ಸುಂದರ ಪತ್ನಿ ಇರುವ ಗುಡ್ ಫಾರ್ ನಥಿಂಗ್ ವ್ಯಕ್ತಿ ಎಂಬ ಟ್ರೋಲ್ ಗೆ ಅಭಿಷೇಕ್ ಬಚ್ಚನ್ ನಿಂದ ಕ್ಲಾಸಿ ರಿಪ್ಲೈ !
ನಟ ಅಭಿಷೇಕ್ ಬಚ್ಚನ್ ತಮ್ಮ ಟ್ರೇಡ್‌ಮಾರ್ಕ್ ಶೈಲಿಯಲ್ಲಿ ಟ್ವಿಟರ್ ಟ್ರೋಲ್‌ಗೆ ಪ್ರತಿಕ್ರಿಯಿಸಿದ್ದಾರೆ. ಅಭಿಷೇಕ್ ಸೋಷಿಯಲ್ ಮೀಡಿಯಾದಲ್ಲಿ ವಿರೋಧಿಗಳಿಗೆ ಪ್ರತಿಕ್ರಿಯಿಸುವುದು, ಅವರ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.
ಅಭಿಷೇಕ್ ಅವರ ಮುಂಬರುವ ಚಿತ್ರ ದಿ ಬಿಗ್ ಬುಲ್ ಚಿತ್ರದ ಟ್ರೇಲರ್ ಗೆ ಪ್ರತಿಕ್ರಿಯೆಯಾಗಿ ಒಬ್ಬ ವ್ಯಕ್ತಿಯು ನಟನನ್ನು ‘ಗುಡ್ ಫಾರ್ ನಥಿಂಗ್’ ಎಂದು ಕರೆದಿದ್ದಾರೆ. ಅವರು ಅಭಿಷೇಕ್ ಬಗ್ಗೆ ಅಸೂಯೆ ಪಟ್ಟ ಒಂದೇ ಕಾರಣವೆಂದರೆ ‘ಸುಂದರವಾದ ಪತ್ನಿ’ ಇರುವುದು ಎಂದು ಆ ವ್ಯಕ್ತಿ ಬರೆದಿದ್ದಾರೆ.
ಅಭಿಷೇಕ್ ತನ್ನ ಪ್ರತಿಕ್ರಿಯೆಯಲ್ಲಿ, “ಸರಿ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಕುತೂಹಲಕ್ಕೆ ಕೇಳುತ್ತಿದ್ದೇನೆ .. ನೀವು ಬಹಳಷ್ಟು ಜನರನ್ನು ಟ್ಯಾಗ್ ಮಾಡಿರುವ ಕಾರಣ ನೀವು ಯಾರನ್ನು ಉಲ್ಲೇಖಿಸುತ್ತಿದ್ದೀರಿ?
ಇಲಿಯಾನಾ ಮತ್ತು ನಿಕಿ ಮದುವೆಯಾಗಿಲ್ಲ ಎಂದು ನನಗೆ ತಿಳಿದಿದೆ, ಆದರೆ ಉಳಿದವರು (ಅಜಯ್, ಕುಕಿ, ಸೊಹುಮ್) ಡಿಸ್ನಿಪ್ಲಸ್ ಎಚ್‌ಎಸ್‌ವಿಐಪಿ ವೈವಾಹಿಕ ಸ್ಥಿತಿಯ ಬಗ್ಗೆ ತಿಳಿದು ನಿಮಗೆ ಹೇಳುತ್ತೇನೆ ಎಂದು ಅಭಿಷೇಕ್ ಪ್ರತಿಕ್ರಿಯಿಸಿದ್ದಾರೆ.
Ok. Thank you for your opinion. Just curious.. who are you referring to because you’ve tagged a whole load of people? I know Ileana & Niki aren’t married that leaves the rest of us (Ajay, Kookie, Sohum) soooo…
P.S- will get back to you about @DisneyplusHSVIP ‘s marital status.— Abhishek 𝐁𝐚𝐜𝐡𝐜𝐡𝐚𝐧 (@juniorbachchan) March 20, 2021
ಕಳೆದ ವರ್ಷ, ಅಭಿಷೇಕ್ ಟ್ರೋಲ್ ಗೆ ಇದೇ ಮಾದರಿಯಲ್ಲಿ ಪ್ರತಿಕ್ರಿಯಿಸಿದ್ದರು. ನಿಮಗೆ ಅಮಿತಾಭ್ ಬಚ್ಚನ್ ಮಗನಾಗಿರುವ ಕಾರಣದಿಂದ ಮಾತ್ರವೇ ಕೆಲಸ ಸಿಗುತ್ತಿದೆ ಎಂದು ಅನಿಸುತ್ತಿಲ್ಲವೇ ಎಂದು ಒಬ್ಬ ವ್ಯಕ್ತಿ ಕೇಳಿದ್ದರು. ಅದಕ್ಕೆ ಅಭಿಷೇಕ್, ಕಾಶ್ ಜೋ ಆಪ್ ಕೆಹ್ ರಹೇ ಹೋಟೆ ಸಾಚ್ ಹೋಟಾ. ಸೋಚಿಯೆ, ಕಿಟ್ನಾ ಕಾಮ್ ಮಿಲ್ಟಾ ಮುಜೆ. (ನೀವು ಹೇಳುತ್ತಿರುವುದು ನಿಜವಾಗಿರುತ್ತಿದ್ದರೆ ಎಂದು ನಾನು ಬಯಸುತ್ತೇನೆ. ಯೋಚಿಸಿ ನನಗೆ ಆಗ ಎಷ್ಟು ಕೆಲಸ ಸಿಗುತ್ತಿತ್ತು) ಎಂದು ಪ್ರತಿಕ್ರಿಯಿಸಿದ್ದರು.
ಅಭಿಷೇಕ್ ಎಂಬ ಹೆಸರಿನ ಇನ್ನೊಬ್ಬ ವ್ಯಕ್ತಿ ಅಭಿಷೇಕ್ ಗೆ ಮೊದಲ ಚಿತ್ರ ರೆಪ್ಯೂಜಿ ಸಿಕ್ಕಿರುವುದು ಅವರು ‘ನೆಪೋಕಿಡ್’ ಆಗಿದ್ದರಿಂದ ಎಂದಾಗ ಅರೆ ಯಾರ್, ಯೆ ಸಾರೆ ದುನಿಯಾ ಕೆ ಅಭಿಷೇಕ್ ಮೆರೆ ಪೀಚೆ ಕ್ಯೂ ಪಾಡ್ ಗಯೆ ಹೈ. ಬಕ್ಷ್ ದೋ ಮಹಾರಾಜ್, ಚುಪ್ ಚಾಪ್ ಅಪ್ನಾ ಕಾಮ್ ಕರ್ ರಾಹಾ ಹು (ಓಹ್, ಪ್ರಪಂಚದ ಎಲ್ಲ ಅಭಿಷೇಕ್ ಗಳು ನನ್ನ ಮೇಲೆ ಏಕೆ ಆಕ್ರಮಣ ಮಾಡಲು ಪ್ರಾರಂಭಿಸಿದ್ದಾರೆ. ಕರುಣೆ ತೋರಿ, ನಾನು ನನ್ನ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ) ಎಂದು ಪ್ರತಿಕ್ರಿಯೆ ನೀಡಿದ್ದರು.
ಮೇಕೆ ಹಾಲಿನ ಆರೋಗ್ಯ ಪ್ರಯೋಜನಗಳು https://t.co/UpjE1tuFpk
— Saaksha TV (@SaakshaTv) March 21, 2021
ಚಿತ್ರನಟನಿಂದ ಹುಡುಗಿಯ ಕಿಡ್ನಾಪ್ ! ಯಾವುದೇ ಸಿನಿಮಾ ಲವ್ಸ್ಟೋರಿಗಿಂತ ಕಮ್ಮಿಯಿಲ್ಲ ಜಗ್ಗೇಶ್ ಪರಿಮಳಾ ದಂಪತಿಗಳ ಲವ್ ಸ್ಟೋರಿ#jaggesh @Jaggesh2https://t.co/CrefNT8dEi
— Saaksha TV (@SaakshaTv) March 23, 2021
ಪ್ರಧಾನಿ ಮೋದಿ ನಂತರ ಯೋಗಿ ಆದಿತ್ಯನಾಥ್ ಪ್ರಧಾನಿಯಾಗಲು ಸಮರ್ಥರೇ? https://t.co/5K5E1JeDk7
— Saaksha TV (@SaakshaTv) March 21, 2021
ದೊಣ್ಣೆ ಮೆಣಸಿನ ವಾಂಗಿಬಾತ್ https://t.co/AL3rMRyFF5
— Saaksha TV (@SaakshaTv) March 19, 2021