ಮಂಗಳೂರಿನ ಆರ್ಯ ಸಮಾಜದ ವಸತಿ ಸಮುಚ್ಚಯದಲ್ಲಿ ಬಾಡಿಗೆಗೆ ವಾಸವಾಗಿದ್ದ ವಿದ್ಯಾರ್ಥಿಯೊಬ್ಬ ತನ್ನ ಗೆಳೆಯನನ್ನು ಸೂಟ್ ಕೇಸ್ ನೊಳಗೆ ತುಂಬಿಸಿ ಸಾಗಿಸುತ್ತಿದ್ದಾಗ ಸಿಕ್ಕಿ ಬಿದ್ದಿದಾನೆ.
ಮಂಗಳೂರಿನ ಆರ್ಯ ಸಮಾಜದ ವಸತಿ ಸಮುಚ್ಚಯದಲ್ಲಿ ಬಾಡಿಗೆಗೆ ವಾಸವಾಗಿದ್ದ ವಿದ್ಯಾರ್ಥಿಯೊಬ್ಬ ಲಾಕ್‍ಡೌನ್ ಪರಿಣಾಮ ಬೋರ್ ಆಗುತ್ತಿದ್ದು, ತನ್ನ ಗೆಳೆಯನನ್ನು ಕರೆದುಕೊಂಡು ಬರುವುದಾಗಿ ಸಮುಚ್ಚಯದ ಅಸೋಸಿಯೇಷನ್ ಬಳಿ ಹೇಳಿದ್ದನು. ಇದಕ್ಕೆ ಅಸೋಸಿಯೇಷನ್ ನಿಯಮದಂತೆ ನಿರಾಕರಣೆ ಮಾಡಿತ್ತು.
ತನ್ನ ಗೆಳೆಯನನ್ನು ಹೇಗಾದರೂ ಮಾಡಿ ಕರೆತರಬೇಕೆಂದು ಯೋಚಿಸಿದ ವಿದ್ಯಾರ್ಥಿ, ಹೊಸ ಉಪಾಯವನ್ನು ಮಾಡಿದ್ದಾನೆ. ಅದರಂತೆ ಗೆಳೆಯನನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ಕರೆತರುವ ಪ್ರಯತ್ನ ಮಾಡಿದ್ದಾನೆ. ಆದರೆ ಸೂಟ್ ಕೇಸ್ ಸಾಗಿಸುವಾಗ ಅದರಲ್ಲಿ ಚಲನೆ ಕಂಡು ಬಂದಿದ್ದು, ಸಂಶಯಕ್ಕೊಳಗಾದ ಸಮುಚ್ಚಯದವರು ಸೂಟ್‍ಕೇಸ್ ತೆರೆಯುವಂತೆ ಹೇಳಿದ್ದಾರೆ. ಗಾಬರಿಗೊಳಗಾದ ವಿದ್ಯಾರ್ಥಿ ಕೊನೆಗೂ ಸಮುಚ್ಚಯದವರ ಒತ್ತಾಯದ ಮೇರೆಗೆ ಸೂಟ್‍ಕೇಸ್ ತೆರೆದಿದ್ದಾನೆ. ಆಗ ಅದರೊಳಗೆ ಗೆಳೆಯನಿದ್ದ ಸತ್ಯಾಂಶ ಬಹಿರಂಗವಾಗಿದೆ. ಕೂಡಲೇ ಸಮುಚ್ಚಯದವರು ಕದ್ರಿ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದು ಬಂದ ಕದ್ರಿ ಪೊಲೀಸರು ಇಬ್ಬರನ್ನೂ ಸೂಟ್‍ಕೇಸ್ ಸಮೇತ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ.
ಇರಾನ್‌ನ 45 ನಾವಿಕರ ಮೃತದೇಹ ಹಸ್ತಾಂತರ
ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆಯ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ 45 ನಾವಿಕರ ಮೃತದೇಹಗಳನ್ನು ಶ್ರೀಲಂಕಾ ಸರ್ಕಾರವು ಇರಾನ್ ರಾಯಭಾರ ಕಚೇರಿಗೆ ಹಸ್ತಾಂತರಿಸಿದೆ. ಈ ಘಟನೆ ಹಿಂದೂ...








