ಕೊರೊನಾ ನಡುವೆ ಚಾಮುಂಡೇಶ್ವರಿ ಹುಂಡಿಗೆ ಭರ್ಜರಿ ಕಾಣಿಕೆ
ಮೈಸೂರು : ಕೊರೊನಾ ಎರಡನೇ ಅಲೆಯ ಅಬ್ಬರದ ನಡುವೆ ನಾಡದೇವತೆ ಚಾಮುಂಡೇಶ್ವರಿ ಹುಂಡಿಗೆ ಭಕ್ತರು ಕಾಣಿಕೆ ಅರ್ಪಿಸಿ ಭಕ್ತಿ ಮರೆದಿದ್ದಾರೆ.
ಮಾರ್ಚ್ ತಿಂಗಳಿನ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, 1,68,66,208 ರೂ. ಸಂಗ್ರಹವಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಸಂಗ್ರಹವಾದ ಹಣದಲ್ಲಿ 2 ಸಾವಿರ ಮುಖಬೆಲೆಯ 308 ನೋಟುಗಳಿಂದ 6.16 ಲಕ್ಷ ರೂ., 500 ಮುಖಬೆಲೆಯ 11647 ನೋಟುಗಳಿಂದ 58,23,500 ರೂ.,
200 ರೂ. ಮುಖಬೆಲೆ 4393 ನೋಟುಗಳಿಂದ 8,78,600 ರೂ., 100 ರೂ. ಮುಖಬೆಲೆಯ 56414 ನೋಟುಗಳಿಂದ 56,41,400 ರೂ.,
50 ರೂ. ಮುಖಬೆಲೆಯ 32,751 ನೋಟುಗಳಿಂದ 16,37,550 ರೂ., 20 ರೂ. ಮುಖಬೆಲೆಯ 34,151 ನೋಟುಗಳಿಂದ 6,83,020 ರೂ.,
10 ರೂ. ಮುಖಬೆಲೆಯ 1,25,377 ನೋಟುಗಳಿಂದ 12,53,770 ರೂ., 5 ರೂ. ಮುಖಬೆಲೆ 990 ನಾಣ್ಯಗಳಿಂದ 4950 ರೂ.,
2 ರೂ. ಮುಖಬೆಲೆಯ 8 ನಾಣ್ಯಗಳಿಂದ 16 ರೂ., 1 ರೂ. ಮುಖಬೆಲೆಯ 82 ನಾಣ್ಯಗಳಿಂದ 82 ರೂ.ಗಳಿಂದ ಮಾರ್ಚ್ ತಿಂಗಳಲ್ಲಿ ಒಟ್ಟಾರೆ 1,65,38,888 ರೂ. ಸಂಗ್ರಹವಾಗಿದೆ.










