kodagu ಮಡಿಕೇರಿ | ಥಿಯೇಟರ್ ಗಳತ್ತ ಮುಖ ಮಾಡದ ಪ್ರೇಕ್ಷಕರು
ಮಡಿಕೇರಿ : ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ತಾಂಡವವಾಡುತ್ತಿದ್ದು, ಬಹುತೇಕರು ಮನೆಯಿಂದ ಹೊರಗೆ ಬರುವುದಕ್ಕೂ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದು ಜಿಲ್ಲೆಯಲ್ಲಿ 99 ಕೊರೊನಾ ಕೇಸ್ ಗಳು ಪತ್ತೆಯಾಗಿರುವುದು ಜನರನ್ನ ಮತ್ತಷ್ಟ ಭಯಭೀತಿಗೊಳ್ಳುವಂತೆ ಮಾಡಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರೆ ಸ್ವಯಂ ಪ್ರೇರಿತವಾಗಿ ಸೆಲ್ಫ್ ಲಾಕ್ ಡೌನ್ ಮಾಡಿಕೊಳ್ಳುತ್ತಾ ಇದ್ದಾರೆ.
ಪರಿಣಾಮ ಜಿಲ್ಲೆಯಲ್ಲಿರುವ ಚಿತ್ರಮಂದಿಗಳಿಗೆ ಕಳೆದ ಒಂದು ವಾರದಿಂದ ಪ್ರೇಕ್ಷಕರು ಸುಳಿಯುತ್ತಿಲ್ಲ.
ಜನರು ಥಿಯೇಟರ್ ಗಳತ್ತ ಮುಖ ಮಾಡದ ಕಾರಣ, ಮಡಿಕೇರಿಯಲ್ಲಿದ್ದ ಒಂದೇ ಒಂದು ಕಾವೇರಿ ಮಹಲ್ ಥಿಯೇಟರ್ ಮುಚ್ಚಿ ಹೋಗಿದೆ.
ಅದೇ ರೀತಿ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದ ಗಣೇಶ್ ಥಿಯೇಟರ್, ಕುಶಾಲನಗರದ ಥಿಯೇಟರ್ನಲ್ಲೂ ದಿನಕ್ಕೆ ಒಂದು ಶೋ ಮಾತ್ರ ನಡೆಯುತ್ತಿದೆ.










