ಮುಂದುವರೆದ ಕೊರೊನಾ ಆರ್ಭಟ : 24 ಗಂಟೇಲಿ 2,624 ಮಂದಿ ಸಾವು india
ನವದೆಹಲಿ : ದೇಶದಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 3,46,786 ಕೇಸ್ ಗಳು ಪತ್ತೆಯಾಗಿದ್ದು, 2,624 ಮಂದಿ ಕೊನೆಯುಸಿರೆಳೆದಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ದೇಶದಲ್ಲೀಗ ಸೋಂಕಿತರ ಸಂಖ್ಯೆ 1,66,10,481 ಹಾಗೂ ಮೃತರ ಸಂಖ್ಯೆ 1,89,544ಕ್ಕೆ ಏರಿಕೆಯಾಗಿದೆ.

ಇನ್ನು ಒಟ್ಟು 1.66 ಕೋಟಿ ಸೋಂಕಿತರ ಪೈಕಿ 1,38,67,997 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿನ್ನೂ 25,52,940 ಸಕ್ರಿಯ ಪ್ರಕರಣಗಳಿವೆ.









