BIGGBOSS 8 – ಈ ವಾರ ಡಬಲ್ ಎಲಿಮಿನೇಷನ್ ಫಿಕ್ಸಾ…?
ದಿವ್ಯಾ ಸುರೆಶ್ ಹಾಗೂ ಶಮಂತ್ ಔಟ್…!
ಬೆಂಗಳೂರು : ಬಿಗ್ ಬಾಸ್ ಸೀಸನ್ 8 ರ 6ನೇ ವಾರ ಮುಕ್ತಾಗೊಂಡಿದ್ದು, 6 ನೇ ಎಲಿಮಿನೇಷನ್ ಸ್ಪರ್ಧಿಯನ್ನ ಇಂದು ಕಿಚ್ಚ ಸುದೀಪ್ ಅವರು ಅನೌನ್ಸ್ ಮಾಡಲಿದ್ದಾರೆ. ಆದ್ರೆ ಇತ್ತೀಚೆಗೆ ಮನೆಯಲ್ಲಿ ಸಾಕಷ್ಟು ಟ್ವಿಸ್ಟ್ ಗಳನ್ನ ನೋಡಿರುವ ಸ್ಪರ್ಧಿಗಳಿಗೆ ಮತ್ತೊಂದು ಶಾಕ್ ನೀಡಲಿದ್ದಾರಾ ಬಿಗ್ ಬಾಸ್ ಎನ್ನಲಾಗಿದೆ. ಹೌದು ಈ ವಾರ ಡಬಲ್ ಎಲಿಮಿನೇಷನ್ ಆಗೋದು ಪಕ್ಕಾನಾ ಎನ್ನಲಾಗಿದೆ.
ಈ ವಾರ ಡೇಂಜರ್ ಝೋನ್ ನಲ್ಲಿ ಶಮಂತ್ , ಶುಭಾ ಪುಂಜಾ , ಅರವಿಂದ್ , ನಿಧಿ, ದಿವ್ಯಾ ಸುರೇಶ್ , ಸಂಬರಗಿ, ರಾಜೀವ್ ಇದ್ದಾರೆ. ಇಂದು ಎಲಿಮಿನೇಷನ್ ಇದೆ. ಸಾಮಾನ್ಯವಾಗಿ ವಾರ ವಾರ ಒಬ್ಬ್ಬರ ಇಲಿಮಿನೇಷನ್ ಆಗಿದ್ದು, ಮೊದಲನೇ ವಾರ ಟಿಕ್ ಟಾಕ್ ಸ್ಟಾರ್ ಧನುಶ್ರೀ, 2ನೇ ವಾರ ನಿರ್ಮಲಾ, 3ನೇ ವಾರ ಗೀತಾ, 4ನೇ ವಾರ ಚಂದ್ರಕಲಾ, 5ನೇ ವಾರ ಶಂಕರ್ ಅಶ್ವಥ್ ಹೋಗಿದ್ದಾರೆ.
ಆದ್ರೆ 5 ಹಾಗೂ 6ನೇ ವಾರದಲ್ಲಿ ಮನೆ ಸದಸ್ಯರಿಗೆ ಬಿಗ್ ಬಾಸ್ ಶಾಕ್ ಮೇಲೆ ಶಾಕ್ ಕೊಟ್ಟಿದ್ದರು. 5ನೇ ವಾರ ಚಂದ್ರಚೂಡ್ ಚಕ್ರವರ್ತಿ ಮೊದಲನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದರು. 2ನೇ ವಾರ ಇಬ್ಬಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಆಗಮನವಾಗಿತ್ತು. ಹೀಗೆ ಮೂವರು ಹೊಸ ಸದಸ್ಯರಿಂದಾಗಿ ಮನೆಯ ಹಳೆ ಸದಸ್ಯರೂ ಗಾಬರಿಯಾಗಿದ್ದಾರೆ. ಕಾಂಪಿಟೇಷನ್ ಕೂಡ ಹೆಚ್ಚಾಗಿದೆ.
ಮೂವರ ಎಂಟ್ರಿಯಿಂದ ಸದಸ್ಯರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಈ ವಾರ ಮನೆಯಲ್ಲಿ ಡಬಲ್ ಎಲಿಮಿನೇಷನ್ ಇರಬಹುದಾ ಎಂಬ ಚರ್ಚೆಗಳು ನಡೆಯುತ್ತಾ ಇವೆ. ಡಬಲ್ ಎಲಿಮಿನೇಷನ್ ಆದ್ರೆ ಯಾರೆಲ್ಲಾ ಹೋಬಹುದು… ಡಸಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರು ಅಂದ್ರೆ ಅದು ಶಮಂತ್.. ಹೌದು ಈ ವಾರ ಶಮಂತ್ ಗೌಡ ಅವರೇ ಮನೆಯಿಂದ ಹೊರಹೋಗಬಹುದು ಅಂತ ಹೇಳಲಾಗ್ತಿದೆ. ಒಂದು ವೇಳೆ ಡಬಲ್ ಎಲಿಮಿನೇಷನ್ ಇದ್ರೆ ಶಮಂತ್ ಗೌಡ ಹಾಗೂ ದಿವ್ಯಾ ಸುರೇಶ್ ಒಟ್ಟಾಗಿ ಎಲಿಮಿನೇಟ್ ಆದ್ರೂ ಆಗಬಹುದು. ಇದಕ್ಕೆ ಒಂದು ಕಾರಣ ಬಿಗ್ ಬಾಸ್ ಟ್ವಿಸ್ಟ್ ಕೊಡೋ ಯೋಚನೆ ಮಾಡಬಹುದು. ಅಂದ್ರೆ ಡಬಲ್ ಎಲಿಮಿನೇಷನ್ ಮಾಡಿ ಸದಸ್ಯರನ್ನ ಮನೆಗೆ ಕಳುಹಿಸದೇ ಸೀಕ್ರೆಟ್ ರೂಮ್ ಗೆ ಕಳುಹಿಸಬಹುದು. ಸೀಕ್ರೆಟ್ ರೂಮ್ ಮೂಲಕ ಸ್ಪರ್ಧಿಗಳು ಮನೆ ಮಂದಿ ತಮ್ಮ ಬಗ್ಗೆ ಹೇಗೆ ಯೋಚಿಸುತ್ತಾರೆ ಅನ್ನೋದನ್ನೂ ತಿಳಿಯಬಹುದು.
ಶಮಂತ್ ಹಾಗೂ ದಿವ್ಯಾ ಸುರೇಶ್ ಹೆಸರೇ ಯಾಕೆ..?
ಶಮಂತ್ ಹಾಗೂ ದಿವ್ಯಾ ಮೊದಲಿನಿಂದಲೂ ಎಣ್ಣೆ ಸೀಗೇಕಾಯಿಯಂತಯೆ. ಅವರ ನಡುವೆ ಯಾವುದೇ ಬಾಂಡಿಂಗ್ ಕೂಡ ಇಲ್ಲ. ಇತ್ತ ಇತ್ತೀಚೆಗಷ್ಟೇ ಶಮಂತ್ ದಿವ್ಯಾ ಮೇಲೆ ಪ್ರಸ್ಟ್ರೇಷನ್ ತೀರಿಸಿಕೊಳ್ಳೋಕೆ ಆಕೆಗೆ ಕಳಪೆ ಬೋರ್ಡ್ ಕೊಡೋದಾಗಿಯೂ ಹೇಳಿಕೊಂಡಿದ್ರೂ. ಹೀಗಿರುವಾಗ ಇಬ್ಬರೂ ಒಂದೇ ಕಡೆ ಉಳಿದು ಇತರೇ ಮನೆ ಸದಸ್ಯರನ್ನ ನೋಡುವುದು ಮುಂದೆ ಏನೆಲ್ಲಾ ತಿರುವು ಪಡೆದುಕೊಳ್ಳುತ್ತೆ. ಇನ್ನಷ್ಟು ಜನರ ಕುತೂಹಲ ಹೆಚ್ಚಿಸುತ್ತೆ. ಹೀಗಾಗಿ ಡಬಲ್ ಎಲಿಮಿನೇಷನ್ ಇರಬಹುದು. ಇದ್ರೆ ಶಮಂತ್ ಹಾಗೂ ದಿವ್ಯಾ ಸುರೇಶ್ ಎಲಿಮಿನೇಟ್ ಆಗಬಹುದು. ಇಲ್ಲ ಅಂದ್ರೂ ಕೂಡ ಬಹುತೇಕ ಶಮಂತ್ ಎಲಿಮಿನೇಟ್ ಆಗುವ ಎಲ್ಲಾ ಸಾಧ್ಯತೆಗಳಿವೆ.
ಏ. 15ಕ್ಕೆ ಕಿಚ್ಚ ಸುದೀಪ್ ಫ್ಯಾನ್ಸ್ ಗೆ ಭರ್ಜರಿ ಗುಡ್ ನ್ಯೂಸ್..!
ಏಪ್ರಿಲ್ 13ರಂದು ‘ಮದಗಜ’ ಚಿತ್ರದಿಂದ ಅಭಿಮಾನಿಗಳಿಗೆ ಸರ್ಪ್ರೈಸ್..!