ADVERTISEMENT
Wednesday, July 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಹಿಳೆ ಮೂಗಿಗೆ ಪಂಚಿಂಗ್ ಕೇಸ್ : ‘ಕಾನೂನಿನ’ ರಿವರ್ಸ್ ಪಂಚ್ ಕೊಟ್ಟ ZOMATO ಡೆಲಿವರಿ ಬಾಯ್..!

Namratha Rao by Namratha Rao
March 16, 2021
in Newsbeat, Viral News, ರಾಜ್ಯ
Share on FacebookShare on TwitterShare on WhatsappShare on Telegram

ಮಹಿಳೆ ಮೂಗಿಗೆ ಪಂಚಿಂಗ್ ಕೇಸ್ : ‘ಕಾನೂನಿನ’ ರಿವರ್ಸ್ ಪಂಚ್ ಕೊಟ್ಟ ZOMATO ಡೆಲಿವರಿ ಬಾಯ್..!

ಬೆಂಗಳೂರು : ಮೇಕಪ್  ಆರ್ಟಿಸ್ಟ್ ಮಹಿಳೆಯೊಬ್ಬರ ಮುಖಕ್ಕೆ ಜೋಮ್ಯಾಟೋ ಡಿಲೆವರಿ ಬಾಯ್  ಪಂಚ್ ಮಾಡಿರೋದಾಗಿ, ಇತ್ತೀಚೆಗೆ ಬೆಂಗಳೂರಿನ ಮಹಿಳೆ ವಿಡಿಯೋ ಮಾಡಿ ಆರೋಪಿಸಿ ಕಣ್ಣೀರಿಟ್ಟಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ   ZOMATO ಡಿಲೆವರಿ ಬಾಯ್ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಆತನನ್ನ ಅರೆಸ್ಟ್ ಮಾಡುವಂತೆ ನೆಟ್ಟಿಗರು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಆರೋಪಿ ಕಾಮರಾಜ್ ನನ್ನ ಅರೆಸ್ಟ್ ಮಾಡಲಾಗಿತ್ತು. ಆದ್ರೆ ಆತ ಅರೆಸ್ಟ್ ಆದ ಬೆನ್ನಲ್ಲೇ ಮಹಿಳೆಯ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಹೋಗಿದ್ದಾನೆಂದ್ರೆ ಆ ಮಹಿಳೆಯೂ ಕೂಡ ಏನೋ ತಪ್ಪು ಮಾಡಿರಬೇಕು. ಇಲ್ಲ ಆ ಮಹಿಳೆ ಸುಳ್ಳು ಹೇಳುತ್ತಿರಬಹುದೆಂದು ನೆಟ್ಟಿಗರು  ಚರ್ಚೆಗಳನ್ನ ಶುರು ಮಾಡಿದ್ದರು.

Related posts

Cristiano Ronaldo

fifa wolrd cup 2026- ಫಿಫಾ ವಿಶ್ವಕಪ್‍ನ ಮುಕುಟವಿಲ್ಲದ ಫುಟ್‍ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ… 🐍⚽🔥..!

July 8, 2026
ಇಂಗ್ಲೆಂಡ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಚಿಂದಿ ಚಿತ್ರಾನ್ನ ಪವರ್ ಪ್ಲೇನಲ್ಲೇ ಮಕಾಡೆ ಮಲಗಿದ ಸ್ಟಾರ್‌ಗಳು

ಇಂಗ್ಲೆಂಡ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಚಿಂದಿ ಚಿತ್ರಾನ್ನ ಪವರ್ ಪ್ಲೇನಲ್ಲೇ ಮಕಾಡೆ ಮಲಗಿದ ಸ್ಟಾರ್‌ಗಳು

July 8, 2026

ಈ ನಡುವೆ ಜೊಮ್ಯಾಟೊ ಕಂಪನಿಯ ಡೆಲಿವರಿ ಬಾಯ್ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದ ಮಹಿಳೆ ವಿರುದ್ಧವೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಕಾಮರಾಜ್ ದೂರು ದಾಖಲಿಸಿದ್ದಾರೆ. ಹೌದು ಕಾಮರಾಜ್ ನೀಡಿದ ದೂರಿನ ಮೇರೆಗೆ ಹಿತೇಸಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೂರಿನಲ್ಲಿ  ಮಾ.9 ರಂದು ಹಿತೇಶ್ ಚಂದ್ರಾಣಿ ಜೊಮ್ಯಾಟೊ ಪುಡ್ ಆರ್ಡರ್ ಮಾಡಿದ್ದರು.

ಆರ್ಡರ್ ತಡವಾಗಿದ್ದಕ್ಕೆ ಡೆಲಿವರಿ ಬಾಯ್ ಜೊತೆ ಜಗಳವಾಗಿತ್ತು. ಈ ವೇಳೆ‌ ನನ್ನ ಮೇಲೆ‌ ಹಲ್ಲೆ‌ ಮಾಡಿದ್ದಾನೆ ಎಂದು ಈ ಆರೋಪಿಯು ತನ್ನ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟಿದ್ದರು. ಆದ್ರೆ ನಾನು ಹಲ್ಲೆ ನಡೆಸಿಯೇ ಇಲ್ಲ ಬದಲಾಗಿ ಇಲ್ಲಿ ಸಂತ್ರಸ್ತ ನಾನು ಆಕೆಯೆ ನನ್ನ ಮೇಲೆ ಹಲ್ಲೆ ನಡೆಸೋ ಭರದಲ್ಲಿ ನನ್ನ ಮೇಲೆ ಚಪ್ಪಳಿ ಎಸೆದಿದ್ದಲ್ಲದೆ ತಮ್ಮ ಉಂಗುರದಿಂದ ತಾವೇ ಮೂಗಿಗಿ ಹೊಡೆದುಕೊಂಡಿದ್ದಾರೆ  ಎಂದು ಕಾಮರಾಜ್​  ಆರೋಪಿಸಿ ದೂರು ನೀಡಿದ್ದಾರೆ‌. ಇದೀಗ  ಮಹಿಳೆಯ ವಿರುದ್ಧ ಐಪಿಸಿ ಸೆಕ್ಷನ್ 341, 355, 504 ಹಾಗೂ 506ನಡಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರಣೆ

ಆರೋಪಿ ಎಂದು ಹೇಳಲಾಗಿರುವ ಕಾಮರಾಜ್ ಹೇಳಿಕೆಯಿಂದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯೇ ನಾಟಕವಾಡ್ತಿದ್ದಾಲೆ ಎಂದು ಹೇಳಲಾಗ್ತಿದೆ. ಹೌದು ಮಹಿಳೆ ನನ್ನ ಮೇಲೆ ಹಲ್ಲೆ ನಡೆಸಲು ಶುರು ಮಾಡಿದರು ಆ ವೇಳೆ ನನ್ನ ಅವರೇ ತಮ್ಮ ಕೈನಲ್ಲಿದ್ದ ಉಂಗುರದಿಂದ ಏಟು ಮಾಡಿಕೊಂಡ್ರು ಎಂದಿದ್ದಾರೆ.  ಇದರಿಂದಾಗಿ ಇದೀಗ ಮಹಿಳೆಯೇ ಸುಖಾ ಸುಮ್ಮನೆ ಆರೋಪ ಮಾಡ್ತಿದ್ದಾರಾ ಎಂಬ ಅನುಮಾನಗಳು ಮೂಡಿವೆ.

ಡಿಲೆವರಿ ಬಾಯ್ ಹೇಳಿದ್ದೇನು..?

ಮಹಿಳೆಯ ಮನೆಗೆ ನುಗ್ಗಿ ಆಕೆಯ ಮುಖಕ್ಕೆ ಪಂಚ್ ಮಾಡಿದ್ದು ಎಲ್ಲಾ ಶುದ್ಧ ಸುಳ್ಳು ಎಂದು ಕಾಮರಾಜ್ ಹೇಳಿಕೊಂಡಿದ್ದಾರೆ.  ಹಿತೇಶಾ ನನ್ನ ಮೇಲೆ ಮೊದಲು ಹಲ್ಲೆ ಮಾಡಿದ್ದು, ಹಿಂದಿಯೊಲ್ಲಿ ಕೆಟ್ಟ ಪದಗಳಲ್ಲಿ ನನ್ನನ್ನ ಬೈದದ್ದೂ ಅಲ್ದೇ ಚಪ್ಪಳಿಯಲ್ಲಿ ನನಗೆ ಹೊಡೆದ್ರು. ನಾನು ಮಹಿಳೆ ಮನೆಗೆ ಊಟ ತೆಗೆದುಕೊಂಡು ಹೋಗಿ ಊಟ ಕೊಟ್ಟೆ. ಅವರು ದುಡ್ಡು ಕೊಡುವದಕ್ಕೆ ನಾನು ಕಾಯುತ್ತಿದ್ದೆ.  ಹಾಗೆ ಟ್ರಾಫಿಕ್ ಕಾರಣದಿಂದಾಗಿ ಡಿಲೆವರಿ ತಡವಾಗಿದ್ದಕ್ಕೆ ನಾನು ಮಹಿಳೆಯ ಬಳಿ ಕ್ಷಮೆಯಾಚಿಸಿದೆ. ಆದ್ರೆ ಮಹಿಳೆಯು ನನ್ನ ಬಳಿ ದುರಹಂಕಾರದಿಂದ ರ್ಯಾಶ್ ಆಗಿ ಮಾತನಾಡಿದ್ರು. ಯಾಕೆ ತಡವಾಗಿ ಬಂದಿದ್ಯಾ ಎಂದು ಕೇಳಿದ್ರು. ಅದಕ್ಕೆ ನಾನು ಕಾರಣವನ್ನೂ ತಿಳಿಸಿದೆ.  ಆದ್ರೂ ಮಹಿಳೆ ಕಾಂಪ್ರಮೈಸ್ ಆಗದೇ 45-50 ನಿಮಿಗಳ ಒಳಗೆ ಫುಡ್ ಡಿಲೆವರ್ ಆಗಬೇಕಿತ್ತು ಎಂದು ಸಿಕ್ಕಾಪಟ್ಟೆ ಕೋಪದಿಂದ ಮಾತನಾಡಿದ್ರು. ನಾನು 2 ವರ್ಷಗಳಿಂದ ಈ ಕೆಲಸದಲ್ಲಿದ್ದು, ಈ ರೀತಿಯಾಗಿ ಯಾವತ್ತು ಆಗಿರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಅಲ್ಲದೇ ಮಹಿಳೆ ಆಹಾರವನ್ನ   ತೆಗೆದುಕೊಂಡು ದುಡ್ಡು ಕೊಡಲು ನಿರಾಕರಿಸಿದ್ರು.

ಈ ವೇಳೆ ತಡವಾಗಿದ್ದಕ್ಕೆ ಫ್ರೀ ಆಗಿ ಆಹಾರ ನೀಡುವುದಕ್ಕೆ ಆಕೆ #ZOMATO @ZOMATO ಚಾರ್ಟ್ ಸಪೋರ್ಟ್ ಮೂಲಕ ಮಾತುಕತೆ ನಡೆಸುತ್ತಿದ್ದರು. ಇದರಿಂದಾಗಿ ನನ್ನ ಕೆಲ ಹೋಗಬಹುದೆಂಬ ಆತಂಕದಲ್ಲಿ ನಾನು ಆಕೆಯ ಬಳಿ ದುಡ್ಡು ನೀಡುವಂತೆ ಬೇಡಿಕೊಂಡೆ. ಆದ್ರೆ ಆಗ ಆಕೆ ನನ್ನ ಗುಲಾಮ ಎಂದು ಕರೆದರು. ಅಲ್ದೇ ನನ್ನ ಮೇಲೆ ಕಿರುಚಾಡಿದರು. ನಂತರ ಆಕೆಯೇ ಫುಡ್ ಕ್ಯಾನ್ಸಲ್ ಮಾಡಿದ್ದಾಗಿ ಕಂಪನಿ ಕಡೆಯಿಂದ ನನಗೆ ಮೆಸೇಜ್ ಬಂತು. ಹೀಗಾಗಿ ನಾನು ಡಿಲೆವರ್ ಮಾಡಿದ್ದ ಆಹಾರವನ್ನ ವಾಪಸ್ ಮಾಡುವಂತೆ ಹೇಳಿದೆ. ಆದ್ರೆ  ಆಕೆ ವಾಪಸ್ ಕೊಡಲು ನಿರಾಕರಿಸಿದಳು.  ನಂತರ ಮಹಿಳೆಯ ವರ್ತನೆ ನೋಡಿ ದುಡ್ಡು ಬೇಡ ಊಟವೂ ಬೇಡ ಅಂತ ವಾಪಸ್ ಆಗಲು ನಿರ್ಧರಿಸಿ ನಾನು ಹೊರೆಟಿದ್ದೆ. ಆದ್ರೆ ನಾನು ಲಿಫ್ಟ್ ಕಡೆಗೆ ಹೊರಟಾಗ ಮಹಿಳೆಗೆ ನನ್ನಗೆ ತುಂಬಾನೆ ಅವಾಚ್ಯ ಶಬ್ಧಗಳಿಂದ ನಿಂದಿಸಲು ಆರಂಭಿಸಿದರು. ಸಡನ್ ಆಗಿ ನನ್ನ ಮೇಲೆ ಚಪ್ಪಲಿಗಳನ್ನ ಎಸೆದರು.

ನನ್ನ ಮೇಲೆ ಹಲ್ಲೆ ಮಾಡಲು ಶುರುಮಾಡಿದ್ರು. ಈ ವೇಳೆ ನಾನು ನನ್ನ ರಕ್ಷಣೆಗಾಗಿ ನನ್ನ ಕೈಗಳನ್ನ ಅಡ್ಡ ಇಟ್ಟೆ. ಆಗ ಮಹಿಳೆ ನನ್ನನ್ನ ತಳ್ಳಲು ಪ್ರಯತ್ನಿಸಿದಾಗ ಆಕಸ್ಮಿಕವಾಗಿ ಆಕೆಯ ಉಂಗುರ ಆಕೆಯ ಮೂಗಿಗೆ ತಾಕಿತು ಇದರಿಂದಲೇ ಆಕೆಯ ಮೂಗಿನಿಂದ ರಕ್ತ ಬರೋದಕ್ಕೆ ಶುರುವಾಯ್ತು.  ಇನ್ನೂ ಆಕೆಯ ಮೂಗಿನ ಮೇಲೆ ಆಗಿರುವ ಗಾಯ ಪಂಚ್ ಮಾಡಿರೋದರಿಂದ ಆಗಿದ್ದಲ್ಲ ಅನ್ನೋದನ್ನ ಯಾರು ಬೇಕಾದ್ರು ನೋಡಿದ ತಕ್ಷಣವೇ ಹೇಳಬಹುದು. ಅಲ್ಲದೇ ನಾನು ಉಂಗುರವನ್ನ ಧರಿಸುವುದೂ ಇಲ್ಲ ಎಂದಿದ್ದಾರೆ. ಇಷ್ಟಾದ ಮೇಲೆ ಮಹಿಳೆ ನನಗೆ ಲಿಫ್ಟ್ ನಿಂದಲೂ ಹೋಗೋಕೆ ಬಿಟ್ಟಿಲ್ಲ. ನಾನು ನಡೆದುಕೊಂಡೇ ಕೆಳಗೆ ಓಡಿಕೊಂಡು ಹೋದೆ. ಈ ಬಗ್ಗೆ ನಾನು ZOMATO ಮೇಲಾಧಿಕಾರಿಗಳ ಜೊತೆಗೆ ಮಾತನಾಡಿದೆ. ಅವರ ಬಳಿ ನಡೆದಿದ್ದೆಲ್ಲವನ್ನೂ ನಾನು ತಿಳಿಸಿದೆ. ಅವರು ಕೂಡ  ಈ ಬಗ್ಗೆ ಸರಿಯಾಗಿ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ರು ಎಂದಿದ್ದಾರೆ. ಅಲ್ಲದೇ ಅಲ್ಲಿ ಸಿಸಿ ಕ್ಯಾಮೆರಾಗಳು ಇರಲಿಲ್ಲ. ಇದರಿಂದ ಆಕೆ ಮಾಡಿರುವ ಆರೋಪ ಸುಳ್ಳು ಎಂಬುದನ್ನ ಸಾಬೀತು ಮಾಡಲು ಸ್ವಲ್ಪ ಕಷ್ಟವಾಗ್ತಿದೆ ಎಂದಿದ್ಧಾರೆ.

ಒಳುಡುಪುಗಳನ್ನ ಕದಿಯುತ್ತಿದ್ದ ವ್ಯಕ್ತಿಯ ವಿಡಿಯೋ ವೈರಲ್..!

ಮಹಿಳೆ ಹೇಳಿದ್ದೇನು..?

ಬೆಂಗಳೂರಿನ ಹಿತೇಶಾ ತನ್ನ ಇನ್ಸ್ಟಾಗ್ರಾಂನ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿ, ಹಲ್ಲೆ ನಡೆದ ನಂತರ ರಸ್ತ ಸ್ರಾವವಾಗುತ್ತಿರುವುದನ್ನ ಮೊದಲಿಗೆ ವಿಡಿಯೋದಲ್ಲಿ ತೋರಿಸಿದ್ದಾರೆ. ಇದರ ಬಗ್ಗೆ ಹಿತೇಶಾ ವಿವರಣೆ ನೀಡುತ್ತಾ ಹೇಗೆ ನನ್ನ ಮೇಲೆ ಹಲ್ಲೆ ನಡೆದಿದೆ ನೋಡಿ ಎಂದು ಕಣ್ಣೀರಿಟ್ಟಿದ್ದಾರೆ. ನಂತರ ಫಸ್ಟ್ ಎಡ್ ಮಾಡಿಕೊಂಡು ವಿಡಿಯೋದಲ್ಲಿ ಘಟನೆ ಬಗ್ಗೆ ವಿವರಣೆ ನೀಡಿರುವ ಮಹಿಳೆ ಫುಡ್ ಆರ್ಡರ್ ಮಾಡಿದ ನಂತರ ಅದನ್ನ ಡಿಲೆವರಿ ಮಾಡಲು ತಡವಾಗಿದೆ.  ಹೀಗಾಗಿ ಈ ಬಗ್ಗೆ ಕಂಪನಿಯ ಕಸ್ಟಮರ್ ಕೇರ್ ಜೊತೆಗೆ ನಾನು ಮಾತನಾಡಿದೆ.  ತಡವಾಗಿ ಆರ್ಡರ್ ತಲುಪಿಸುತ್ತಿದ್ದೀರಾ ಹಾಗಾದ್ರೆ ಕಂಪನಿಯೇ ಹೇಳಿರೋ ಹಾಗೆ ಫುಡ್ ಅನ್ನ ಫ್ರೀ ಆಗಿ ಡಿಲೆವರ್ ಮಾಡಿ ಎಂದು ಕೇಳಿಕೊಂಡೆ. ಆದ್ರೆ ಅಷ್ಟರಲ್ಲೇ ಮನೆ ಬಾಗಲಿಗೆ ಬಂದ ಡಿಲೆವರ್ ಬಾಯ್  ಸಿಟ್ಟಿನಿಂದ ಮಾತನಾಡಲು ಆರಂಭಿಸಿದ. ಆದ್ರೆ  ನನಗೆ ಆರ್ಡರ್ ಬೇಡ. ತಡವಾಗಿದೆ ಎಂದು ವಾದಿಸಿದೆ. ನನಗೆ ಆರ್ಡರ್ ಬೇಡ ಕ್ಯಾನ್ಸಲ್ ಮಾಡುವುದಾಗಿ ಹೇಳಿದೆ. ಅಷ್ಟಕ್ಕೇ ಸಿಟ್ಟಿಗೆದ್ದ ಆತ ಏಕಾಏಕಿ ನನ್ನ ಮುಖದ ಮೇಲೆ ಗುದ್ದಿ ದಾಳಿ ನಡೆಸಿದ ಎಂದು ಹೇಳುತ್ತಾ ಕಣ್ಣಿರಿಟ್ಟಿದ್ದಾರೆ.

ಆದ್ರೆ ಯಾರು ಸುಳ್ಳು ಹೇಳ್ತಿದ್ದಾರೆ. ಯಾರು ನಿಜ ಹೇಳ್ತಿದ್ದಾರೆ ಎಂಬ ಅನುಮಾನಗಳು ಮೂಡಿವೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಳ್ಳುವವರೆಗೂ ಕಾಮರಾಜ್ ನನ್ನ ತಾತ್ಮಾಲಿಕವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ.

ಅಂದ್ಹಾಗೆ ಬಹುತೇಕ ಮಂದಿ ಕಾಮರಾಜ್ ಪರ ನಿಂತಿದ್ದು, ಮಹಿಳೆಯೇ ಸುಳ್ಳು ಹೇಳ್ತಿದ್ದಾರೆ ಎಂದು ವಾದಿಸುತ್ತಿದ್ದಾರೆ. ಅಲ್ಲದೇ ಬಾಲಿವುಡ್ ನಟಿ ಪರಿಣಿತಾ ಚೋಪ್ರಾ, ಸ್ಯಾಂಡಲ್ ವುಡ್ ನಟಿ ಪ್ರಣಿತಾ ಕೂಡ ಕಾಮರಾಜ್ ಪರ  ನಿಂತಿದ್ದಾರೆ. ಇತ್ತ ಟ್ವಿಟ್ಟರ್ ನಲ್ಲಿ ಕಾಮರಾಜ್ ಗಾಗಿ #mentoo ಟ್ರೆಂಡ್ ಆಗ್ತಿದೆ.

VIDEO VIRAl : ಚಲಿಸುತ್ತಿದ್ದ ಕಾರ್ ಮೇಲೆ ಪುಶ್ ಅಪ್ಸ್ : ಸೀದಾ ಜೈಲು ಸೇರಿದ ಯುವಕ..!

Tags: bengaluruZomatozomato dilever boy
ShareTweetSendShare
Join us on:

Related Posts

Cristiano Ronaldo

fifa wolrd cup 2026- ಫಿಫಾ ವಿಶ್ವಕಪ್‍ನ ಮುಕುಟವಿಲ್ಲದ ಫುಟ್‍ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ… 🐍⚽🔥..!

by admin
July 8, 2026
0

ಫಿಫಾ ವಿಶ್ವಕಪ್‍ನ ಮುಕುಟವಿಲ್ಲದ ಫುಟ್‍ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ..! ಆ ಒಂದು ಸೋಲು..! ಆ ಒಂದು ಪಂದ್ಯ..! ತನ್ನ ಪಾಲಿನ ಫಿಫಾ ವಿಶ್ವಕಪ್‍ನ ಕೊನೆಯ ಪಂದ್ಯವಾಗಿರಲಿಲ್ಲ. ಅದು...

ಇಂಗ್ಲೆಂಡ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಚಿಂದಿ ಚಿತ್ರಾನ್ನ ಪವರ್ ಪ್ಲೇನಲ್ಲೇ ಮಕಾಡೆ ಮಲಗಿದ ಸ್ಟಾರ್‌ಗಳು

ಇಂಗ್ಲೆಂಡ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಚಿಂದಿ ಚಿತ್ರಾನ್ನ ಪವರ್ ಪ್ಲೇನಲ್ಲೇ ಮಕಾಡೆ ಮಲಗಿದ ಸ್ಟಾರ್‌ಗಳು

by Shwetha
July 8, 2026
0

ಮೂರನೇ ಟಿ20 ಕದನದಲ್ಲಿ ಇಂಗ್ಲೆಂಡ್ ತಂಡದ ಆರ್ಭಟಕ್ಕೆ ಭಾರತದ ಬ್ಯಾಟಿಂಗ್ ಪಡೆ ತರಗೆಲೆಯಂತೆ ಉದುರಿಹೋಗಿದೆ. ಇಂಗ್ಲೆಂಡ್ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟುವ ಆತುರದಲ್ಲಿ ಟೀಮ್ ಇಂಡಿಯಾ ತನ್ನ...

ಮಲ್ಲೇಶ್ವರಂ ಫುಟ್‌ಪಾತ್ ತೆರವು ಸಮರ: ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ವ್ಯಾಪಾರಿಗಳಿಂದ ತಲಾ 5 ಸಾವಿರ ವಸೂಲಿಗಿಳಿದ ಯೂನಿಯನ್;ವ್ಯಾಪಾರಿಗಳ ಶೋಷಣೆಯೋ ಅಥವಾ ನ್ಯಾಯಕ್ಕಾಗಿ ಹೋರಾಟವೋ

ಮಲ್ಲೇಶ್ವರಂ ಫುಟ್‌ಪಾತ್ ತೆರವು ಸಮರ: ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ವ್ಯಾಪಾರಿಗಳಿಂದ ತಲಾ 5 ಸಾವಿರ ವಸೂಲಿಗಿಳಿದ ಯೂನಿಯನ್;ವ್ಯಾಪಾರಿಗಳ ಶೋಷಣೆಯೋ ಅಥವಾ ನ್ಯಾಯಕ್ಕಾಗಿ ಹೋರಾಟವೋ

by Shwetha
July 8, 2026
0

ಬೆಂಗಳೂರು : ಮಲ್ಲೇಶ್ವರದ ಪ್ರಸಿದ್ಧ ಸಂಪಿಗೆ ರಸ್ತೆಯಲ್ಲಿ ನಡೆದ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ಈಗ ಹೊಸ ತಿರುವು ಪಡೆದುಕೊಂಡಿದೆ. ಬಿಬಿಎಂಪಿ ಅಧಿಕಾರಿಗಳ ಕ್ರಮದ ವಿರುದ್ಧ ಕೋರ್ಟ್...

ಮೈಸೂರು ದಸರಾ 2026: ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಮೈಸೂರು ದಸರಾ 2026: ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ

by Shwetha
July 8, 2026
0

ಮೈಸೂರು ದಸರಾ–2026ರ ಮಹೋತ್ಸವಕ್ಕಾಗಿ ಗಜಪಡೆ ಆಯ್ಕೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಲಾಗಿದೆ. ಇಂದು ಮತ್ತಿಗೋಡು ಆನೆ ಶಿಬಿರ ಹಾಗೂ ದುಬಾರೆ ಆನೆ ಶಿಬಿರಗಳಲ್ಲಿ ಪಶುವೈದ್ಯರ ತಂಡವು 20ಕ್ಕೂ...

ರಾಮ ಮಂದಿರ ಕಾಣಿಕೆ ಎಣಿಸುವವನೇ ಮಹಾ ವಂಚಕ : ಗೆಳತಿಗೆ ಐಫೋನ್ ಗಿಫ್ಟ್, ಅಣ್ಣನಿಗೆ ಅದ್ದೂರಿ ಮದುವೆ ಮಾಡಿಸಿದ ಕಿರಾತಕ

ರಾಮ ಮಂದಿರ ಕಾಣಿಕೆ ಎಣಿಸುವವನೇ ಮಹಾ ವಂಚಕ : ಗೆಳತಿಗೆ ಐಫೋನ್ ಗಿಫ್ಟ್, ಅಣ್ಣನಿಗೆ ಅದ್ದೂರಿ ಮದುವೆ ಮಾಡಿಸಿದ ಕಿರಾತಕ

by Shwetha
July 8, 2026
0

ಅಯೋಧ್ಯೆ : ಅಯೋಧ್ಯೆಯ ಪವಿತ್ರ ಶ್ರೀರಾಮ ಮಂದಿರದ ಕಾಣಿಕೆ ಪೆಟ್ಟಿಗೆಗೆ ಕನ್ನ ಹಾಕಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಈಗ ಬೆಚ್ಚಿಬೀಳಿಸುವ ಸತ್ಯಗಳು ಲಭ್ಯವಾಗಿವೆ. ಭಕ್ತರು ಭಕ್ತಿಯಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram