`ಕನ್ನಡ ಗೆಲ್ಲಬೇಕಾದರೆ ಹಿಂದುತ್ವ ಗೆಲ್ಲಬೇಕು’:ತೇಜಸ್ವಿ ಸೂರ್ಯ
ತಮಿಳುನಾಡು : ಕನ್ನಡ ಗೆಲ್ಲಬೇಕಾದರೆ ಹಿಂದುತ್ವ ಗೆಲ್ಲಬೇಕು ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ವಾದಿಸಿದ್ದಾರೆ.
ಬಿಜೆವೈಎಂ ರಾಜ್ಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ರು.
ಅಲ್ಲದೇ ಡಿಎಂಕೆ ಪಕ್ಷವನ್ನ “ಹಿಂದೂ ವಿರೋಧಿ” ಎಂದು ಕರೆದು ಎಂಕೆ ಸ್ಟಾಲಿನ್ ಅವರ ಪಕ್ಷವನ್ನು ಸೋಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ತಮ್ಮ ಭಾಷಣದಲ್ಲಿ ಬಿಜೆಪಿ ಮಾತ್ರ ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತದೆ ಮತ್ತು ಅವುಗಳ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದ ಸೂರ್ಯ, ಡಿಎಂಕೆ ಪಕ್ಷ ಮತ್ತು ಅದರ ಸಿದ್ಧಾಂತಗಳು ಹಿಂದುತ್ವ ವಿರೋಧಿಯಾಗಿವೆ ಎಂದು ಆರೋಪಿಸಿದರು.
ಇನ್ನು ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವ ಪವಿತ್ರ ಭೂಮಿ ಇದಾಗಿದೆ.
ತಮಿಳುನಾಡಿನ ಪ್ರತಿ ಜಾಗ ಸಹ ಪವಿತ್ರವಾದುದು, ಆದರೆ ಡಿಎಂಕೆ ಹಿಂದೂ ವಿರೋಧಿಯಾಗಿರುವುದರಿಂದ ನಾವು ಅದನ್ನು ಸೋಲಿಸಬೇಕು.
ತಮಿಳು ಭಾಷೆ ಬದುಕಬೇಕಾದರೆ ಹಿಂದುತ್ವ ಗೆಲ್ಲಬೇಕು. ಕನ್ನಡ ಗೆಲ್ಲಬೇಕಾದರೆ ಹಿಂದುತ್ವ ಗೆಲ್ಲಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.