ಸಿಡಿ ಪ್ರಕರಣ | ಯುವತಿ ಮನೇಲಿ 23 ಲಕ್ಷ ರೂ ಹಣ ಪತ್ತೆ
ಬೆಂಗಳೂರು : ರಾಜ್ಯದಲ್ಲಿ ಕೊರೊನಾಗಿಂತಲೂ ಹೆಚ್ಚು ಸದ್ದು ಮಾಡುತ್ತಿರುವ ಸಿಡಿ ಪ್ರರಕಣದಲ್ಲಿ ಕೇಳಿ ಬಂದಿರುವ ಯುವತಿಯ ಮನೆಯಲ್ಲಿ 23 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ.
ನಿನ್ನೆ ಎಸ್ ಐಟಿ ತಂಡ ಆರ್ ಟಿ ನಗರದಲ್ಲಿ ಯುವತಿ ನೆಲೆಸಿದ್ದ ಮನೆಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ 23 ಲಕ್ಷ ರೂ. ಹಣ ಪತ್ತೆಯಾಗಿದೆ. ಹಾಗೆ ಕೆಲ ಮಹತ್ತರ ದಾಖಲೆಗಳು ಪತ್ತೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಈ ಪ್ರರಕಣದ ಬೆನ್ನತ್ತಿರುವ ಎಸ್ ಐಟಿ ತಂಡ ನಾಲ್ಕು ತಂಡಗಳಾಗಿ ಆರೋಪಿಗಳಿಗಾಗಿ ಬಲೆ ಬೀಸಿದೆ. ಈ ಮಧ್ಯೆ ವಿಡಿಯೋ ರಿಲೀಸ್ ಮಾಡಿದ್ದ ಯುವತಿಗೆ ಕಳೆದ ವಾರವೇ ಎಸ್ ಐಟಿ ತಂಡ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಆದ್ರೆ ಯುವತಿ ವಿಚಾರಣೆಗೆ ಗೈರಾಗಿದ್ದು, ಯುವತಿ ಜಾಡು ಪತ್ತೆಯಾಗಿಲ್ಲ. ಸಿಡಿಯಲ್ಲಿ ಇರುವ ಯುವತಿ ಈಗ ಎಲ್ಲಿದ್ದಾಳೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.










