ಮ್ಯಾನ್ಮಾರ್ ನಲ್ಲಿ ಮಾನವೀಯತೆ ಮಾಯ:  ಪ್ರಜಾಪ್ರಭುತ್ವಕ್ಕೆ ಪ್ರಾಣ ಬಿಡುತ್ತಿರುವ ಜನರು  – 138 ಜನರನ್ನ ಕೊಂದ ಮಿಲಿಟರಿ ಆಡಳಿತ – ಚೀನಾ ಕೈವಾಡ..!

1 min read

ಮ್ಯಾನ್ಮಾರ್ ನಲ್ಲಿ ಮಾನವೀಯತೆ ಮಾಯ:  ಪ್ರಜಾಪ್ರಭುತ್ವಕ್ಕೆ ಪ್ರಾಣ ಬಿಡುತ್ತಿರುವ ಜನರು  – 138 ಜನರನ್ನ ಕೊಂದ ಮಿಲಿಟರಿ ಆಡಳಿತ – ಚೀನಾ ಕೈವಾಡ..!

ಮ್ಯಾನ್ಮಾರ್ : ಮ್ಯಾನ್ಮಾರ್ ನಲ್ಲಿ  ಸೇನಾ ಸರ್ಕಾರ ಅಧಿಪತ್ಯ ಸಾಧಿಸಿದೆ. ಮಿಲಿಟರಿ ದಂಗೆ ಹಿನ್ನೆಲೆ ಮಿಲಿಟರಿ ಸೇನೆಯು ನರಭಕ್ಷರಂತೆ ಜನರ ಕೊಲ್ಲಲು ಮುಂದಾಗಿದೆ. ಅಲ್ಲಿನ ಕ್ರೂರತೆಯಿಂದಾಗಿ ಇತ್ತಿಚೆಗೆ ಅಲ್ಲಿನ ಪೊಲೀಸರು ಭಾರತಕ್ಕೆ ಓಡಿಬಂದಿದ್ದರು. ಅಲ್ಲಿನ ಮಿಲಿಟರಿ ಸರ್ಕಾರದ ಕಠಿಣ ಹಾಗೂ ಕ್ರೂರತೆಯ ಬಗ್ಗೆ ಆಘಾತಕಾರಿ ಮಾಹಿತಿಗಳನ್ನ ಬಿಚ್ಚಿಟ್ಟಿದ್ದರು.

ಫೆಬ್ರವರಿ 1ರಂದು ಅಲ್ಲಿನ ಪ್ರಮುಖ ರಾಜಕೀಯ ಪಕ್ಷದ ನಾಯಕಿ ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರದ ವಿರುದ್ಧ ಸೇನಾ ದಂಗೆ ಎದ್ದಿತ್ತು. ಮಿಲಿಟರಿ ಆಡಳಿತ ಅಧಿಕಾರಕ್ಕೇರಿತ್ತು. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಇಂಟರ್ ನೆಟ್ ಸೇವೆ ಸ್ಥಗಿತ ಸೇರಿ ಇನ್ನೂ ಹಲವಾರು ಕ್ರಮಗಳನ್ನ ಕೈಗೊಂಡಿದೆ. ಒಂದೆಡೆ ಇಡೀ ವಿಶ್ವದಿಂದ ಸೇನಾ ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚಾಗಿದ್ರೆ, ಮತ್ತೊಂದೆಡೆ ಮ್ಯಾನ್ಮಾರ್ ಜನರ ಅಸಹಾಯಕತೆ ವಿರುದ್ಧ ಮರುಕ ವ್ಯಕ್ತವಾಗ್ತಿದೆ.

ಮಹಿಳೆ ಮೂಗಿಗೆ ಪಂಚಿಂಗ್ ಕೇಸ್ : ‘ಕಾನೂನಿನ’ ರಿವರ್ಸ್ ಪಂಚ್ ಕೊಟ್ಟ ZOMATO ಡೆಲಿವರಿ ಬಾಯ್..!

ಮ್ಯಾನ್ಮಾರ್‌ ನಲ್ಲಿ ಮಿಲಿಟರಿ ದಂಗೆ ವಿರುದ್ಧ ನಡೆದ ಪ್ರತಿಭಟನೆ ವೇಳೆ ನಿನ್ನೆ ಒಂದೇ ದಿನ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ದೇಶಾದ್ಯಂತ ಮಿಲಿಟರಿ ಸರ್ಕಾರದ ವಿರುದ್ಧ ನಾಗರಿಕರು ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆ ಮೇಲೆ ಭದ್ರತಾ ಪಡೆಗಳು ಅಶ್ರುವಾಯು, ರಬ್ಬರ್ ಗುಂಡುಗಳನ್ನು ಸಿಡಿಸುತ್ತಿದ್ದಾರೆ. ಕೆಲವೊಮ್ಮೆ ಜೀವಂತ ಗುಂಡುಗಳನ್ನು ಹಾರಿಸುತ್ತಿದ್ದಾರೆ. ಪರಿಣಾಮವಾಗಿ ಪ್ರತಿ ನಿತ್ಯ ಪ್ರತಿಭಟನಾನಿರತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.

ಮ್ಯಾನ್ಮಾರ್‌ ನಲ್ಲಿ ಒಂದೂವರೆ ತಿಂಗಳ ಹಿಂದೆ ನಡೆದ ಕ್ಷಿಪ್ರ ಸೇನಾ ದಂಗೆಯ ನಂತರ ದೇಶದಲ್ಲಿ ಸೇನಾಡಳಿತದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ನಾಗರಿಕರ ಮೇಲೆ ಸೇನೆಯ ದೌರ್ಜನ್ಯ ಮುಂದುವರಿದಿದ್ದು, ಈವರೆಗೆ 138 ಮಂದಿ ಪ್ರತಿಭಟನಕಾರರು ಸೇನೆಯ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಒಳುಡುಪುಗಳನ್ನ ಕದಿಯುತ್ತಿದ್ದ ವ್ಯಕ್ತಿಯ ವಿಡಿಯೋ ವೈರಲ್..!

ಮಿಲಿಟರಿ ಆಡಳಿತ ಜಾರಿಗೆ ಬಂದಾಗಿನಿಂದ ಇಡೀ ಮ್ಯಾನ್ಮಾರ್ ‌ನಲ್ಲಿ ಕೋಲಾಹಲ ಮನೆ ಮಾಡಿದೆ. ನಾಗರಿಕರು ಮತ್ತು ರಾಜಕೀಯ ಪಕ್ಷಗಳ ಸಾವಿರಾರು ಕಾರ್ಯಕರ್ತರು, ಮಿಲಿಟರಿ ಸರ್ಕಾರ ತೆಗೆದು ಹಾಕಿ, ಪ್ರಜಾಪ್ರಭುತ್ವವನ್ನು ಮರಳಿ ತರುವುದಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ‌ಮ್ಯಾನ್ಮಾರ್‌ನಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌,  ಈ ಮಿಲಿಟರಿ ದೌರ್ಜನ್ಯವನ್ನು ಕೊನೆಗೊಳಿಸಲು ಸಾಮೂಹಿಕವಾಗಿ ಹಾಗೂ ದ್ವಿಪಕ್ಷೀಯವಾಗಿ ಕೆಲಸ ಮಾಡಬೇಕು  ಎಂದು ಅಂತರರಾಷ್ಟ್ರೀಯ ಸಮುದಾಯಗಳನ್ನು ‌ಕೋರಿದ್ದಾರೆ.

VIDEO VIRAl : ಚಲಿಸುತ್ತಿದ್ದ ಕಾರ್ ಮೇಲೆ ಪುಶ್ ಅಪ್ಸ್ : ಸೀದಾ ಜೈಲು ಸೇರಿದ ಯುವಕ..!

ಇತ್ತ  ಮ್ಯಾನ್ಮಾರ್‌ ಮಿಲಿಟರಿ ಆಡಳಿತವು ಯಾಂಗೂನ್‌ ನಗರದ ಆರು ಟೌನ್‌ಶಿಪ್‌ಗಳಲ್ಲಿ ‘ಮಾರ್ಷಿಯಲ್‌ ಲಾ’ ಜಾರಿಗೊಳಿಸಿದೆ. ಮಿಲಿಟರಿ ಆಡಳಿತದ ವಿರುದ್ಧ ಪ್ರತಿಭಟನೆ ದಿನೇ ದಿನೇ ತೀವ್ರಗೊಳ್ಳುತ್ತಿರುವುದರಿಂದ ಮತ್ತು ಹಿಂಸಾಚಾರ ಹತ್ತಿಕ್ಕಲು ಈ ಕ್ರಮಕೈಗೊಳ್ಳಲಾಗಿದೆ. ಮತ್ತೊಂದೆಡೆ ಮಿಲಿಟರಿ ಆಡಳಿತ ಹೋಗಿ ಮತ್ತೆ ಪ್ರಜಾಪ್ರಭುತ್ವ ಮರುಸ್ಥಾಪನೆಗಾಗಿ ಜನರು ಜೀವವನ್ನೂ ಲೆಕ್ಕಿಸದೇ ಬೀದಿಗಿಳಿದು ಹೋರಾಟ ಮಾಡ್ತಿದ್ದಾರೆ. ಆದ್ರೆ ಮ್ಯಾನ್ಮಾರ್ ಸರ್ಕಾರ ಮಾನವೀಯತೆಯನ್ನೇ ಬಿಟ್ಟು ಜನರನ್ನ ಕೊಲ್ಲಲೂ ಮುಂದಾಗಿದೆ.

ಹೆಂಡತಿ ತವರಿನಿಂದ ಮರಳಲು ನಿರಾಕರಿಸಿದಕ್ಕೆ ನಾಲಿಗೆಯನ್ನೇ ಕತ್ತರಿಸಿಕೊಂಡ..!

ಇನ್ನೂ ಮ್ಯಾನ್ಮಾರ್‌ ನ ಯಾಂಗೂನ್‌ ನಲ್ಲಿ ಚೀನಾ ಮೂಲದ 32 ಕಾರ್ಖಾನೆಗಳನ್ನು ಧ್ವಂಸಗೊಳಿಸಲಾಗಿದ್ದು, ಘಟನೆಯಲ್ಲಿ ಚೀನಾದ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಮ್ಯಾನ್ಮಾರ್‌ ನಲ್ಲಿ ಚೀನಾ ನಾಗರಿಕರ ಸುರಕ್ಷತೆ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿದೆ. ಮ್ಯಾನ್ಮಾರ್‌ ಸೇನೆಗೆ ಚೀನಾ ಬೆಂಬಲ ನೀಡಿರುವುದರಿಂದಲೇ ಪ್ರತಿಭಟನಾಕಾರರು ಈ ರೀತಿಯ ಕೃತ್ಯಕ್ಕೆ ಇಳಿದಿದ್ದಾರೆ ಎಂದು ಹೇಳಲಾಗಿದೆ.  ಒಟ್ಟಾರೆ ಮ್ಯಾನ್ಮಾರ್ ನಲ್ಲಿ ಮಾನವೀಯತೆ ಮರಿಚಿಕೆಯಾಗ್ತಿದೆ.

3ನೇ ಟಿ20 ಪಂದ್ಯ : ಗೆಲುವೊಂದೇ ಮಂತ್ರ.. ರಾಹುಲ್ ಗೆ ಕೋಕ್ ಸಾಧ್ಯತೆ

‘ಮುಂದುವರೆದ ಅಧ್ಯಾಯ’ದಲ್ಲಿ ಆದಿತ್ಯನ ಆರ್ಭಟ..!

ಸ್ಯಾಂಡಲ್ ವುಡ್ ನ ಖಳ ಭಯಂಕರನ ಇಬ್ಬರು ಪುತ್ರರತ್ನಗಳ ಸಹೋದರರ ಸವಾಲ್!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd