ಕಿರಿಕ್ ಪಾರ್ಟಿ ಟೀಮ್ ಗೆ ಕಾನೂನಿನ ಟೆನ್ಷನ್ ಶುರು…! ಆಗಿದ್ದೇನು..?

1 min read

ಕಿರಿಕ್ ಪಾರ್ಟಿ ಟೀಮ್ ಗೆ ಕಾನೂನಿನ ಟೆನ್ಷನ್ ಶುರು…! ಆಗಿದ್ದೇನು..?

ಬೆಂಗಳೂರು:   2016ರಲ್ಲಿ ರಿಲೀಸ್ ಆಗಿದ್ದ ಸಿಫಲ್ ಸ್ಟಾರ್ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ , ಸಂಯುಕ್ತಾ ಹೆಗ್ಡೆ ನಟನೆ ಹಾಗೂ ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಹುತೇಕ ಕಾಲೇಜು ಯುವಕರ ಪಾಲಿಗೆ ಫೇವರೇಟ್ ಸಿನಿಮಾ ಆಗಿದ್ದ ಈ ಸಿನಿಮಾ ಮ್ಯೂಸಿಕ್ ನಿಂದ ಹಿಡಿದು, ಕಾಮಿಡಿ , ಕಥೆ, ಸ್ನೇಹ , ಕಾಲೇಜ್ ಲೈಫ್,  ರೊಮ್ಯಾನ್ಸ್ ನಿಂದ ಭಾರೀ ಸದ್ದು ಮಾಡಿತ್ತು. ಆದ್ರೆ   ಈ ಸಿನಿಮಾ ರಿಲೀಸ್ ಸುಮಾರು 4 ವರೆ ವರ್ಷಗಳೇ ಕಳೆದು ಹೋದ ಬಳಿಕ ಈ ಸಿನಿಮಾ ತಂಡಕ್ಕೆ ಕಂಟಕ ಎದುರಾಗಿದೆ. ಇಡೀ ಚಿತ್ರತಂಡಕ್ಕೆ ಜಾಮೀನುರಹಿತ ವಾರೆಂಟ್​ ಜಾರಿ ಮಾಡಲಾಗಿದೆ.

ಕಿರಿಕ್ ಪಾರ್ಟಿ ಚಿತ್ರದಲ್ಲಿ ಲಹರಿ ಹಾಡುಗಳ ಅಕ್ರಮ ಬಳಕೆ ಮಾಡಿದ್ದ ಆರೋಪವನ್ನು ಚಿತ್ರತಂಡ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ, ಚಿತ್ರ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡೀಯೋಸ್ ಆರೋಪಿಗಳ ಸ್ಥಾನದಲ್ಲಿ ನಿಂತಿದ್ದು ಎಲ್ಲರಿಗೂ ವಾರೆಂಟ್​ ಜಾರಿ ಮಾಡಿ 9 ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.

ಯಾರದ್ದೇ ಅನುಮತಿ ಇಲ್ಲದೇ ನಿಯಮ ಬಾಹಿರವಾಗಿ ಹಾಡುಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಲಹರಿ ರೆಕಾರ್ಡಿಂಗ್ಸ್ ಚಿತ್ರತಂಡದ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಕೇಸ್ ಹಾಕಿತ್ತು. ಕಾಪಿ ರೈಟ್ಸ್ ಆಕ್ಟ್ ಸೆಕ್ಷನ್​ 63ಎ ಮತ್ತು 63 ಬಿ ಅಡಿಯಲ್ಲಿ ಕೇಸ್ ಹಾಕಲಾಗಿತ್ತು. ಈ ಕೇಸ್​ 2019ರಲ್ಲಿ ದಾಖಲಾಗಿತ್ತು.

ಅರ್ಜಿಯಲ್ಲಿ ಸಿನಿಮಾ ರಿಲೀಸ್ ಮಾಡದಂತೆ ಕೋರಿಕೆ ಮಾಡಲಾಗಿತ್ತು. ಆದರೆ ಚಿತ್ರತಂಡ ಅನುಮತಿ ಪಡೆದು ಸಿನಿಮಾ ಬಿಡುಗಡೆ ಮಾಡಿತ್ತು. ಆದರೆ ಕೇಸ್​ಗಳು ಮಾತ್ರ ಕೋರ್ಟ್​ನಲ್ಲಿ ನಡೆಯುತ್ತಲೇ ಇತ್ತು. ಇದೀಗ ಆದೇಶ ಹೊರಬಂದಿದ್ದು ಎಲ್ಲರಿಗೂ ಜಾಮೀನುರಹಿತ ವಾರೆಂಟ್​ ಜಾರಿ ಮಾಡಲಾಗಿದೆ. ಕೇಸ್ ಎದುರಿಸುತ್ತಿರುವ ಎಲ್ಲರೂ ಸಹ ಮೇ 27ರಂದು ಕೋರ್ಟ್​ಗೆ ಹಾಜರಾಗಬೇಕಿದೆ.

ತಮಿಳು ಸಿನಿಮಾದಲ್ಲಿ ನಟಿಸುತ್ತೇನೆ.. ಆದ್ರೆ ಒಂದು ಷರತ್ತಿನ ಮೇಲೆ – ಪುನೀತ್ ರಾಜ್ ಕುಮಾರ್ ಹಾಕಿದ ಕಂಡೀಷನ್ ಏನ್ ಗೊತ್ತಾ..?  

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd