ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ನ ಪ್ರತಿ ಡೋಸ್ ಗೆ 600 ರೂ – ಇದು ಜಾಗತಿಕ ಮಾರುಕಟ್ಟೆಯಲ್ಲೇ ಅತ್ಯಧಿಕ !
ವಿಶ್ವದ ಅತ್ಯಂತ ದೊಡ್ಡ ಲಸಿಕಾ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಖಾಸಗಿ ಆಸ್ಪತ್ರೆಗಳಿಗೆ ತಾನು ಉತ್ಪಾದಿಸಿ ಕೊಡುತ್ತಿರುವ ಕೋವಿಶೀಲ್ಡ್ ಲಸಿಕೆಯ ಪ್ರತಿ ಡೋಸ್‌ಗೆ 600 ರೂ ದರ ನಿಗದಿಗೊಳಿಸಿ ಘೋಷಿಸಿದೆ.

ವಾಸ್ತವವಾಗಿ, ಮೊದಲ ಶಿಪ್ ಮಟ್ ನಂತರ ಪೂನವಾಲ್ಲಾ, “ನಾವು ಮೊದಲ 100 ಮಿಲಿಯನ್ ಡೋಸ್‌ಗಳಿಗೆ 200 ರೂ.ಗಳ ವಿಶೇಷ ಬೆಲೆಯನ್ನು ಭಾರತ ಸರ್ಕಾರಕ್ಕೆ ಮಾತ್ರ ನೀಡಿದ್ದೇವೆ… ಮತ್ತು ನಂತರ ಅದು ಖಾಸಗಿ ಮಾರುಕಟ್ಟೆಗಳಲ್ಲಿ 1,000 ರೂಗಳಿಗೆ ಮಾರಾಟವಾಗಲಿದೆ” ಎಂದು ಹೇಳಿದ್ದರು.
ಆದರೆ ಎಸ್‌ಐಐನ ಇತ್ತೀಚಿನ ದರ ಕಾರ್ಡ್, ಖಾಸಗಿ ಮಾರುಕಟ್ಟೆಗೆ ಪ್ರತಿ ಡೋಸ್‌ಗೆ 600 ರೂ ಎಂದು ನಮೂದಿಸಿದ್ದು, ಇದು ಯಾವುದೇ ಪ್ರಮುಖ ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆಗಿಂತ ಹೆಚ್ಚಾಗಿದೆ.
ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಖರೀದಿಗಳಿಗೆ ಪ್ರತಿ ಡೋಸ್‌ಗೆ 400 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ ಡೋಸೇಜ್ ಗೆ 600 ರೂ. ನಂತೆ ನೀಡಲು ಸೀರಮ್ ಇನ್‌ಸ್ಟಿಟ್ಯೂಟ್ ನಿರ್ಧರಿಸಿದೆ.
ಯುಎಸ್, ಯುಕೆ ಮತ್ತು ಯುರೋಪಿಯನ್ ಒಕ್ಕೂಟದಂತಹ ದೇಶಗಳಲ್ಲಿನ ಸರ್ಕಾರಗಳು ನೇರವಾಗಿ ಅಸ್ಟ್ರಾಜೆನೆಕಾದಿಂದ ಪಡೆಯುತ್ತಿರುವ ಬೆಲೆಗಿಂತ ಇದು ಹೆಚ್ಚಾಗಿದೆ.

ಕೇಂದ್ರ ಸರ್ಕಾರ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ನಡುವೆ, ಮೂರನೇ ಹಂತದ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಮೇ 1 ರಿಂದ ಪ್ರಾರಂಭಿಸಿದೆ. ಮೂರನೇ ಹಂತದ ವ್ಯಾಕ್ಸಿನೇಷನ್ ಡ್ರೈವ್ ನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬಹುದು.
ಕೇಂದ್ರ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಉತ್ಪಾದಕರಿಂದಲೇ ನೇರವಾಗಿ ಲಸಿಕೆ ಖರೀದಿಸಲು ಅವಕಾಶ ನೀಡಿದ್ದು, ಮೇ 1ರಿಂದ ಖಾಸಗಿ ಆಸ್ಪತ್ರೆಗಳಿಗೆ ಸರಕಾರದಿಂದ ಲಸಿಕೆ ಪೂರೈಕೆ ಮತ್ತು 250 ರೂ. ದರದಲ್ಲಿ ಲಸಿಕೆ ನೀಡುವ ಸೌಲಭ್ಯ ಇರುವುದಿಲ್ಲ.
ಆದರೆ ಸರಕಾರಿ ಲಸಿಕೆ ಕೇಂದ್ರಗಳಲ್ಲಿ ಉಚಿತವಾಗಿ ಕೊರೊನಾ ಲಸಿಕೆ ನೀಡುವುದು ಮುಂದುವರಿಯಲಿದೆ.
ಆರೋಗ್ಯಕರ ಶಕ್ತಿಯುತ ಲಿವರ್/ಶ್ವಾಸಕೋಶಕ್ಕಾಗಿ ಮನೆಮದ್ದುಗಳು#Saakshatv #healthtips #Homeremedies https://t.co/N9Q4oC4hwR
— Saaksha TV (@SaakshaTv) April 20, 2021
ದರ್ಶನ್ ಮೇಲೆ ನಾನು ಬಹಳ ಕ್ರಶ್ ಹೊಂದಿದ್ದೇನೆ – ನಟಿ ಗಾಯತ್ರಿ ಐಯ್ಯರ್#Darshan #VinodhPrabhakar #gayathri #sandalwood https://t.co/ovvgICjjcW
— Saaksha TV (@SaakshaTv) April 20, 2021
ಬಿರುಬಿಸಿಲಿಗೆ ಚಾಕಲೇಟ್ ಮಿಲ್ಕ್ ಶೇಕ್#Saakshatv #cookingrecipe #chocolate #milkshake https://t.co/JCAQoyp8GI
— Saaksha TV (@SaakshaTv) April 20, 2021
ಕೋವಿಡ್ -19 ಎರಡನೇ ಅಲೆ ಪ್ರಕರಣಗಳು ಭಾರತದಲ್ಲಿ ಎಷ್ಟು ಸಮಯದ ಬಳಿಕ ಇಳಿಮುಖ ಕಾಣಲಿದೆ ?#covid19 #secondwave https://t.co/ViqnbxhzTN
— Saaksha TV (@SaakshaTv) April 20, 2021
#Covishield #privatehospitals








