ತಮಿಳು ಸಿನಿಮಾದಲ್ಲಿ ನಟಿಸುತ್ತೇನೆ.. ಆದ್ರೆ ಒಂದು ಷರತ್ತಿನ ಮೇಲೆ – ಪುನೀತ್ ರಾಜ್ ಕುಮಾರ್ ಹಾಕಿದ ಕಂಡೀಷನ್ ಏನ್ ಗೊತ್ತಾ..?  

1 min read

ತಮಿಳು ಸಿನಿಮಾದಲ್ಲಿ ನಟಿಸುತ್ತೇನೆ.. ಆದ್ರೆ ಒಂದು ಷರತ್ತಿನ ಮೇಲೆ – ಪುನೀತ್ ರಾಜ್ ಕುಮಾರ್ ಹಾಕಿದ ಕಂಡೀಷನ್ ಏನ್ ಗೊತ್ತಾ..?

ಬೆಂಗಳೂರು : ಕಿಚ್ಚ ಸುದೀಪ್ , ಉಪೇಂದ್ರ  ಸೇರಿದಂತೆ ಅನೇಕ ನಟರು ತೆಲುಗು, ತಮಿಳು ಸಿನಿಮಾಗಳಲ್ಲೂ ಮಿಂಚಿದ್ದಾರೆ. ಆದ್ರೆ ಪುನೀತ್ ರಾಜಕುಕಾರ್ ಅವರು ಈವರೆಗೂ ಕನ್ನಡ ಬಿಟ್ಟರೆ ಬೇರೆ ಯಾವುದೇ ಭಾಷೆಯ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಆಸಕ್ತಿಯನ್ನೂ ಹೊಂದಿರಲಿಲ್ಲ. ಹಾಗಂತ ಅವರಿಗೆ ಆಫರ್ ಗಳಿಗೇನು ಕೊರೆತೆ ಇರಲಿಲ್ಲ. ಪರ ಭಾಷೆಗಳಲ್ಲಿಯೂ ಅಭಿಮಾನಿಗಳ ಮಿತಿ ಇಲ್ಲ.

ಆದ್ರೆ ಕನ್ನಡಾಭಿಮಾನಕ್ಕೆ ಕಟ್ಟುಬಿದ್ದಿದ್ದಾರೆ. ಕನ್ನಡದಲ್ಲೇ ಸಿನಿಮಾ ಮಾಡಬೇಕೆಂಬ ಅವರ ಹಂಬಲ.  ಅದಕ್ಕೆ ಅವರು ಅನಢೇಕ ಆಫರ್ ಗಳನ್ನ ರಿಜೆಕ್ಟ್ ಮಾಡಿದ್ದಾರೆ. ಈ ಬಾರಿ ಪುನೀತ್ ರಾಜ್ ಕುಮಾರ್ ಅವರು ತಮಿಳು ತೆಲುಗಿನಲ್ಲಿ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರಂತೆ ಅಂತ ಕಾಣತ್ತೆ. ಆದ್ರೆ ಒಂದು ಷರತ್ತಿನ ಮೇಲೆ.

ಹೌದು ಕನ್ನಡದ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ತಮಿಳಿನಲ್ಲಿ ಸಿನಿಮಾ ಮಾಡಬೇಕಾದ್ರೆ ಆ ಸಿನಿಮಾ , ಕನ್ನಡದಲ್ಲೂ ರಿಲೀಸ್ ಆದ್ರೆ ಮಾತ್ರ ಅನ್ನೋ  ಕಂಡೀಷನ್ ಇಟ್ಟಿದ್ದಾರೆ.

‘ನನಗೆ ತಮಿಳಿನ ನಟ, ತಂತ್ರಜ್ಞರೆಂದರೆ ಬಹಳ ಗೌರವ ಇದೆ. ನಾನು ತಮಿಳು ಸಿನಿಮಾದಲ್ಲಿ ನಟಿಸಲು ಇಷ್ಟಪಡುತ್ತೇನೆ, ಆದರೆ ಆ ಸಿನಿಮಾ ಕನ್ನಡ, ತಮಿಳು ಎರಡೂ ಭಾಷೆಯಲ್ಲಿ ಒಟ್ಟಿಗೆ ನಿರ್ಮಾಣವಾದರೆ ಮಾತ್ರ ನಟಿಸುತ್ತೇನೆ’ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿಕೊಂಡಿದ್ದಾರು.

ಅಷ್ಟೇ ಅಲ್ಲ ಬಾಲಿವುಡ್ ನಲ್ಲಿ ಸಿನಿಮಾ ಕುರಿತಾಗಿ ಮಾತನಾಡಿದ್ದ ಅಪ್ಪು, ‘ಕಲೆಗೆ ಗಡಿಗಳಿಲ್ಲ. ನಾನು ಬಾಲಿವುಡ್‌ ಸಿನಿಮಾದಲ್ಲಿ ನಟಿಸಲು ಸಹ ನನಗೆ ಇಷ್ಟವಿದೆ. ನನಗೆ ಮುಖ್ಯ ಪಾತ್ರವೇ ಬೇಕು ಎಂದೇನೂ ಇಲ್ಲ. ಒಳ್ಳೆಯ ಪಾತ್ರವಾದರೂ ಸಾಕು ನಾನು ನಟಿಸಲು ತಯಾರಾಗಿದ್ದೇನೆ ಎಂದು ತಮ್ಮ ನಡೆ ನುಡಿಯಿಂದ ಮತ್ತೊಮ್ಮ ಅಭಿಮಾನಿಗಳ ಮನಗೆದ್ದಿದ್ದಾರೆ.

ಬಿಗ್ ಬಾಸ್  ನ ಮಾಜಿ ಸ್ಪರ್ಧಿ ಚೈತ್ರ ಕೊಟ್ಟೂರು ಆತ್ಮಹತ್ಯೆಗೆ ಯತ್ನ..!

ಅವನು ಹೇಗೆ ಸಾಯುತ್ತಾನೆ? ದಿಲ್ಲಿ -6 ರ ಕ್ಲೈಮಾಕ್ಸ್ ದೃಶ್ಯಕ್ಕೆ ಕಾರಣವಾದ ರಿಷಿ ಕಪೂರ್ ಮಾತು ನೆನಪಿಸಿಕೊಂಡ ಅಭಿಷೇಕ್

BIGGBOSS 8 – ‘ಮುಂದಿನ ವಾರ ಮನೆಯಿಂದ ಆಚೆ ಹೋಗುವುದು ಮಹಿಳಾ ಸ್ಪರ್ಧಿಗಳೇ’..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd