ಅಮೆರಿಕನ್ ಎಕ್ಸ್‌ಪ್ರೆಸ್ ಬ್ಯಾಂಕಿಂಗ್ ಕಾರ್ಪ್ ಮತ್ತು ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ( ಎನ್‌ಎಂಎಸಿಸಿ) ಕಲೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಹಭಾಗಿತ್ವವನ್ನು ಘೋಷಿಸಿವೆ. ಇದು ಅರ್ಹ ಅಮೆರಿಕನ್ ಎಕ್ಸ್‌ಪ್ರೆಸ್ ಇಂಡಿಯಾ ಕಾರ್ಡ್ ಸದಸ್ಯರಿಗೆ ಎನ್‌ಎಂಎಸಿಸಿಯಲ್ಲಿ ಕಲೆ, ಮನರಂಜನೆ ಮತ್ತು ಆತಿಥ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ವಿಶೇಷ ಸಾಂಸ್ಕೃತಿಕ ಅನುಭವವನ್ನು ನೀಡಲಿದೆ.
ಅಮೆರಿಕನ್ ಎಕ್ಸ್‌ಪ್ರೆಸ್ ‘ಆದ್ಯತೆಯ ಪೇಮೆಂಟ್ ಪಾಲುದಾರರಾಗಿ‘ ಅರ್ಹ ಕಾರ್ಡ್ ಸದಸ್ಯರಿಗೆ ಎನ್‌ಎಂಎಸಿಸಿಯಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಲಿದೆ. ಈ ಪಾಲುದಾರಿಕೆಯು ಭಾರತೀಯ ಮತ್ತು ಅಂತರರಾಷ್ಟ್ರೀಯ ಕಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಎನ್‌ಎಂಎಸಿಸಿಯ ಬದ್ಧತೆಯನ್ನು ಎತ್ತಿಹಿಡಿಯಲಿದೆ. ಮುಂಗಡ ಟಿಕೆಟ್ ಮಾರಾಟ (ಪ್ರಿ–ಸೇಲ್), ಆಯ್ದ ಪ್ರದರ್ಶನಗಳಿಗೆ ಉಚಿತ ಪ್ರವೇಶ, ವಿಶೇಷ ಡೈನಿಂಗ್ ಸೌಲಭ್ಯಗಳು ಮತ್ತು ಪ್ರೀಮಿಯಂ ಸೇವೆಗಳು ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ.
ಅಮೆರಿಕನ್ ಎಕ್ಸ್‌ಪ್ರೆಸ್ ಇಂಡಿಯಾದ ಸಿಇಒ ಮತ್ತು ಕಂಟ್ರಿ ಮ್ಯಾನೇಜರ್ ಸಂಜಯ್ ಖನ್ನಾ ಮಾತನಾಡಿ: “ಭಾರತವು ಕಲೆ ಮತ್ತು ಸಂಸ್ಕೃತಿಯ ಅಸಾಧಾರಣ ಪರಂಪರೆಯನ್ನು ಹೊಂದಿದೆ. ಎನ್‌ಎಂಎಸಿಸಿ ಈ ಪರಂಪರೆಯನ್ನು ಆಚರಿಸುವ ಮತ್ತು ಜಾಗತಿಕ ಮಟ್ಟದ ಅದ್ಭುತ ಅನುಭವಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಅಸಾಧಾರಣ ವೇದಿಕೆಯನ್ನು ಸೃಷ್ಟಿಸಿದೆ. ನಮ್ಮ ಕಾರ್ಡ್ ಸದಸ್ಯರಿಗೆ ಅತ್ಯಮೂಲ್ಯ ಮತ್ತು ವಿಶಿಷ್ಟ ಅನುಭವಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದರು.
ಜಿಯೋ ವರ್ಲ್ಡ್ ಸೆಂಟರ್‌ನ ಸಿಇಒ ದೇವೇಂದ್ರ ಬರ್ಮಾ ತಿಳಿಸುತ್ತಾ: “ ಎನ್‌ಎಂಎಸಿಸಿಯಲ್ಲಿ ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಪರಿಚಯಿಸುವುದು ಮತ್ತು ಜಗತ್ತಿನ ಶ್ರೇಷ್ಠತೆಯನ್ನು ಭಾರತಕ್ಕೆ ತರುವುದು ನಮ್ಮ ದೃಷ್ಟಿಯಾಗಿದೆ. ಸಂಸ್ಕೃತಿಯ ಮೂಲಕ ಜನರನ್ನು ಬೆಸೆಯುವ ನಮ್ಮ ನಂಬಿಕೆಯೇ ಈ ಸಹಯೋಗಕ್ಕೆ ಮೂಲ ಕಾರಣವಾಗಿದೆ” ಎಂದರು.
ಅಮೆರಿಕನ್ ಎಕ್ಸ್‌ಪ್ರೆಸ್ ಬಗ್ಗೆ:
1850 ರಲ್ಲಿ ಸ್ಥಾಪನೆಯಾಗಿರುವ ಅಮೆರಿಕನ್ ಎಕ್ಸ್‌ಪ್ರೆಸ್ ಜಾಗತಿಕ ಪಾವತಿಗಳು ಮತ್ತು ಪ್ರೀಮಿಯಂ ಲೈಫ್‌ಸ್ಟೈಲ್ ಬ್ರ್ಯಾಂಡ್ ಆಗಿದೆ. ಇದು ಗ್ರಾಹಕರ ಜೀವನವನ್ನು ಸಮೃದ್ಧಗೊಳಿಸಲು ಮತ್ತು ವ್ಯಾಪಾರವನ್ನು ಯಶಸ್ವಿಗೊಳಿಸಲು ವಿಶ್ವಾಸಾರ್ಹ ಸೇವೆಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗೆ :americanexpress.com, americanexpress.com/en-us/newsroom/, and
ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಬಗ್ಗೆ:
ಇದು ಮುಂಬಯಿನ ಬಾಂದ್ರಾ ಕುರ್ಲಾ ಸಂಕೀರ್ಣದ ಹೃದಯಭಾಗದಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿರುವ, ಕಲಾ ಕ್ಷೇತ್ರದಲ್ಲೊಂದು ಅತ್ಯಂತ ವಿಶಿಷ್ಟವಾದ ಕೇಂದ್ರವಾಗಿದೆ.








