ಬೆಂಗಳೂರಿನ ಸುಬ್ರಹ್ಮಣ್ಯನಗರ ವ್ಯಾಪ್ತಿಯಲ್ಲಿ ಅಜ್ಜನ ಕೈಜಾರಿ 6 ತಿಂಗಳ ಮಗು ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿ ನಗರ ನಿವಾಸಿ ವಿನಯ್ ಹಾಗೂ ಪ್ರಿಯಾಂಕಾ ದಂಪತಿಯ ಪುತ್ರಿ ಅನ್ವಿ ಮೃತಪಟ್ಟ ಮಗುವಾಗಿದೆ.
ಶುಕ್ರವಾರ ಬೆಳಗ್ಗೆ ಅಪಾರ್ಟ್ ಮೆಂಟ್ ನ ಮೊದಲನೇ ಅಂತಸ್ತಿನಲ್ಲಿದ್ದ ತಮ್ಮ ಮನೆಯನ್ನು ವಿನಯ್ ಹಾಗೂ ಪ್ರಿಯಾಂಕಾ ಸ್ವಚ್ಚಗೊಳಿಸುತ್ತಿರುವಾಗ, ವಿನಯ್ ಅವರು ಮಗುವನ್ನು ತಂದೆ ಕೈಗೆ ನೀಡಿದ್ದರು. 70 ವರ್ಷದ ವಿನಯ್ ಅವರ ತಂದೆ ಮಗುವನ್ನು, ಎತ್ತಿಕೊಂಡು ಎರಡನೇ ಮಹಡಿಗೆ ಕರೆದೊಯ್ಯಲು ಮೆಟ್ಟಿಲು ಹತ್ತುವಾಗ ಕಾಲು ಜಾರಿದ್ದಾರೆ. ಆಗ ಆಕಸ್ಮಿಕವಾಗಿ ಕೈಯಲ್ಲಿದ್ದ ಮಗು ಜಾರಿ ಎರಡನೇ ಅಂತಸ್ತಿನಿಂದ ಕೆಳಗೆ ಬಿದ್ದಿದೆ. ತಕ್ಷಣವೇ ಮಗುವನ್ನು ಮಲ್ಲೇಶ್ವರದ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಐಸಿಯುವಿಲ್ಲದ ಕಾರಣ ಬೇರೊಂದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮಗು ಕೊನೆಯುಸಿರೆಳೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ
ಬೆಂಗಳೂರು: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡುವ ಮೂಲಕ ದೇಶದ ಜನತೆಗೆ ತುಸು ನೆಮ್ಮದಿ ನೀಡಿದೆ. ಕೇಂದ್ರದ ಈ ನಡೆ...








