‘ಯೋಗಿ ರಾಜ್ಯ’ದಲ್ಲಿ ಮತ್ತೊಂದು ಘೋರ ಕೃತ್ಯ : ಮಧ್ಯರಾತ್ರಿ ಅಪ್ರಾಪ್ತೆ ಅಪಹರಣ, ಕಾರ್ ನಲ್ಲಿ ಅತ್ಯಾಚಾರ..!
ಉತ್ತರಪ್ರದೇಶದಲ್ಲಿ : ಉತ್ತರಪ್ರದೇಶದಲ್ಲಿ ದಿನಗಳೆದಂತೆಲ್ಲಾ ಅಪರಾಧ ಅದ್ರಲ್ಲೂ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈ ನಡುವೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವ ಮಧ್ಯರಾತ್ರಿಯ ವೇಳೆ 15 ವರ್ಷದ ಬಾಲಕಿಯನ್ನ ಅಪಹರಿಸಿ ಬಳಿಕ ಕಾರಿನೊಳಗೆ ಅತ್ಯಾಚಾರವೆಸಗಿದ್ದಾನೆ. ಉತ್ತರಪ್ರದೇಶದ ಆಲಿಘಡ್ ಜಿಲ್ಲೆಯಲ್ಲಿ ಇಂತಹದೊಂದು ಹೇಯ ಕೃತ್ಯ ನಡೆದಿದೆ.
ಮ್ಯಾನ್ಮಾರ್ ನಲ್ಲಿ ಮಾನವೀಯತೆ ಮಾಯ: ಪ್ರಜಾಪ್ರಭುತ್ವಕ್ಕೆ ಪ್ರಾಣ ಬಿಡುತ್ತಿರುವ ಜನರು – 138 ಜನರನ್ನ ಕೊಂದ ಮಿಲಿಟರಿ ಆಡಳಿತ – ಚೀನಾ ಕೈವಾಡ..!
ಮಧ್ಯರಾತ್ರಿ ಬಾಲಕಿ ಬಯಲು ಶೌಚ ಮಾಡಲೆಂದು ಮನೆಯಿಂದ ಹೊರಬಂದಿದ್ದ ವೇಳೆ ಆರೋಪಿ ಪುಷ್ಪೇಂದ್ರ ಎಂಬಾತ ಆಕೆಯನ್ನ ಅಲ್ಲಿಂದ ಎಳೆದುಕೊಂಡು ಹೋಗಿ ಕಾರಿನೊಳಗೆ ಅತ್ಯಾಚಾರವೆಸಗಿ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ. ಆದ್ರೂ ಬಾಲಕಿ ಸಹಾಯಕ್ಕಾಗಿ ಕಿರುಚಾಡಿದ ವೇಳೆ ಆಕೆಯ ಸಂಬಂಧಿಕರೊಬ್ಬರು ಕಾಪಾಡಲು ಬಂದಿದ್ದಾರೆ. ಈ ವೇಳೆ ಆತನಿಗೂ ಚಾಕು ಇರಿದ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ಬಾಲಕಿಯ ಸಂಬಂಧಿಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಮ್ಯಾನ್ಮಾರ್ ನಲ್ಲಿ ಮಾನವೀಯತೆ ಮಾಯ: ಪ್ರಜಾಪ್ರಭುತ್ವಕ್ಕೆ ಪ್ರಾಣ ಬಿಡುತ್ತಿರುವ ಜನರು – 138 ಜನರನ್ನ ಕೊಂದ ಮಿಲಿಟರಿ ಆಡಳಿತ – ಚೀನಾ ಕೈವಾಡ..!
ಇನ್ನೂ ಈ ಸಂಬಂಧ ಸಂತ್ರಸ್ತೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು FIR ದಾಖಲಿಸಿಕೊಂಡಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ಧಾರೆ.
ಮಹಿಳೆ ಮೂಗಿಗೆ ಪಂಚಿಂಗ್ ಕೇಸ್ : ‘ಕಾನೂನಿನ’ ರಿವರ್ಸ್ ಪಂಚ್ ಕೊಟ್ಟ ZOMATO ಡೆಲಿವರಿ ಬಾಯ್..!








