ಬಾಲಿವುಡ್ ನಟಿ ಪ್ರೀತಿ ಜಿಂಟಾ ಮತ್ತೆ ಬಣ್ಣ ಹಚ್ಚಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ನಟಿ ಪ್ರೀತಿ ಮದುವೆಯಾಗಿ ವಿದೇಶದಲ್ಲಿ ಪತಿಯೊಂದಿಗೆ ಇದ್ದಾರೆ. ಅವರು ಐಪಿಎಲ್ ಹಿನ್ನೆಲೆಯಲ್ಲಿ ಆಗಾಗ ಭಾರತಕ್ಕೆ ಬಂದು ಹೋಗುತ್ತಿದ್ದರು. ಆದರೆ, ಈಗ ಮತ್ತೆ ಬಾಲಿವುಡ್ ನಲ್ಲಿ ಬಣ್ಣ ಹಚ್ಚುತ್ತಿದ್ದು, ಅಭಿಮಾನಿಗಳು ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
ಈಗ ನಟಿ ಪ್ರೀತಿ, ಸನ್ನಿ ಡಿಯೋಲ್ ಜೊತೆ ಡ್ಯುಯೇಟ್ ಹಾಡಿಗೆ ಹೆಜ್ಜೆ ಹಾಕಲು ಮುಂದಾಗಿದ್ದಾರೆ. ಗದರ್ 2’ (Gadar 2) ಚಿತ್ರದ ಯಶಸ್ಸಿನ ನಂತರ ಸನ್ನಿ ಡಿಯೋಲ್ (Sunny Deol) ಜೊತೆ ಪ್ರೀತಿ ಜಿಂಟಾ ಜೊತೆಯಾಗಿದ್ದಾರೆ.
ರಾಜ್ಕುಮಾರ್ ಸಂತೋಷಿ ನಿರ್ದೇಶನ ಇದಕ್ಕಿದೆ. ನಟ ಆಮೀರ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ.ಈ ಜೋಡಿ ಹಿಂದೆ ಕೂಡ ಜೊತೆಯಾಗಿಯೇ ಹಲವು ಚಿತ್ರಗಳಲ್ಲಿ ನಟಿಸಿತ್ತು. ಈಗ ಮತ್ತೆ ಜೋಡಿಯಾಗುತ್ತಿದ್ದಾರೆ. ಈ ಚಿತ್ರಕ್ಕೆ ‘ಲಾಹೋರ್ 1947’ ಎಂದು ಹೆಸರಿಡಲಾಗಿದೆ.