ಭಾರತೀಯ ಶೇರುಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ ಮತ್ತೆ ಕುಸಿತ : ಸೆನ್ಸೆಕ್ಸ್ 500 ಪಾಯಿಂಟ್ಸ್ ಇಳಿಕೆ
ಭಾರತೀಯ ಶೇರುಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ ಮತ್ತೆ ಹಿನ್ನೆಡೆ ಅನುಭವಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 536 ಪಾಯಿಂಟ್ಸ್ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 181 ಪಾಯಿಂಟ್ಸ್ ಇಳಿಕೆಗೊಂಡಿದೆ.
BSE ಸೂಚ್ಯಂಕ ಸೆನ್ಸೆಕ್ಸ್ ಶೇ. 1.09ರಷ್ಟು ಅಥವಾ 536 ಪಾಯಿಂಟ್ಸ್ ಕುಸಿದು 48,681 ಪಾಯಿಂಟ್ಸ್‌ಗೆ ತಲುಪಿದೆ. NSE ಸೂಚ್ಯಂಕ ನಿಫ್ಟಿ 181 ಪಾಯಿಂಟ್ಸ್ ಕುಸಿದು 14,377 ಪಾಯಿಂಟ್ಸ್‌ಗೆ ತಲುಪಿದೆ.
ಇಂದು ಬಿಎಸ್‌ಇಯಲ್ಲಿ ಒಟ್ಟು 1383 ಕಂಪನಿಗಳಲ್ಲಿ ವಹಿವಾಟು ಆರಂಭವಾಗಿದ್ದು, ಈ ಪೈಕಿ ಸುಮಾರು 340 ಷೇರುಗಳು ಏರಿಕೆಯಾಗಿದೆ. 993 ಷೇರುಗಳು ಕುಸಿದಿದೆ.