ಕೊರೊನಾ ಪರಿಣಾಮದಿಂದಾಗಿ ಹೆಚ್ಚು ಸಮಸ್ಯೆ ಅನುಭವಿಸುತ್ತಿರುವುದೇ ಟೀನೇಜ್ ಮಕ್ಕಳು..!
ಕೊರೊನಾ ಲಾಕ್ ಡೌನ್ ನಿಂದಾಗಿ , ನಿಯಮಗಳು ಇಡೀ ಜಗತ್ತಿನ ಮೇಲೆ ಆರ್ಥಿಕವಾಗಿಯೂ ಪರಿಣಾಮ ಬೀರಿದೆ. ಜೊತೆಗೆ ಜನರು ಕೂಡ ಇದರಿಂದ ಹೆಚ್ಚು ಸಮಸ್ಯೆಗಳನ್ನ ಅನುಭವಿಸಿಸಿದ್ದಾರೆ. ಮಾನಸಿಕ ಒತ್ತಡ ಸೇಇ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ.
ಆದ್ರೆ ಈ ಒಂದು ಕೊರೊನಾ ಹಾವಳಿಯ ನಡುವೆ ಹೆಚ್ಚಾಗಿ ಟೀನೇಜರ್ಸ್ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ, ಹೆಚ್ಚು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಸಂಶೋಧಕರು ಆಘಾತಕಾರಿ ವರದಿ ನೀಡಿದ್ದಾರೆ. ಹೌದು ರಾಷ್ಟ್ರೀಯ ಮಕ್ಕಳ ಆರೋಗ್ಯ ಸಮೀಕ್ಷೆ ನೀಡಿರುವ ವರದಿಯಿಂದ ಈ ವಿಚಾರವು ಗೊತ್ತಾಗಿದೆ.
ಕಳೆದ 2 ವರ್ಷಗಳಿಂದ 2000 ರೂ. ಮುಖಬೆಲೆಯ ನೋಟು ಮುದ್ರಣವಾಗಿಲ್ಲ..! : ಕಾರಣ..?
ಹೌದು ಟೀನೇಜ್… ಈ ವಯಸ್ಸಲ್ಲಿ ಹುಡುಗ ಅಥವ ಹುಡುಗಿಯರು ಹೆಚ್ಚಾಗಿ ಸ್ನೇಹಿತರ ಜೊತೆ ಕಾಲ ಕಳೆಯಲು ಇಷ್ಟಪಡ್ತಾರೆ. ಆಟ, ಓಟ, ಕ್ರೀಡೆ, ಸುತ್ತಾಟ, ಸೋಷಿಯಲ್ ಲೈಫ್ ಇದೆಲ್ಲ ಹೆಚ್ಚಾಗಿರುತ್ತೆ. ಆದರೆ ಈ ಕೊರೊನಾ ಹಾವಳಿಯಿಂದಾಗಿ ಟೀನೇಜರ್ಸ್ ಇವುಗಳನ್ನೆಲ್ಲಾ ತುಂಬಾನೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಇದರಿಂದಾಗಿ ಕ್ರಮೇಣ ಅವರು ಮಾನಸಿಕ ಒತ್ತಡಕ್ಕೂ ಒಳಗಾಗಬಹುದು. ಇನ್ನೂ ಸಮೀಕ್ಷಾ ವರದಿ ಪ್ರಕಾರ 46 % ನಷ್ಟು ಪೋಷಕರು ಹೇಳೋ ಪ್ರಕಾರ ಈ ಕೊರೊನಾ ಹಾವಳಿ ಶುರುವಾದಾಗಿನಿಂದಲೂ ಅವರ ಮಕ್ಕಳ ಮಾನಸಿಕ ಆರೋಗ್ಯ ಹದಗೆಡುತ್ತಿದೆಯಂತೆ. ಡಿಪ್ರೆಶ್ಶನ್ ನಂತಹ ಲಕ್ಷಣಗಳು ಕಂಡುಬರುತ್ತಿವೆಯಂತೆ. ಅದ್ರಲ್ಲೂ ಇಂತಹ ಲಕ್ಷಣಗಳು ಕಂಡುಬರುತ್ತಿರೋದು ಹುಡುಗರಲ್ಲೇ ಹೆಚ್ಚು ಎಂದು ವರದಿಯಿಂದ ತಿಳಿದುಬಂದಿದೆ.
ಇನ್ನೂ ಸಮೀಕ್ಷಾ ವರದಿ ಅನ್ವಯ ತಜ್ಞರು 977 ಮಂದಿ ಪೋಷಕರ ಜೊತೆಗೆ ಮಾತನಾಡಿದ್ದು, 13-18 ವಯಸ್ಸಿನ ಮಕ್ಕಳ ಜೊತೆಗೆ ಸಂವಹನ ನಡೆಸಿ ರಿಪೋರ್ಟ್ ತಯಾರಾಗಿದೆ.
ಈ ವರದಿ ಅನ್ವಯ ಹುಡುಗಿಯಲ್ಲಿ ಮೂವರಲ್ಲಿ ಒಬ್ಬರಲ್ಲಿ ಇಂತಹ ಲಕ್ಷಣಗಳು ಕಾಣಿಸಿಕೊಂಡಿದ್ದರೆ, ಹುಡುಗರಲ್ಲಿ ಐವರಲ್ಲಿ ಒಬ್ಬರು ಇಂತಹ ಸಮಸ್ಯೆಗೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಇದು ಟೀನೇಜ್ ಮಕ್ಕಳ ನಿದ್ದೆಯ ಮೇಲೂ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ.
VIDEO : ಹೊರಗಡೆ ಊಟ ಮಾಡೋ ಮುನ್ನ ದಯವಿಟ್ಟು ಎಚ್ಚರ : ಮೀರತ್ ಆಯ್ತು ಈಗ ಗಾಝಿಯಾಬಾದ್… ರೋಟಿಗೆ ಉಗುಳಿದ ಕಿಡಿಗೇಡಿ..!

ಇನ್ನೂ ಲಾಕ್ ಡೌನ್ ಅಥವ ಕಡಿಮೆ ಸಮಯ ಶಾಲಾ ಕಾಲೇಜಿನಲ್ಲಿ ಕಳೆಯುವುದು, ಹೊರಗೆ ಆಟವಾಡಲು ಸಮಯ ಕಳೆಯದೇ ಇರುವುದು, ಸ್ನೇಹಿತರ ಜೊತೆ ಕಾಲ ಕಳೆಯದೇ ಇರುವುದು, ಆನ್ ಲೈ ಕ್ಲಾಸಸ್ ಈ ಎಲ್ಲಾ ಪರಿಣಾಮದಿಂದಾಗಿ ಟೀನೇಜರ್ಸ್ ಮೊಬೈಲ್ ಆನ್ ಲೈನ್ ಗೇಮ್ಸ್, ಆನ್ ಲೈನ್ಸ್ ಶೋ ಗಳು, ಸಾಮಾಜಿಕ ಜಾಲತಾದಲ್ಲೇ ಸದಾ ಟೈಮ್ ಸ್ಪೆಂಡ್ ಮಾಡುವುದು, ಹೀಗೆ ಮೊಬೈಲ್ ಗೆ ಅಡಿಕ್ಟ್ ಆಗಿದ್ದಾರೆ. ಇದು ಮತ್ತಷ್ಟು ನಕಾರಾತ್ಮಕ ಪರಿಣಾಮಗಳು ಬೀರುತ್ತವೆ. ಕಾರಣ ಮೊಬೈಲ್ ಗೆ ಹೆಚ್ಚು ಅಡಿಕ್ಟ್ ಆಗುವುದು ಅಷ್ಟು ಒಳ್ಳೆಯದೂ ಅಲ್ಲ. ಸೋಷಿಯಲ್ ಮೀಡಿಯಾದಲ್ಲಿ ಕೇವಲ ಒಳ್ಳೆಯ ದಾರಿಯೇ ಇರುವುದಿಲ್ಲ. ಕೆಟ್ಟ ಹಾದಿಯೂ ಇರುತ್ತೆ. ಹದಿಹರೆಯದ ಚಂಚಲ ವಯಸ್ಸಿನಲ್ಲಿ ಮಕ್ಕಳು ಯಾವುದೂ ಒಳ್ಲೆಯದು ಕೆಟ್ಟದು ಅಂತ ನೋಡುವುದಿಲ್ಲ. ಯಾವುದು ಹೆಚ್ಚು ಆಕರ್ಷಣೀಯ ಎನ್ನುವುದನ್ನ ನೋಡ್ತಾರೆ.








