ಕೊರೋನಾ ವೈರಸ್ ಸೋಂಕು ಒಬ್ಬರಿಂದೊಬ್ಬರಿಗೆ ಹರಡದಂತೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಜಾಗೃತಿ ಸಂದೇಶಗಳನ್ನು ಕಿವಿಗೆ ಹಾಕಿಕೊಳ್ಳದೆ, ಹಾಸ್ಯ ಮಾಡುತ್ತಾ ಟಿಕ್-ಟಾಕ್ ನಲ್ಲಿ ವೀಡಿಯೋ ವನ್ನು ಪ್ರದರ್ಶಿಸಿದ ಯುವಕನಿಗೆ ಇದೀಗ ಕೋವಿಡ್ ಸೋಂಕು ತಗುಲಿರುವುದು ದೃಢವಾಗಿದೆ.
ಮಧ್ಯ ಪ್ರದೇಶದ ಸಾಗರ್ ನ ಸಮೀರ್ ಖಾನ್ ಎಂಬಾತ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಆರೋಗ್ಯ ರಕ್ಷಿಸಿಕೊಳ್ಳಿ ಎಂಬ ಸಂದೇಶಗಳನ್ನು ಲೇವಡಿ ಮಾಡಿ ಟಿಕ್ ಟಾಕ್ ಎಂಬ ವೀಡಿಯೋ ಆ್ಯಪ್ ನಲ್ಲಿ ಹಂಚಿಕೊಂಡಿದ್ದ. ಹಿನ್ನೆಲೆಯಲ್ಲಿ ಕೇಳುವ ನೀನು ಮಾಸ್ಕ್ ಧರಿಸುವುದಿಲ್ಲವೇ ಎಂಬ ಧ್ವನಿಗೆ ತುಂಡು ಬಟ್ಟೆಯ ಮೇಲೇಕೆ ನಿಮಗೆ ವಿಶ್ವಾಸ, ವಿಶ್ವಾಸ ಇಡುವುದಾದರೆ ಮೇಲಿರುವವನ ಮೇಲೆ ಇಡು ಎಂಬರ್ಥ ಬರುವ ಮಾತುಗಳನ್ನು ಆಡಿ ಆ ವೀಡಿಯೋವನ್ನು ಟಿಕ್ ಟಾಕ್ ನಲ್ಲಿ ಹರಿಯಬಿಟ್ಟಿದ್ದ.
ಸಮೀರ್ ಖಾನ್ ಇತ್ತೀಚೆಗೆ ಜಬಲ್ಪುರದಲ್ಲಿರುವ ತನ್ನ ಸಹೋದರಿಯ ಮನೆಗೆ ಭೇಟಿ ನೀಡಿದ್ದು, ನಂತರ ಆತನಲ್ಲಿ ಕೊರೊನಾ ಸೋಂಕಿನ ಗುಣಲಕ್ಷಣಗಳು ಕಾಣಿಸಿಕೊಂಡಿದ್ದವು. ಬಳಿಕ ಆತನನ್ನು ಆಸ್ಪತ್ರೆಯೊಂದರ ಪ್ರತ್ಯೇಕ ನಿಗಾ ಘಟಕದಲ್ಲಿ ಇರಿಸಿ ತಪಾಸಣೆ ನಡೆಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇದೀಗ ತಾನಿರುವ ಆಸ್ಪತ್ರೆಯ ಐಸೋಲೇಶನ್ ಘಟಕದಿಂದ ಸೆಲ್ಫೀ ವಿಡಿಯೋ ಒಂದನ್ನು ಮಾಡಿರುವ ಸಮೀರ್ ಖಾನ್, ಅದರಲ್ಲಿ ತನ್ನ ಆರೋಗ್ಯದ ಚೇತರಿಕೆಗಾಗಿ ಪ್ರಾರ್ಥಿಸುವಂತೆ ಗೆಳೆಯರಲ್ಲಿ ಮತ್ತು ಹಿತೈಷಿಗಳಲ್ಲಿ ಕೇಳಿಕೊಂಡಿದ್ದಾನೆ.
ಮೇಲ್ಮನೆ ಕದನ…ಸೋಲು ಗೆಲುವಿನ ಲೆಕ್ಕಾಚಾರ..!
ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಏಳು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ಕಣಕ್ಕಿಳಿದಿರುವುದರಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿದೆ. ಕಾಂಗ್ರೆಸ್ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಮೂರು...






