ಡಾ. ರಾಜ್ ಕುಮಾರ್ ಅವರ 92ನೇ ಹುಟ್ಟುಹಬ್ಬ : ವರನಟನ ನೆನಪಲ್ಲಿ ವಿಶೇಷ ಹಾಡು ಹಾಡಿದ ಅಪ್ಪು..!
ಇಂದು ವರ ನಟ ಡಾ ರಾಜ್ ಕುಮಾರ್ ಅವರ ಜನ್ಮದಿನ… ಪ್ರತಿ ವರ್ಷ ಈ ದಿನ ಅಭಿಮಾನಿಗಳು ವಿಶೇಷವಾಗಿ ಅಲ್ಲಲ್ಲಿ ಆಚರನೆ ಮಾಡುತ್ತಿದ್ದರು. ಆದ್ರೆ ಈ ಬಾರಿ ಕೊರೊನಾ ಹಾವಳಿಯಿಂದ ಎಲ್ಲೂ ಆಚರಣೆಗಳು ಅಷ್ಟಾಗಿ ಕಂಡುಬಂದಿಲ್ಲ. ಆದ್ರೆ ಕುಟುಂಬಸ್ಥರು ಮನೆಯಲ್ಲಿಯೇ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಇತ್ತ ಪುನೀತ್ ರಾಜ್ ಕುಮಾರ್ ತಂದೆಯನ್ನ ನೆನೆದು ಭಾವುಕರಾಗಿ ಹಾಡು ಹಾಡಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಪ್ಪಾಜಿ ಹುಟ್ಟುಹಬ್ಬದ ಪ್ರಯುಕ್ತ ಹಾಡಿನ ಮೂಲಕ ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. ‘ಬಡವರ ಬಂಧು’ ಸಿನಿಮಾದ ಹಾಡನ್ನು ಹಾಡುವ ಮೂಲಕ ಅಭಿಮಾನಿಗಳನ್ನು ಸಂತಸ ಪಡಿಸಿದ್ದಾರೆ. ‘ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕತೆಯ ಹೇಳಿವೆ…’ ಹಾಡನ್ನು ಹೇಳಿ ಪುಟ್ಟ ಕಾಣಿಕೆ ಎಂದು ಬರೆದುಕೊಂಡಿದ್ದಾರೆ. ಈ ಹಾಡನ್ನು ಅಪ್ಪು ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಪುನೀತ್ ಹಾಡಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
https://twitter.com/i/status/1385767951110873089








