ವಿಜಯಪುರ: ಅಲ್ಲದೆ, ಮಂಗಳವಾರ ಒಂದು ಸಾವು ಕೂಡ ಸಂಭವಿಸಿತ್ತು. ಹೀಗಾಗಿ ಕೆಲ ಪ್ರದೇಶಗಳಲ್ಲಿ ಸೀಲ್ ಡೌನ್ ಮಾಡಲಾಗಿದೆ. ಈ ಮಧ್ಯೆ ವ್ಯಕ್ತಿಯೋರ್ವ ಬಟ್ಟೆ ಇಲ್ಲದೆ ಬೆತ್ತಲೆಯಾಗಿ ಸುತ್ತಾಡಿದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ.
ಹೌದು..! ವಿಜಯಪುರದ ಬಡೆ ಕಮಾನ್ ರಸ್ತೆ ಭಾಗದಲ್ಲಿ ಸೀಲ್ ಡೌನ್ ಆದೇಶ ಹೊರಡಿಸಲಾಗಿದೆ. ಆದರೆ, ನಿನ್ನೆ ಸಂಜೆ ರಸ್ತೆಯಲ್ಲಿ ವ್ಯಕ್ತಿಯೋರ್ವ ಬಟ್ಟೆ ಇಲ್ಲದೆ ಓಡಾಡುತ್ತಿದ್ದ. ನಂತರ ಆತ ಮಾನಸಿಕ ಅಸ್ವಸ್ಥ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಮನಸ್ಸಿನ ಸ್ಥಿಮಿತತೆ ಕಳೆದುಕೊಂಡಿರುವುದರಿಂದ ಆತ ಈ ರೀತಿ ಬೆತ್ತಲಾಗಿ ಸುತ್ತಾಡುತ್ತಿದ್ದ. ಈ ವೇಳೆ ಅದೇ ದಾರಿಯಲ್ಲಿ ಸಾಗುತ್ತಿದ್ದ ಯುವಕನೋರ್ವ ತನ್ನ ಶರ್ಟ್ ಬಿಚ್ಚಿ ಆತನಿಗೆ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾನೆ. ಯುವಕನ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ.








