ಮಾಸ್ಕ್ ಧರಿಸಲ್ಲ – ನಿಮ್ಮ ಎದುರೇ ಗಂಡನಿಗೆ ಕಿಸ್ ಮಾಡ್ತೇನೆ – ಪೊಲೀಸರ ಜೊತೆ ಅಸಭ್ಯ ವರ್ತನೆ..!

1 min read

ಮಾಸ್ಕ್ ಧರಿಸಲ್ಲ – ನಿಮ್ಮ ಎದುರೇ ಗಂಡನಿಗೆ ಕಿಸ್ ಮಾಡ್ತೇನೆ – ಪೊಲೀಸರ ಜೊತೆ ಅಸಭ್ಯ ವರ್ತನೆ..!

ನವದೆಹಲಿ : ದಂಪತಿಯೊಂದು ವೀಕೆಂಟ್ ಲಾಕ್ ಡೌನ್ ನಿಯಮವನ್ನ ಗಾಳಿಗೆ ತೂರಿದ್ದೂ ಅಲ್ಲದೇ ಕಫ್ರ್ಯೂ ಪಾಸ್ ಇಲ್ಲದೇ ಜೊತೆಗೆ ಮಾಸ್ಕ್ ಅನ್ನೂ ಧರಿಸದೇ ಕಾರನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರನ್ನ ತಡೆದ ಪೊಲೀಸರು ಮಾಸ್ಕ್ ಧರಿಸದ ಬಗ್ಗೆ ವಿಚಾರನೆ ನಡೆಸಿದಾಗ ದಂಪತಿ ದೆಹಲಿ ಪೊಲೀಸರ ಜೊತೆಗೆ ವಸಭ್ಯವಾಗಿ ವರ್ತಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ದಂಪತಿಯ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಡಿಯೋದಲ್ಲಿ ಮಹಿಳೆ ಪೊಲೀಸರಿಗೆ ಅವಾಜ್ ಹಾಕಿದ್ದೂ ಅಲ್ಲದೇ ನಾನು ಇಲ್ಲಯೇ ನನ್ನ ಗಂಡನಿಗೆ ಮುತ್ತು ಇಡುತ್ತೇನೆ ನೀವು ನನ್ನನ್ನು ತಡೆಯಬಹುದೇ. ಕಾರ್ ಏಕೆ ನಿಲ್ಲಿಸಿದ್ದೀರಿ. ಎಂದು ಪೊಲೀಸರಿಗೆ ಹೇಳುತ್ತಾ ಕೂಗಾಡಿದ್ದಾಳೆ. ಕಾರಿನಲ್ಲಿದ್ದಾಗಲೂ ಮಾಸ್ಕ್ ಧರಿಸಬೇಕೆಂದು ಹೈಕೋರ್ಟ್ ಆದೇಶ ನೀಡಿದೆ ಎಂದು ಪೊಲೀಸರು ಮಹಿಳೆಗೆ ಮನವರಿಕೆ ಮಾಡಿದರೂ ಸುಮ್ಮನಾಗದೆ ದಂಪತಿ ಪೊಲೀಸರ ಜೊತೆಗೆ ವಾಗ್ವಾದ ಮಾಡಿದ್ದಾರೆ. ಪೊಲೀಸರು ಮಹಿಳಾ ಪೊಲೀಸ್ ಕರೆಸಿ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ಮಹಿಳೆಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ. ಘಟನೆ ದೆಹಲಿಯ ದರಿಯಾಗಂಜ್ನಡಲ್ಲಿ ನಡೆದಿದೆ.

ಅಲ್ಲದೇ ವಾಗ್ವಾದದ ನಡುವೆ ಮಹಿಳೆಯು ತಾನು ಸಬ್ ಇನ್ಸ್ ಪೆಕ್ಟರ್ ಮಗಳು ಹಾಗೂ ನಾನು ಯುಪಿಎಸ್ ಸಿ ಪರೀಕ್ಷೆಯಲ್ಲೂ ಪಾಸ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಅದಕ್ಕೆ ಪೊಲೀಸರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರು ಮತ್ತಷ್ಟು ಗೌರವದಿಂದ ಹಾಗೂ ಜಾವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಅನಾಗರಿಕರಂತೆ ಅಲ್ಲ ಎಂದಿದ್ದಾರೆ.

ನಗು ನಗುತ್ತಾ ಮತ್ತೆ ಹೊಸದಾಗಿ ಜೀವನ ಆರಂಭಿಸಿದ ಚೈತ್ರಾ ಕೊಟ್ಟೂರು..!

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd