ಕಳೆದ 2 ವರ್ಷಗಳಿಂದ 2000 ರೂ. ಮುಖಬೆಲೆಯ ನೋಟು ಮುದ್ರಣವಾಗಿಲ್ಲ..! : ಕಾರಣ..?

1 min read

ಕಳೆದ 2 ವರ್ಷಗಳಿಂದ 2000 ರೂ. ಮುಖಬೆಲೆಯ ನೋಟು ಮುದ್ರಣವಾಗಿಲ್ಲ..! : ಕಾರಣ..?

ನವದೆಹಲಿ :  ಮತ್ತೆ ನೋಟ್ ಬ್ಯಾನ್ ಆಗುತ್ತಾ… ಇಂತಹದೊಂದು ಪ್ರಶ್ನೆ ಇದೀಗ ಕಾಡೋದಕ್ಕೆ ಶುರುವಾಗಿದೆ. ಕಾರಣ… ಕಳೆದ 2 ವರ್ಷಗಳಲ್ಲಿ 2 ಸಾವಿರ ಮುಖಬೆಲೆಯ ನೋಟುಗಗಳು  ಮುದ್ರಣವೇ ಆಗಿಲ್ಲ ಇನ್ನುವ ಆಘಾತಕಾರಿ ವಿಚಾರ. ಕೇಂದ್ರ ಸರರ್ಕಾರವೇ  ಈ ಮಾಹಿತಿಯನ್ನ ಖುದ್ದು ತಿಳಿಸಿದೆ. ಇದರಿಂದ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.

ಹೌದು ನಕಲಿ ನೋಟುಗಳು ಮತ್ತು ಕಪ್ಪು ಹಣವನ್ನು ತಡೆಗಟ್ಟುವ ನಿಟ್ಟಿನಲ್ಲಿ 500 ರೂ. ಮತ್ತು 1 ಸಾವಿರ ರೂ. ಮುಖಬೆಲೆಯ ಹಳೆಯ ನೋಟುಗಳನ್ನ ಸರ್ಕಾರ 2016ರ ನವೆಂಬರ್ ನಲ್ಲಿ ಬ್ಯಾನ್ ಮಾಡಿತ್ತು. ಇದರಿಂದಾಗಿ ಅನೇಕರು ಪಡಬಾರದ ಪಾಡು ಪಡಬೇಕಾಯ್ತು. ಸಾಕಷ್ಟು ಕಷ್ಟಗಳನ್ನ ಬಡವರೇ ಅನುಭವಿಸಿದ್ದು ಎಂಬುವುದು ಕೂಡ ಸುಳ್ಳಲ್ಲ. ಇದೇ ವೇಳೆ ಸರ್ಕಾರ ಹೊಸ ಮುಖಬೆಲೆಯ 2 ಸಾವಿರ ರೂಪಾಯಿ ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳನ್ನ ಪರಿಚಯಿಸಿತ್ತು.

ಮತ್ತೆ ರಾಜ್ಯದಲ್ಲಿ ಲಾಕ್ ಡೌನ್ ಆಗುತ್ತಾ : ಸಭೆ ಬಳಿಕ ಸಿಎಂ ಹೇಳಿದ್ದೇನು..?

ಇನ್ನೂ 2016 ರಿಂದ 2017ರ ಆರ್ಥಿಕ ವರ್ಷದಲ್ಲಿ ಒಟ್ಟು 3,542,991 ಮಿಲಿಯನ್ 2 ಸಾವಿರ ರೂ. ಮುಖಬೆಲೆಯ  ನೋಟುಗಳನ್ನು ಮುದ್ರಣ ಮಾಡಲಾಗಿತ್ತು . ನಂತರ ಮುಂದಿನ ಆರ್ಥಿಕ ವರ್ಷದಲ್ಲಿ ಈ ಪ್ರಮಾಣ ಇನ್ನೂ ಕಡಿಮೆಯಾಗಿತ್ತು. 2017 -2018 ರ ಸಾಲಿನಲ್ಲಿ ಕೇವಲ 111.507 ಮಿಲಿಯನ್ ನೋಟುಗಳನ್ನು ಮುದ್ರಿಸಲಾಗಿತ್ತು. ನಂತರ 2018ರಿಂದ 2019ರವರೆಗೆ 46,690 ಮಿಲಿಯನ್ ನೋಟುಗಳನ್ನ ಮಾತ್ರ ಮುದ್ರಿಸಲಾಗಿತ್ತು.

ಬಸ್ ಸಂಚಾರ ಸ್ಥಗಿತ : ಬೆಳಗಾವಿ ವಿಭಾಗಕ್ಕೆ 50 ಲಕ್ಷ ರೂ. ನಷ್ಟ

ಆದ್ರೆ ಇದೀಗ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಲೋಕಸಭೆಯಲ್ಲಿಂದು ಈ ಕುರಿತು ಮಾಹಿತಿ ನೀಡಿದ್ದು, ಕಳೆದ 2 ವರ್ಷಗಳಿಂದ ಈ ನಿರ್ಧಿಷ್ಟ ನೋಟುಗಳ ಮುದ್ರಣ ಮಾಡದಿರುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ. ಇದಕ್ಕೆ ಕಾರಣ ಕೊಟ್ಟಿರುವ ಅವರು ಮೊದಲನೇಯದಾಗಿ ಕಪ್ಪು ಹಣ ತಡೆಗಟ್ಟುವಿಕೆ ಮತ್ತೊಂದು  ಸಾರ್ವಜನಿಕರ ವ್ಯವಹಾರಿಕ ಬೇಡಿಕೆ ಅನುಕೂಲತೆಗಾಗಿ ಆರ್ ಬಿ ಐ ಜೊತೆಗೆ ಚರ್ಚಿಸಿ ಈ ನಿರ್ದಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

VIDEO : ಹೊರಗಡೆ ಊಟ ಮಾಡೋ ಮುನ್ನ ದಯವಿಟ್ಟು ಎಚ್ಚರ :  ಮೀರತ್  ಆಯ್ತು ಈಗ ಗಾಝಿಯಾಬಾದ್… ರೋಟಿಗೆ ಉಗುಳಿದ ಕಿಡಿಗೇಡಿ..!

ಚಾಮರಾಜನಗರ : ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಪ್ರವಾಸಿಗರು

ಏಕಾಂತದಲ್ಲಿ ಕುಳಿತಿದ್ದ ಪ್ರೇಮಿಗಳ ಮೇಲೆ ಹಲ್ಲೆ ನಡೆಸಿದ ಗುಂಪು : ಯುವತಿಯ ದುಪಟ್ಟಾ ಎಳೆದು  ಹಲ್ಲೆ ನಡೆಸಿರುವ ವಿಡಿಯೋ ವೈರಲ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd