ಸಬ್ಬಸಿಗೆ ಸೊಪ್ಪಿನ ಅಂಬಡೆ
ಸಬ್ಬಸಿಗೆ ಸೊಪ್ಪು – 1 ಕಟ್ಟು
ಕಡಲೆಬೇಳೆ – 1 ಕಪ್
ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸು – 2-3
ಕೊತ್ತಂಬರಿ ಸೊಪ್ಪು – ಸ್ವಲ್ಪ
ಜೀರಿಗೆ – 1ಚಮಚ
ಓಮ – 1 ಚಮಚ
ಚಿಕ್ಕದಾಗಿ ಕತ್ತರಿಸಿದ ಶುಂಠಿ – 1 ತುಂಡು
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ
ಅಕ್ಕಿ ಹುಡಿ 2 ಚಮಚ

ಮೊದಲಿಗೆ ಕಡಲೆ ಬೇಳೆಯನ್ನು ನೀರಲ್ಲಿ ತೊಳೆದು 1 ರಿಂದ 2 ಗಂಟೆ ನೆನೆಸಿಡಿ . ಬಳಿಕ ಸಬ್ಬಸಿಗೆ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
ನೆನೆಸಿದ ಕಡಲೆ ಬೇಳೆಯನ್ನು ನೀರು ಹಾಕದೆ ಗಟ್ಟಿಯಾಗಿ ರುಬ್ಬಿ.

ಬಳಿಕ ಆ ಹಿಟ್ಟಿಗೆ ಹೆಚ್ಚಿದ ಸೊಪ್ಪು, ಅಕ್ಕಿ ಹುಡಿ, ಶುಂಠಿ, ಉಪ್ಪು, ಜೀರಿಗೆ, ಓಮ ಹಾಕಿ ಚೆನ್ನಾಗಿ ಕಲಸಿ. ನಂತರ ಅದರಿಂದ ಸಣ್ಣ ಉಂಡೆಗಳನ್ನು ತಯಾರಿಸಿ.
ಬಾಣಲೆಯಲ್ಲಿ ಎಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿ, ಉಂಡೆಗಳನ್ನು ಚಪ್ಪಟೆಯಾಗಿ ತಟ್ಟಿ ಎಣ್ಣೆಯಲ್ಲಿ ಬಿಡಿ. ಕಾದ ಎಣ್ಣೆಯಲ್ಲಿ ಎರಡೂ ಬದಿಗಳನ್ನು ಚೆನ್ನಾಗಿ ಹುರಿದು ತೆಗೆಯಿರಿ.
ಸಬ್ಬಸಿಗೆ ಸೊಪ್ಪಿನ ಅಂಬಡೆ ಸವಿಯಲು ಸಿದ್ಧ.
ಖರ್ಜೂರ ಸೇವನೆಯ ಅದ್ಬುತ ಆರೋಗ್ಯ ಪ್ರಯೋಜನಗಳು#Saakshatv #healthtips #healthbenefits #dates https://t.co/LE8py0evyt
— Saaksha TV (@SaakshaTv) April 15, 2021
ಕ್ಯಾರೆಟ್ ಹೋಳಿಗೆ#Saakshatv #cookingrecipe #Carrotholige https://t.co/XQMjOC4oq9
— Saaksha TV (@SaakshaTv) April 15, 2021
ಪರ್ವೀನ್ ಬಾಬಿ ಬಾಲ್ಯದಿಂದಲೇ ಮಾನಸಿಕ ಅಸ್ವಸ್ಥರಾಗಿದ್ದರು – ಕಬೀರ್ ಬೇಡಿ#ParveenBabi #KabirBedi #bollywood #saakshatv #entertainment #cinema https://t.co/rWeCXynqN0
— Saaksha TV (@SaakshaTv) April 15, 2021
ಆನ್‌ಲೈನ್ ನಲ್ಲಿ ಪಾಸ್‌ಪೋರ್ಟ್‌ಗೆ ತ್ವರಿತವಾಗಿ ಅರ್ಜಿ ಸಲ್ಲಿಸುವುದು ಹೇಗೆ – ಇಲ್ಲಿದೆ ಮಾಹಿತಿ#passport #online https://t.co/YkIXs2iFan
— Saaksha TV (@SaakshaTv) April 15, 2021
#Saakshatv #cookingrecipe #sabbasigesoppu #ambade








