೈರಸ್ ಬಂದಿತ್ತು.ಅದು ಸಮುದಾಯಕ್ಕೆ ಹರಡದಂತೆ ತಡೆಯಲು ಕರ್ನಾಟಕ ಯಶಸ್ವಿಯಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಬ್ರೆಜಿಲ್ಲ ಮತ್ತು ದಕ್ಷಿಣ ಆಫ್ರಿಕಾ ವೈರಸ್ ಬಂದಿದೆ.ಹಾಗಾಗಿ ನಾವು ಎಚ್ಚರ ವಹಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಜಮೀನಿಗೆ ನುಗ್ಗಿದ ಕಾಲುವೆ ನೀರು : ನೀರಿನಲ್ಲಿ ಸಿಕ್ಕಿ ಕುರಿ ಸಾವು
ಕಾರ್ಯಾ ಸಿದ್ದಿ ಆಂಜನೇಯಸ್ವಾಮಿ ನೆನೆದು ಈ ದಿನದ ರಾಶಿ ಫಲ ತಿಳಿಯಿರಿ….
ಇಲಾಖೆಗಳಲ್ಲಿನ ಎಲ್ಲ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನ ಬಳಕೆ ಕಡ್ಡಾಯ – ನಿತಿನ್ ಗಡ್ಕರಿ