ತಂದೆಯ ಮೂಡನಂಬಿಕೆಯಿಂದಾಗಿ ಜೀವ ಕಳೆದುಕೊಂಡ ಮಗಳು..!
ಚೆನ್ನೈ: ಆಧುನಿಕ ಯುಗದಲ್ಲೂ ಜನರಲ್ಲಿ ಮೂಡನಂಬಿಕೆಗಳು ಹಾಗೆ ಉಳಿದಿದೆ. ಇಂತಹ ಮೂಡನಂಬಿಕೆಗಳು ಕೆಲವೊಮ್ಮೆ ಎಂತಹ ಅನಾಹುತಗಳಿಗೆ ಕಾರಣವಾಗುತ್ತೆ ಎನ್ನುವುದಕ್ಕೆ ತಮಿಳುನಾಡಿನಲ್ಲಿ ನಡೆದಿರುವ ಈ ಘಟನೆಯು ಒಂದು ಉದಾಹರಣೆ. ಹೌದು 19 ವರ್ಷದ ಯುವತಿಯೊಬ್ಬಳು ಟೈಫಾಯ್ಡ್ ನಿಂದ ಬಳಲುತ್ತಿದ್ದಳು. ಆದ್ರೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಬದಲು ಆಕೆ ತಂದೆ ಅವಳನ್ನ ಮಂತ್ರವಾದಿ ಬಳಿ ಕರೆದೊಯ್ದಿದ್ದಾನೆ. ಇದರಿಂದಾಗಿ ಯುವತಿ ಸಾವನಪ್ಪಿರುವ ಘಟನೆ ರಾಮನಾಥಪುರಂ ನಡೆದಿದೆ.
ಥರಾಣಿ ಎಂಬ ಯುವತಿ 9 ವರ್ಷಗಳ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡು ತಂದೆಯ ಜೊತೆ ವಾಸವಾಗಿದ್ದಳು. ಆದರೆ ಆಕೆಗೆ ತಾಯಿಯ ನೆನಪು ಆಗಾಗ ಕಾಡುತ್ತಿತ್ತು. ಹೀಗೆ ಅಮ್ಮನ ನೆನಪಾದಾಗ ಆಕೆಯ ಸಮಾಧಿ ಬಳಿ ತೆರಳಿ ಸ್ವಲ್ಪ ಹೊತ್ತು ಕುಳಿತು ಬರುತ್ತಿದ್ದಳು. ಹೀಗೆ ಒಂದು ದಿನ ತಾಯಿಯ ಸಮಾಧಿ ಬಳಿ ಹೋಗಿ ಬಂದ ಬಳಿಕ ಥರಾಣಿ ಅನಾರೋಗ್ಯಕ್ಕೀಡಾಗಿದ್ದಳು. ಮಗಳ ಮೇಲೆ ತಾಯಿಯ ಭೂತ ಹಿಡಿದಿದೆ ಎಂಬ ಮೂಡನಂಬಿಕೆಯಿಂದ ತಂದೆ ಆಕೆಯನ್ನು ಮಂತ್ರವಾದಿ ಬಳಿಗೆ ಕರೆದುಕೊಂಡು ಹೋಗಿದ್ದಾರೆ.
ಇತ್ತ ಮಂತ್ರವಾದಿ ಥರಾಣಿಯನ್ನು ಒಂದು ಬಾಕ್ಸ್ ನಲ್ಲಿ ಕೂಡಿ ಹಾಕಿ ಹೊಗೆ ಹಾಕಿದ್ದಾನೆ. ಮೊದಲೇ ಹುಷಾರಿಲ್ಲದೇ ಇದ್ದಿದ್ದರಿಂದ ಹೊಗೆ ತಾಳಲಾರದೇ ಥರಾಣಿ ಪ್ರಜ್ಞೆ ತಪ್ಪಿದ್ದಾಳೆ. ಕೂಡಲೇ ಆಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಬಳಿಕ ಆಕೆಗೆ ಟೈಫಾಯ್ಡ್ ಇದೆ ಎಂದು ವೈದ್ಯರು ಹೇಳಿದ್ದಾರೆ.
ಗರ್ಭಿಣಿಯಾದರೂ ಸೆಕ್ಸ್ ಗೆ ಪೀಡಿಸುತ್ತಿದ್ದ ಪತಿಯ ಊಟದಲ್ಲಿ ವಿಷ ಬೆರೆಸಿ ಕೊಂದ ಪತ್ನಿ..!
ಇಷ್ಟಾದ್ರೂ ಆಸ್ಪತ್ರೆಯಲ್ಲಿ ಮಗಳನ್ನ ಚಿಕಿತ್ಸೆಗೆ ದಾಖಲಿಸಬೇಕಾಗಿದ್ದ ತಂದೆ ಇನ್ನೊಬ್ಬ ಮಂತ್ರವಾದಿ ಬಳಿ ಕರೆದುಕೊಂಡು ಹೋಗಿದ್ದಾನೆ. ಇತ್ತ ದಿನದಿಂದ ದಿನಕ್ಕೆ ಥರಾಣಿ ಸ್ಥಿತಿ ಬಿಗಾಡಯಿಸುತ್ತಲೇ ಹೋಗಿದೆ. ಬಳಿಕ ಆಕೆ ಮೃತಪಟ್ಟಿದ್ದು, ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
`ಕನ್ನಡ ಗೆಲ್ಲಬೇಕಾದರೆ ಹಿಂದುತ್ವ ಗೆಲ್ಲಬೇಕು’:ತೇಜಸ್ವಿ ಸೂರ್ಯ