ADVERTISEMENT
Wednesday, August 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Kalyana karnataka

ಹಂಪಿಯಲ್ಲಿ ರೈಲು ಮಾದರಿಯ ವಿಶೇಷ ವಾಹನಗಳ ಸಂಚಾರ ಆರಂಭ..!

Namratha Rao by Namratha Rao
March 10, 2021
in Kalyana karnataka, Newsbeat, ಕಲ್ಯಾಣ ಕರ್ನಾಟಕ
Share on FacebookShare on TwitterShare on WhatsappShare on Telegram

Related posts

saakshatv.com/darshan-puttannaiah-inaugurates-tara-english-language-lab-mandya

ಜಕ್ಕನಹಳ್ಳಿಯಲ್ಲಿ ‘ತಾರಾ ಇಂಗ್ಲಿಷ್ ಭಾಷಾ ಪ್ರಯೋಗಾಲಯ’ ಉದ್ಘಾಟನೆ

August 26, 2026
saakshatv.com/jio-world-convention-centre-launches-conference-ambassador-program-mumbai

ಮುಂಬೈಗೆ ಜಾಗತಿಕ ಸಮ್ಮೇಳನಗಳನ್ನು ತರಲು ‘ಕಾನ್ಫರೆನ್ಸ್ ಅಂಬಾಸಿಡರ್’ ಕಾರ್ಯಕ್ರಮ

August 25, 2026

ಹಂಪಿಯಲ್ಲಿ ರೈಲು ಮಾದರಿಯ ವಿಶೇಷ ವಾಹನಗಳ ಸಂಚಾರ ಆರಂಭ..!

ವಿಜಯನಗರ : ವಿಶ್ವ ವಿಖ್ಯಾತ ಹಂಪಿ ಕಲೆ ಸಂಸ್ಕೃತಿಗೆ ಪ್ರವಾಸಿಗರಿಗೆ ಜನಪ್ರಿಯತೆ ಪಡೆದುಕೊಂಡಿದೆ. ಇದೀಗ  ಇಲ್ಲಿನ ವಿಶೇಷತೆಗಳು ಮತ್ತಷ್ಟು ಮೇರು ಪಡೆದುಕೊಂಡಿವೆ. ಕಾರಣ ವಿಶ್ವ ವಿಖ್ಯಾತ ಹಂಪಿಯಲ್ಲಿ ರೈಲು ಮಾದರಿಯವಿಶೇಷ ವಾಹನಗಳು ಸಂಚಾರ ಆರಂಭಿಸಿವೆ. ಒಂದು ಡೀಸೆಲ್‌ ಚಾಲಿತ, ಎಲೆಕ್ಟ್ರಿಕ್‌ ಹಾಗೂ ಬ್ಯಾಟರಿಚಾಲಿತ ವಾಹನಗಳು ಇವಾಗಿದ್ದು, ಈ 3 ವಾಹನಗಳನ್ನ ರೈಲು ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗಿುವುದು ವಿಶೇಷವಾಗಿದೆ.

ಬೆಂಗಳೂರಿನ ಪ್ರಿವಿಲೆನ್ಸ್‌ ಕಂಪನಿ ಈ ವಾಹನಗಳನ್ನ ಸಿದ್ಧಪಡಿಸಿದ್ದು, ಇವು ಮತ್ತಷ್ಟು ಪ್ರವಾಸಿಗರನ್ನ ಆಕರ್ಶಿಸುತ್ತಿವೆ.  ಹಂಪಿ ಆನ್‌ ವೀಲ್ಸ್‌ ಎಂದು ಈ ವಾಹನಗಳಿಗೆ ಹೆಸರಿಡಲಾಗಿದೆ. ಈ ವಾಹನಗಳು ಹಂಪಿ ಪರಿಸರದಲ್ಲಿ ನಿನ್ನೆ ಪ್ರಾಯೋಗಿಕವಾಗಿ ಓಡಾಟ ಆರಂಭಿಸಿವೆ.hampi saaksha tv.com

ಎಂಜಿನ್‌ ಒಳಗೊಂಡಂತೆ ಒಟ್ಟು ಎರಡು ಬೋಗಿಗಳನ್ನು ಒಳಗೊಂಡ ಈ ವಾಹನದಲ್ಲಿ ಏಕಕಾಲದಲ್ಲಿ ಒಟ್ಟು 30 ಜನ ಪ್ರಯಾಣಿಸಬಹುದಾಗಿದೆ. ವಾಹನಗಳ ಪ್ರಾಯೋಗಿಕ ಓಡಾಟ ಪೂರ್ಣಗೊಂಡ ನಂತರ ವಾಣಿಜ್ಯ ಸಂಚಾರ ಶುರುವಾಗಲಿದೆ. ಈ ವಾಹನಗಳು ಪ್ರವಾಸಿಗರಿಗೆ ರಾಣಿ ಸ್ನಾನಗೃಹ, ವಿರೂಪಾಕ್ಷೇಶ್ವರ ದೇವಸ್ಥಾನ, ಮಹಾನವಮಿ ದಿಬ್ಬ, ಬಸವಣ್ಣ ಮಂಟಪ, ಉಗ್ರ ನರಸಿಂಹ,  ಆನೆಸಾಲು ಮಂಟಪ, ನೆಲಸ್ತರ ಶಿವ ದೇವಾಲಯ, ಸಾಸಿವೆಕಾಳು, ಕಡಲೆಕಾಳು ಗಣಪ ಸ್ಮಾರಕ ಸೇರಿದಂತೆ ಇನ್ನಿತರ ಪ್ರಮುಖ ಸ್ಮಾರಕಗಳಿಗೆ ಸಂಪರ್ಕ ಕಲ್ಪಿಸಲಿವೆ.

ಕಮಲಾಪುರದ ವಸ್ತು ಸಂಗ್ರಹಾಲಯ ಅಥವಾ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಮಯೂರ ಭುವನೇಶ್ವರಿ ಹೋಟೆಲ್‌ ನಿಂದ ಈ ವಾಹನಗಳ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಇನ್ನೂ ಈ ವಾಹನಗಳಲ್ಲಿ ಸಂಚಾರಕ್ಕೆ ಒಬ್ಬರಿಗೆ ತಲಾ 300 ರೂಪಾಯಿಗಳ ಪ್ರಯಾಣ ದರವನ್ನ ನಿಗದಿಪಡಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.hampi saaksha tv.com

ಇಸ್ಲಾಂ ಧರ್ಮ ನಂಬದ ಕಾರಣ ಮದರ್ ತೆರೇಸಾ ನರಕಕ್ಕೆ ಹೋಗುತ್ತಾರೆ – ಝಾಕೀರ್ ನಾಯ್ಕ್ ವಿವಾದಾತ್ಮಕ ಹೇಳಿಕೆ

ಯೂಟ್ಯೂಬ್ ನಲ್ಲಿ ಮತ್ತೆ ಮಂಗ್ಲಿ ಹವಾ…! ಹೊಸ ಹಾಡು ಟ್ರೆಂಡಿಂಗ್ ನಲ್ಲಿ..!

RSS ನಾಯಕ ಹಾಗೂ ಬಿಜೆಪಿ ಕೇಂದ್ರ ಸಚಿವರ ಮಗಳು ಬಾಲಿವುಡ್ ಗೆ ನಾಯಕಿಯಾಗಿ ಎಂಟ್ರಿ..!

ರಾಮ್ ಚರಣ್ – ಶಂಕರ್ ಸಿನಿಮಾದಲ್ಲಿ ರಶ್ಮಿಕಾಗೆ ಗೇಟ್ ಪಾಸ್..?

ಅಲ್ಲು ಅರ್ಜುನ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಕಿಂಗ್ ಮೇಕರ್ ಪ್ರಶಾಂತ್ ನೀಲ್..!

ಸುದ್ದಿಗೋಷ್ಠಿಯಲ್ಲಿ `ಸಾಹುಕಾರ್ ರಾಜಕೀಯ ವೈರಾಗ್ಯದ ಮಾತು’

ಮಾಜಿ ಸಂಸದ ವಿರೂಪಾಕ್ಷಪ್ಪ ಬಿಜೆಪಿಗೆ ಸೇರ್ಪಡೆ

Tags: Hampitourismtrainvehicles
ShareTweetSendShare
Join us on:

Related Posts

saakshatv.com/darshan-puttannaiah-inaugurates-tara-english-language-lab-mandya

ಜಕ್ಕನಹಳ್ಳಿಯಲ್ಲಿ ‘ತಾರಾ ಇಂಗ್ಲಿಷ್ ಭಾಷಾ ಪ್ರಯೋಗಾಲಯ’ ಉದ್ಘಾಟನೆ

by admin
August 26, 2026
0

AI ತಂತ್ರಜ್ಞಾನದೊಂದಿಗೆ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಹೊಸ ಸ್ಪರ್ಶ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಾರ್ಗದರ್ಶನ ಪುಟ್ಟಣ್ಣಯ್ಯ ಫೌಂಡೇಶನ್‌, ಲರ್ನಿಂಗ್‌ ಮ್ಯಾಟರ್ಸ್‌ ಮತ್ತು ರೋಟರಿ ಕ್ಲಬ್ ಆಫ್...

saakshatv.com/jio-world-convention-centre-launches-conference-ambassador-program-mumbai

ಮುಂಬೈಗೆ ಜಾಗತಿಕ ಸಮ್ಮೇಳನಗಳನ್ನು ತರಲು ‘ಕಾನ್ಫರೆನ್ಸ್ ಅಂಬಾಸಿಡರ್’ ಕಾರ್ಯಕ್ರಮ

by admin
August 25, 2026
0

ಮುಂಬೈ, : ಮುಂಬೈಯನ್ನು ಜಾಗತಿಕ ಮಟ್ಟದ ಸಮ್ಮೇಳನಗಳು ಹಾಗೂ ಬಿಸಿನೆಸ್‌ ಈವೆಂಟ್‌ಗಳ ಪ್ರಮುಖ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ (JWCC) ‘ಕಾನ್ಫರೆನ್ಸ್ ಅಂಬಾಸಿಡರ್...

saakshatv.com/dun-and-bradstreet-city-vitality-index-report-emerging-cities-growth

ಮೆಟ್ರೋ ನಗರಗಳನ್ನು ಹಿಂದಿಕ್ಕಿ ಬೆಳೆಯುತ್ತಿವೆ ಸಣ್ಣ ನಗರಗಳು: ‘ಡನ್ & ಬ್ರಾಡ್‌ಸ್ಟ್ರೀಟ್’ ವರದಿಯಲ್ಲಿ ಅಚ್ಚರಿಯ ಮಾಹಿತಿ!

by admin
August 25, 2026
0

ಬೆಂಗಳೂರು: ಭಾರತದ ಆರ್ಥಿಕ ಬೆಳವಣಿಗೆ ಎಂದರೆ ಕೇವಲ ಮುಂಬೈ, ದೆಹಲಿ, ಬೆಂಗಳೂರಿನಂತಹ ದೊಡ್ಡ ಮೆಟ್ರೋ ನಗರಗಳು ಮಾತ್ರ ಅಂತ ನೀವು ಅಂದುಕೊಂಡಿದ್ದರೆ, ಆ ಲೆಕ್ಕಾಚಾರವನ್ನು ಬದಲಿಸಿಕೊಳ್ಳುವ ಸಮಯ...

ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಮೆರಿಕನ್ ಎಕ್ಸ್‌ಪ್ರೆಸ್ ಮತ್ತು ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಸಹಭಾಗಿತ್ವ

ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಮೆರಿಕನ್ ಎಕ್ಸ್‌ಪ್ರೆಸ್ ಮತ್ತು ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಸಹಭಾಗಿತ್ವ

by admin
August 25, 2026
0

 ಅಮೆರಿಕನ್ ಎಕ್ಸ್‌ಪ್ರೆಸ್ ಬ್ಯಾಂಕಿಂಗ್ ಕಾರ್ಪ್ ಮತ್ತು ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್  ( ಎನ್‌ಎಂಎಸಿಸಿ) ಕಲೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಹಭಾಗಿತ್ವವನ್ನು ಘೋಷಿಸಿವೆ. ಇದು ಅರ್ಹ ಅಮೆರಿಕನ್ ಎಕ್ಸ್‌ಪ್ರೆಸ್ ಇಂಡಿಯಾ ಕಾರ್ಡ್ ಸದಸ್ಯರಿಗೆ ಎನ್‌ಎಂಎಸಿಸಿಯಲ್ಲಿ ಕಲೆ, ಮನರಂಜನೆ ಮತ್ತು ಆತಿಥ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ವಿಶೇಷ ಸಾಂಸ್ಕೃತಿಕ ಅನುಭವವನ್ನು ನೀಡಲಿದೆ.  ಅಮೆರಿಕನ್ ಎಕ್ಸ್‌ಪ್ರೆಸ್ 'ಆದ್ಯತೆಯ ಪೇಮೆಂಟ್ ಪಾಲುದಾರರಾಗಿ'  ಅರ್ಹ ಕಾರ್ಡ್ ಸದಸ್ಯರಿಗೆ ಎನ್‌ಎಂಎಸಿಸಿಯಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಲಿದೆ. ಈ ಪಾಲುದಾರಿಕೆಯು ಭಾರತೀಯ ಮತ್ತು ಅಂತರರಾಷ್ಟ್ರೀಯ ಕಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಎನ್‌ಎಂಎಸಿಸಿಯ ಬದ್ಧತೆಯನ್ನು ಎತ್ತಿಹಿಡಿಯಲಿದೆ. ಮುಂಗಡ ಟಿಕೆಟ್ ಮಾರಾಟ (ಪ್ರಿ-ಸೇಲ್), ಆಯ್ದ ಪ್ರದರ್ಶನಗಳಿಗೆ ಉಚಿತ ಪ್ರವೇಶ, ವಿಶೇಷ ಡೈನಿಂಗ್ ಸೌಲಭ್ಯಗಳು ಮತ್ತು ಪ್ರೀಮಿಯಂ ಸೇವೆಗಳು ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ.  ಅಮೆರಿಕನ್ ಎಕ್ಸ್‌ಪ್ರೆಸ್ ಇಂಡಿಯಾದ ಸಿಇಒ ಮತ್ತು ಕಂಟ್ರಿ ಮ್ಯಾನೇಜರ್ ಸಂಜಯ್ ಖನ್ನಾ ಮಾತನಾಡಿ: “ಭಾರತವು ಕಲೆ ಮತ್ತು ಸಂಸ್ಕೃತಿಯ ಅಸಾಧಾರಣ ಪರಂಪರೆಯನ್ನು ಹೊಂದಿದೆ. ಎನ್‌ಎಂಎಸಿಸಿ ಈ ಪರಂಪರೆಯನ್ನು ಆಚರಿಸುವ ಮತ್ತು ಜಾಗತಿಕ ಮಟ್ಟದ ಅದ್ಭುತ ಅನುಭವಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಅಸಾಧಾರಣ ವೇದಿಕೆಯನ್ನು ಸೃಷ್ಟಿಸಿದೆ. ನಮ್ಮ ಕಾರ್ಡ್ ಸದಸ್ಯರಿಗೆ ಅತ್ಯಮೂಲ್ಯ ಮತ್ತು ವಿಶಿಷ್ಟ ಅನುಭವಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದರು.  ಜಿಯೋ ವರ್ಲ್ಡ್ ಸೆಂಟರ್‌ನ ಸಿಇಒ ದೇವೇಂದ್ರ ಬರ್ಮಾ ತಿಳಿಸುತ್ತಾ: “ ಎನ್‌ಎಂಎಸಿಸಿಯಲ್ಲಿ  ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಪರಿಚಯಿಸುವುದು ಮತ್ತು ಜಗತ್ತಿನ ಶ್ರೇಷ್ಠತೆಯನ್ನು ಭಾರತಕ್ಕೆ ತರುವುದು ನಮ್ಮ ದೃಷ್ಟಿಯಾಗಿದೆ. ಸಂಸ್ಕೃತಿಯ ಮೂಲಕ ಜನರನ್ನು ಬೆಸೆಯುವ ನಮ್ಮ ನಂಬಿಕೆಯೇ ಈ ಸಹಯೋಗಕ್ಕೆ ಮೂಲ ಕಾರಣವಾಗಿದೆ” ಎಂದರು.  ಅಮೆರಿಕನ್ ಎಕ್ಸ್‌ಪ್ರೆಸ್ ಬಗ್ಗೆ: 1850 ರಲ್ಲಿ ಸ್ಥಾಪನೆಯಾಗಿರುವ ಅಮೆರಿಕನ್ ಎಕ್ಸ್‌ಪ್ರೆಸ್  ಜಾಗತಿಕ ಪಾವತಿಗಳು ಮತ್ತು ಪ್ರೀಮಿಯಂ ಲೈಫ್‌ಸ್ಟೈಲ್ ಬ್ರ್ಯಾಂಡ್ ಆಗಿದೆ. ಇದು ಗ್ರಾಹಕರ ಜೀವನವನ್ನು ಸಮೃದ್ಧಗೊಳಿಸಲು ಮತ್ತು ವ್ಯಾಪಾರವನ್ನು ಯಶಸ್ವಿಗೊಳಿಸಲು ವಿಶ್ವಾಸಾರ್ಹ ಸೇವೆಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗೆ :americanexpress.com, americanexpress.com/en-us/newsroom/, and  ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್  ಬಗ್ಗೆ: ಇದು ಮುಂಬಯಿನ ಬಾಂದ್ರಾ ಕುರ್ಲಾ ಸಂಕೀರ್ಣದ ಹೃದಯಭಾಗದಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿರುವ, ಕಲಾ ಕ್ಷೇತ್ರದಲ್ಲೊಂದು ಅತ್ಯಂತ ವಿಶಿಷ್ಟವಾದ ಕೇಂದ್ರವಾಗಿದೆ.

saakshatv.com/53-year-old-injured-elephant-joy-moti-airlifted-to-vantara-jamnagar

ಪ್ರವಾಹದಲ್ಲಿ ಗಂಭೀರವಾಗಿ ಗಾಯಗೊಂಡ 53 ವರ್ಷದ ಆನೆ ಜೋಯ್ ಮೋತಿ ವಂತಾರಾಗೆ ಏರ್‌ಲಿಫ್ಟ್!

by admin
August 25, 2026
0

ಜಾಮ್‌ನಗರ- ಅಸ್ಸಾಂ ಮತ್ತು ನಾಗಾಲ್ಯಾಂಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹದ ಅಲೆಗಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ 53 ವರ್ಷ ವಯಸ್ಸಿನ 'ಜೋಯ್‌ ಮೋತಿ' ಎಂಬ ಹೆಣ್ಣಾನೆಗೆ ವಿಶೇಷ ವೈದ್ಯಕೀಯ ಚಿಕಿತ್ಸೆ ನೀಡಲು, ಗುಜರಾತ್‌ನ ಜಾಮ್‌ನಗರದಲ್ಲಿರುವ ಪ್ರಸಿದ್ಧ 'ವಂತಾರಾ' (Vantara) ಆಸ್ಪತ್ರೆಗೆ ವಿಮಾನದ ಮೂಲಕ (Air transport) ಕರೆತರಲಾಗುತ್ತಿದೆ. ಭಾರತದ ಇತಿಹಾಸದಲ್ಲೇ ವನ್ಯಜೀವಿ ಚಿಕಿತ್ಸೆಗಾಗಿ ಆನೆಯೊಂದನ್ನು ವಿಮಾನದಲ್ಲಿ ಕರೆದೊಯ್ಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ.  ಕಳೆದ ಜುಲೈ ತಿಂಗಳ ಎರಡನೇ ವಾರದಲ್ಲಿ ನಾಗಾಲ್ಯಾಂಡ್‌ನಲ್ಲಿ ಸಂಭವಿಸಿದ ಪ್ರವಾಹದಲ್ಲಿ ಜೋಯ್‌ ಮೋತಿ ಆನೆ ನೀರಿನಲ್ಲಿ ಕೊಚ್ಚಿಹೋಗಿತ್ತು. ಸ್ಥಳೀಯ ಸಾರ್ವಜನಿಕರು ಮತ್ತು ಸರಕಾರಿ ಸಂಸ್ಥೆಗಳ ನೆರವಿನಿಂದ ಅದನ್ನು ಸುರಕ್ಷಿತವಾಗಿ ರಕ್ಷಿಸಲಾಗಿತ್ತು. ಆದರೆ ಈ ದುರ್ಘಟನೆಯಲ್ಲಿ ಆನೆಗೆ ಮೈಯೆಲ್ಲಾ ಗಂಭೀರ ಗಾಯಗಳಾಗಿತ್ತು.  ಆನೆಯ ಹಣೆಯ ಭಾಗ, ಬಲ ಕಿವಿ, ಬಾಲದ ಮೇಲ್ಭಾಗ, ಎಡ ತೊಡೆ ಮತ್ತು ಹೊಟ್ಟೆಯ ಭಾಗದಲ್ಲಿ ತೀವ್ರ ಸ್ವರೂಪದ ಗಾಯಗಳಾಗಿವೆ. ಅದರಲ್ಲೂ ಜನನಾಂಗದ ಸುತ್ತ ಆಳವಾದ ಗಾಯವಾಗಿ ಹುಳುಗಳು ಬಿದ್ದಿದ್ದವು.  ಪ್ರವಾಹದ ಹೊಡೆತದಿಂದ ಆನೆಯ ಬಲ ಕಣ್ಣು ಸಂಪೂರ್ಣವಾಗಿ ಹಾನಿಗೊಂಡಿದ್ದು, ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದೆ. ಅಲ್ಲದೆ ಕಣ್ಣಿನಿಂದ ಸತತವಾಗಿ ನೀರು ಬರುತ್ತಿದೆ.  ಮರ ಸಾಗಾಣಿಕೆ  ಕೆಲಸದ ಸಮಯದಲ್ಲಾದ ಕಾಡಿನ ಅಪಘಾತದಿಂದಾಗಿ ಹಿಂದೆ ಎಡ ಹಿಂದಿನ ಕಾಲಿಗೆ ಮೂಳೆ ಮುರಿತವಾಗಿತ್ತು. ಇದರಿಂದಾಗಿ ಆನೆಗೆ ಸಾಮಾನ್ಯ ರೀತಿಯಲ್ಲಿ ನಡೆಯಲು, ಆಹಾರ ಹಾಗೂ ನೀರನ್ನು ಹುಡುಕಿಕೊಳ್ಳಲು ಬಹಳ ಕಷ್ಟವಾಗುತ್ತಿತ್ತು.  ವೈದ್ಯಕೀಯ ಕಾರಣಗಳಿಗಾಗಿ ವಿಮಾನದ ಮೂಲಕ ರಕ್ಷಣೆ ರಕ್ಷಣೆಯ ಬಳಿಕ ಸ್ಥಳೀಯ ಮಟ್ಟದಲ್ಲಿ ಪ್ರಥಮ ಚಿಕಿತ್ಸೆ, ಡ್ರೆಸ್ಸಿಂಗ್, ನೋವು ನಿವಾರಕಗಳು ಮತ್ತು ಪೌಷ್ಟಿಕ ಸತ್ವಗಳನ್ನು ನೀಡಲಾಗಿತ್ತು. ಆದರೆ ಆನೆಯ ವಯಸ್ಸು, ಗಾಯಗಳ ತೀವ್ರತೆ ಮತ್ತು ಓಡಾಡಲು ಇರುವ ಸಮಸ್ಯೆಯನ್ನು ಗಮನಿಸಿದರೆ, ಸಾಂಪ್ರದಾಯಿಕ ರಸ್ತೆ ಮಾರ್ಗದ ಮೂಲಕ ದೂರದ ಪ್ರಯಾಣ ಮಾಡುವುದು ಅದರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀಳುವ ಸಾಧ್ಯತೆಯಿತ್ತು.  ಆದ್ದರಿಂದ, ಪ್ರಯಾಣದ ಅವಧಿಯನ್ನು ಕನಿಷ್ಠಗೊಳಿಸಲು ಮತ್ತು ಆನೆಗೆ ಯಾವುದೇ ದೈಹಿಕ ಒತ್ತಡ ಉಂಟಾಗದಂತೆ ತಡೆಯಲು ಅತ್ಯಂತ ಎಚ್ಚರಿಕೆಯಿಂದ ವಿಮಾನದ ಮೂಲಕ (Airlift) ಜಾಮ್‌ನಗರಕ್ಕೆ ಕರೆತರಲು ನಿರ್ಧರಿಸಲಾಯಿತು. ವಂತಾರಾ ತಲುಪಿದ ತಕ್ಷಣವೇ ಜೋಯ್‌ ಮೋತಿಗೆ ತಜ್ಞ ವೈದ್ಯರಿಂದ ಸಮಗ್ರ ಆರೋಗ್ಯ ತಪಾಸಣೆ ನಡೆಸಿ, ವಿಶೇಷ ಚಿಕಿತ್ಸೆ ಹಾಗೂ ಪೌಷ್ಟಿಕಾಂಶದ ಆರೈಕೆ ನೀಡಲಾಗುತ್ತದೆ.  ಜೋಯ್‌ ಮೋತಿಯ ಈ ಘಟನೆಯು ವನ್ಯಜೀವಿ ತುರ್ತುಪರಿಹಾರ ಕೇಂದ್ರಗಳು ಸ್ಥಳೀಯವಾಗಿ ಎಷ್ಟು ಅಗತ್ಯ ಎಂಬುದನ್ನು ಎತ್ತಿ ತೋರಿಸಿದೆ. ಪ್ರವಾಹ, ಮಾನವ-ವನ್ಯಜೀವಿ ಸಂಘರ್ಷ ಅಥವಾ ಇತರೆ ಆರೋಗ್ಯ ತುರ್ತು ಸಂದರ್ಭಗಳಲ್ಲಿ ವನ್ಯಜೀವಿಗಳಿಗೆ ತಕ್ಷಣದ ಚಿಕಿತ್ಸೆ ಸಿಗುವಂತಾಗಲು, ಅಸ್ಸಾಂನಲ್ಲಿ ಮೂರು ಪ್ರತ್ಯೇಕ ವನ್ಯಜೀವಿ ವೈದ್ಯಕೀಯ ಆರೈಕೆ ಕೇಂದ್ರಗಳನ್ನು (ಅಸ್ಸಾಂ ಅರಣ್ಯ ಇಲಾಖೆಯಡಿ ಸಂಪೂರ್ಣ ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸುವ) ಸ್ಥಾಪಿಸಲು ವಂತಾರಾ ಪ್ರಸ್ತಾವನೆ ಸಲ್ಲಿಸಿದೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳಿಗೆ ದೂರದ ಪ್ರಯಾಣದ ಅವಶ್ಯಕತೆ ಇಲ್ಲದಂತೆ ಸ್ಥಳೀಯವಾಗಿ ಉನ್ನತ ಮಟ್ಟದ ಚಿಕಿತ್ಸೆ ದೊರೆಯುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.  ಇದು ಜೋಯ್‌ ಮೋತಿಯ ಯಾವುದೇ ಶಾಶ್ವತ ಸ್ಥಳಾಂತರವಲ್ಲ; ಕೇವಲ ಜೀವ ಉಳಿಸುವ ತುರ್ತು ಚಿಕಿತ್ಸೆಗಾಗಿ ಮಾತ್ರ ಮಾಡಲಾಗಿರುವ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಚಿಕಿತ್ಸೆಯ ಬಳಿಕ ಜೋಯ್‌ ಮೋತಿ ಸುರಕ್ಷಿತ ಜೀವನ ನಡೆಸಲು ವಂತಾರಾದಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram