‘ಕೊರೊನಾವೈರಸ್ ಸಿಕ್ಕರೆ ಫಡ್ನವಿಸ್ ಬಾಯಿಗೆ ಹಾಕುತ್ತೇನೆ’ – ಸಂಜಯ್ ಗಾಯಕ್ವಾಡ್
ಮುಂಬೈ : ಕೊರೋನಾ ವೈರಸ್ ಕಾಣುವಂತಿದ್ದಿದ್ದರೆ ನಾನು ಅದನ್ನು ದೇವೇಂದ್ರ ಫಡ್ನವಿಸ್ ಅವರ ಬಾಯೊಳಗೆ ಹಾಕುತ್ತಿದ್ದೆ ಎಂದು ಶಿವಸೇನೆಯ ಶಾಸಕ ಸಂಜಯ್ ಗಾಯಕ್ವಾಡ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ರೆಮ್‌ಡೆಸಿವಿರ್ ಚುಚ್ಚುಮದ್ದು ಪೂರೈಕೆ ವಿಷಯದಲ್ಲಿ ವಿವಾದ ಉಂಟಾಗಿರುವ ಬೆನ್ನಲ್ಲೇ ಶಿವಸೇನೆಯ ಶಾಸಕ ಸಂಜಯ್ ಗಾಯಕ್ವಾಡ್ ನೀಡಿರುವ ಮತ್ತೊಂದು ವಿವಾದಾತ್ಮಕ ಹೇಳಿಕೆ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಸಚಿವರನ್ನು ಬೆಂಬಲಿಸುವುದು ಬಿಟ್ಟು ಬಿಜೆಪಿ ನಾಯಕರು ಅವರನ್ನು ಅಪಹಾಸ್ಯ ಮಾಡುತ್ತಿದ್ದಾರೆ ಹಾಗೂ ಈ ಸರ್ಕಾರ ಹೇಗೆ ವಿಫಲವಾಗಲಿದೆ. ಎಂಬುದನ್ನು ನೋಡುತ್ತಿದ್ದಾರೆ. ಆದ್ದರಿಂದ ಕೊರೊನಾವೈರಸ್ ಸಿಕ್ಕರೆ ಫಡ್ನವಿಸ್ ಬಾಯಿಗೆ ಹಾಕುತ್ತೇನೆ ಎಂದು ಶಿವಸೇನೆಯ ಶಾಸಕ ಸಂಜಯ್ ಗಾಯಕ್ವಾಡ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.








