‘ಕಿರಿಕ್ ಪಾರ್ಟಿ ವಿರುದ್ಧ ಕೇಸ್ – ಪ್ರಕರಣ ದಾಖಲಿಸುವುದು ಲಹರಿ ಸಂಸ್ಥೆಗೆ ಅಭ್ಯಾಸವಾಗಿ ಹೋಗಿದೆ – ರಿಷಬ್ ಶೆಟ್ಟಿ..!
2016 ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ ಕಿರಿಕ್ ಪಾರ್ಟಿ ಸಿನಿಮಾಗೆ ನ್ಯಾಯಾಲಯವು ಜಾಮೀನುರಹಿತ ವಾರೆಮಟ್ ನೀಡಿದೆ. ಲಹರಿ ಸಂಸ್ಥೆ ಮಾಡಿದ್ದ ಕಾಪಿ ರೈಟ್ಸ್ ಆರೋಪ ಮಾಡಿತ್ತು. ‘ಮಧ್ಯ ರಾತ್ರೀಲಿ ಹೈವೇ ರೋಡಲ್ಲಿ’ ಹಾಡಿನ ಹಕ್ಕುಗಳನ್ನು ಲಹರಿ ಆಡಿಯೋ ಸಂಸ್ಥೆ ಹೊಂದಿದ್ದು, ಅದೇ ಹಾಡಿನ ಸಂಗೀತವನ್ನು ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಬಳಸಲಾಗಿದೆ. ಹೀಗಾಗಿ ಕಾಪಿ ರೈಟ್ ಕೇಸ್ ಹಾಕಿದ್ದು, ಸುಮಾರು ವರ್ಷಗಳಿಂದ ಕೇಸ್ ಜಾರಿಯಲ್ಲಿದೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿಯವರು ಸಿನಿಮಾ ಬಿಡುಗಡೆ ಮಾಡುವ ಒಂದು ತಿಂಗಳ ಹಿಂದೆಯೇ ನಾವು ಹಾಡಿನ ಲಿರಿಕ್ಸ್ ಬಿಡುಗಡೆ ಮಾಡಿದ್ವಿ. ಹಾಡು ಬಿಡುಗಡೆ ಹಿಂದಿನ ದಿನವೇ ಸ್ಟೇ ತರಲು ಹೋಗಿದ್ದರು ಆದರೆ ನ್ಯಾಯಾಲಯದಲ್ಲಿ ಹೋರಾಡಿ ಗೆದ್ದಿದ್ವಿ. ಪ್ರಕರಣ ದಾಖಲಿಸುವುದು ಲಹರಿ ಸಂಸ್ಥೆಗೆ ಅಭ್ಯಾಸವಾಗಿ ಹೋಗಿದೆ ಎಂದು ಕಿಡಿಕಾರಿದ್ರು.
ಅಲ್ಲದೇ ಸಿನಿಮಾ ಬಿಡುಗಡೆ ಸಮಯದಲ್ಲಿ ನಿಮ್ಮನ್ನು ನ್ಯಾಯಾಲಯಗಳಿಗೆ ಅಲೆಸುತ್ತೇವೆ’ ಎಂದು ನಮಗೆ ಬೆದರಿಕೆ ಹಾಕಿದ್ದರು. ರಾಜಿಗೆ ಬಂದಾಗಲೂ ಬೆದರಿಕೆ ಹಾಕಿದ್ದರು. ಈಗ ಈ ನೊಟೀಸ್ ಬೇರೆ. ನಾವು ಓಡಿಹೋಗೋರಲ್ಲ. ಕೋರ್ಟ್ನಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇವೆ ಎಂದಿದ್ದಾರೆ.








