BIGG BOSS 8: ಪ್ರೇಕ್ಷಕರನ್ನು ಕನ್ಪ್ಯೂಸ್ ಮಾಡ್ತಿದ್ದಾರಾ ಬಿಗ್ ಬಾಸ್..! ಯಾರು ಎಲಿಮೇಟ್ ಆಗಲ್ವಾ..!
ಬಿಗ್ ಬಾಸ್ ನ ಮೊದಲನೇ ವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕಿಚ್ಚ ಸುದೀಪ್ ಮನೆ ಮಂದಿ ಜೊತೆಗೆ ಪಂಚಾಯತಿ ನಡೆಸಿ, ಸ್ಪರ್ಧಿಗಳ ಕಾಲೆಳೆದು, ಬೈದು ಬುದ್ದಿವಾದ ಹೇಳಿದ್ದೂ ಆಗಿದೆ. ಆದ್ರೆ ಎಲಿಮೇಷನ್ ಕುತೂಹಲವನ್ನ ಮಾತ್ರ ಇಂದಿಗೂ ಮುಂದುವರೆಸಿದ್ಧಾರೆ ಬಿಗ್ ಬಾಸ್.
ಹೌದು 8 ರ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಎಂದಿನಂತೆ ಮನೆಯ ಸದಸ್ಯರ ಜೊತೆಗೆ ಮಾತುಕತೆ ನಡೆಸುತ್ತಾ ಪ್ರೇಕ್ಷಕರನ್ನೂ ರಂಜಿಸಿದ್ರು. ಇನ್ನೂ ಸೇಫ್ ಆದ ಸ್ಪರ್ಧಿಗಳ ಹೆಸರುಗಳನ್ನೂ ಹೇಳಿ ಮನೆಯಿಂದ ಮೊದಲ ವಾರವೇ ಆಚೆ ಹೋಗ ಸ್ಪರ್ಧಿ ಯಾರು ಎಂಬ ಕಾತರತೆ ಕಾಯ್ದಿರಿಸಿದ್ರು.
ಪ್ರಭಾಸ್ ಗೂ ಮುನ್ನ ‘ರಾಖಿ ಭಾಯ್’ ಮುಂದೆ ‘ಸಲಾರ್’ ಆಫರ್ ಇಟ್ಟಿದ್ರಾ ಪ್ರಶಾಂತ್ ನೀಲ್..!
ಇನ್ನೂ ಶುಭಾ ಪುಂಜಾ ಹಾಗೂ ಮನೆಯ ಕಿರಿಯ ಸದಸ್ಯ ವಿಶ್ವನಾಥ್ ಸದ್ಯ ಸೇಫ್ ಆಗಿದ್ದಾರೆ. ಇನ್ನೂ ಉಳಿದವರು ಧನುಶ್ರೀ, ರಘು ಗೌಡ, ನಿರ್ಮಲಾ ಈ ಮೂವರಲ್ಲಿ ಸೇಫ್ ಆಗುವ ಆ ಇಬ್ಬರು ಯಾರು ಮನೆಯಿಂದ ಆಚೆ ಹೋಗೋರು ಯಾರು ಎನ್ನೋ ಕುತೂಹಲ ಇದೆ.
ಅಸಲಿಗೆ ಮನೆಯಿಂದ ಆಚೆ ಯಾರೂ ಹೋಗೋದೆ ಇಲ್ವಾ..!
ಆದ್ರೆ ಬಿಗ್ ಬಾಸ್ ಟ್ವಿಸ್ಟ್ ಟ್ವಿಸ್ಟ್ ಗಳನ್ನ ಕೊಡುತ್ತಿರೋದು ನೋಡಿದ್ರೆ ಈ ವಾರ ಯಾರೂ ಕೂಡ ಎಲಿಮೇಟ್ ಆಗೋದೇ ಇಲ್ಲ ಎನ್ನಿಸುತ್ತಿದೆ. ಹೌದು ಮೊದಲನೇ ದಿನ ಡೇಂಜರ್ ಝೋನ್ ಗೆ ಹೋದವರು 2ನೇ ದಿನ ಸೇಫ್ ಆದ್ರೂ, 3ನೇ ದಿನ ಮತ್ತೊಬ್ಬರು ಸೇಫ್ ಆದ್ರೂ. ಹೀಗೆ ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ, ನಿಧಿ ಸೇಫ್ ಆಗಿದ್ದರು. ಆದ್ರೆ ದಿನಕ್ಕೊಬ್ಬರು ನಾಮಿನೇಟ್ ಸ್ಪರ್ಧಿಗಳ ಹೆಸರುಗಳು ಬದಲಾಗ್ತಲೇ ಇದ್ರೆ ಜನ ಕನ್ಪೂಸ್ ಆಗಲ್ವಾ.. ಯಾರಿಗೆ ಜನ ವೋಟ್ ಮಾಡ್ತಾರೆ. ಯಾರನ್ನ ಬಚಾವ್ ಮಾಡ್ತಾರೆ. ಯಾರಿಗೆ ಗೇಟ್ ಪಾಸ್ ಕೊಡ್ತಾರೆ. ಇದೆಲ್ಲಾ ಗೊಂದಲಗಳ ನಡುವೆ ಜನರು ಕನ್ಫೂಸ್ ಆಗ್ತಾರೆ. ಇದು ಬಿಗ್ ಬಾಸ್ ಗೂ ಗೊತ್ತೇ ಇರುತ್ತೆ. ಇದೆಲ್ಲಾ ನೋಡ್ತಿದ್ರೆ ಈ ಬಾರಿ ಯಾರನ್ನೂ ಎಲಿಮಿನೇಟ್ ಮಾಡೋ ಪ್ಲಾನ್ ಅಲ್ಲೇ ಬಿಗ್ ಬಾಸ್ ಇಲ್ವಾ ಅನ್ನಿಸುತ್ತಿದೆ.
ಮತ್ತಷ್ಟು ಹ್ಯಾಂಡ್ಸಮ್ ಲುಕ್ ನಲ್ಲಿ ಧ್ರುವ ದರ್ಶನ : ಹೊಸ ಗೆಟಪ್ ಗೆ ಫ್ಯಾನ್ಸ್ ಫಿಧಾ..!








