BIGGBOSS 8 – ಈ ವಾರ ಮನೆಯಿಂದ ಹೊರ ಹೋಗೋದು ದಿವ್ಯಾ ಸುರೇಶ್..? ಯಾಕಿರಬಹುದು ಗೊತ್ತಾ..?
ಬೆಂಗಳೂರು : ಬಿಗ್ ಬಾಸ್ ಸೀಸನ್ 8 ರ 6ನೇ ವಾರ ಮುಕ್ತಾಗೊಂಡಿದ್ದು, 6 ನೇ ಎಲಿಮಿನೇಷನ್ ಸ್ಪರ್ಧಿಯನ್ನ ಇಂದು ಕಿಚ್ಚ ಸುದೀಪ್ ಅವರು ಅನೌನ್ಸ್ ಮಾಡಲಿದ್ದಾರೆ. ಈ ವಾರ ಮನೆಯಿಂದ ಹೊರಗಡೆ ಹೋಗುವ ಸ್ಪರ್ಧಿ ಯಾರು ಎಂಬ ಕುತೂಹಲವಿದೆ. ಈ ನಡುವೆ ಮತ್ತೊಂದು ಗುಮಾನಿ ಇದೆ. ಅದೇನೆಂದ್ರೆ ಈ ವಾರ ಮನೆಯಿಂದ ಆಚೆ ಹೋಗೋ ಸ್ಪರ್ಧಿ ದಿವ್ಯಾ ಸುರೇಶ್ ಎನ್ನಲಾಗ್ತಿದೆ. ಹೌದು ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗ್ತಿದೆ. ಮನೆಯಲ್ಲಿ ಹುಡುಗಿಯಲ್ಲಿ ಟಾಸ್ಕ್ ವಿಚಾರಕ್ಕೆ ಬಂದ್ರೆ ದಿವ್ಯಾ ಸುರೇಶ್ ಟಫ್ ಕಂಟೆಂಡರ್. ಆದ್ರೆ ಅವರು ಇಷ್ಟು ಬೇಗ ಎಲಿಮಿನೇಟ್ ಆಗ್ತಾರೆ ಅಂದ್ರೆ ಯಾರೂ ನಂಬುವುದಿಲ್ಲ.
ಆದ್ರೆ ಇದೀಗ IPL ಹವಾ ನಡುವೆ ಬಿಗ್ ಬಾಸ್ ವೀಕ್ಷಕರ ಸಂಖ್ಷೆ ಬಹುತೇಕ ಇಳಿಕೆಯಾಗುವ ಚಾನ್ಸಸ್ ಇದೆ. ಹೀಗಾಗಿಯೇ ಪ್ರೇಕ್ಷಕರನ್ನ ಸೆಳೆಯಲು ಬಿಗ್ ಬಾಸ್ ಹೊಸ ಹೊಸ ಟ್ವಿಸ್ಟ್ ಗಳನ್ನ ತರುತ್ತಿದೆ. ಅದ್ರಂತೆ ಸಕ್ರೀಟ್ ರೂಂ ಕಾನ್ಸೆಪ್ಟ್ ಸಹ ಈ ಸೀಸನ್ ನಲ್ಲಿ ಇರಬಹುದಾ ಎನ್ನಲಾಗಿದೆ. ಹಾಗೇನಾದ್ರೂ ಇದು ನಿಜವೇ ಆಗಿದ್ರೆ ದಿವ್ಯಾ ಸುರೇಶ್ ಅವರನ್ನ ಎಲಿಮಿನೇಟ್ ಮಾಡಬಹುದು. ಆದ್ರೆ ದಿವ್ಯಾ ನೇರವಾಗಿ ಮನೆಗೂ ಹೋಗಲ್ಲ , ಅವರನ್ನ ಸೀಕ್ರೆಟ್ ರೂಮ್ ಗೆ ಕಳುಹಿಸಬಹುದು. ಮನೆ ಮಂದಿ ತಾವಿಲ್ಲದೇ ಹೋದ ಸಂದರರ್ಭದಲ್ಲಿ ತಮ್ಮ ಬಗ್ಗೆ ಹೇಗೆ ಮಾತನಾಡುತ್ತಾರೆ ಅನ್ನೋದನ್ನ ಸೀಕ್ರೇಟ್ ರೂಮ್ ನಲ್ಲಿಯೇ ಇದ್ದು, ದಿವ್ಯಾ ಗಮಸಿಬಹುದು. ಆದ್ರೆ ಯಾರು ಮನೆಯಿಂದ ಆಚೆ ಹೋಗಬಹುದು, ಮುಂದೆ ಏನು ಟ್ವಿಸ್ಟ್ ಗಳು ಬರುವುದನ್ನ ನಾವು ಅಂದಾಜಿಸಬಹುದು. ಆದ್ರೆ ಫೈನಲ್ ಆಗಿ ಇಂದಿನ ಸಂಚಿಕೆಯಲ್ಲೇ ಏನೆಲ್ಲಾ ನಡೆಯಬಹುದು ಎನ್ನುವುದು ಗೊತ್ತಾಗಲಿದೆ.
BIGGBOSS 8 – ಈ ವಾರ ಡಬಲ್ ಎಲಿಮಿನೇಷನ್ ಫಿಕ್ಸಾ…?








