ಹಲಸಿನ ಹಣ್ಣಿನ ಮುಳಕ
ಬೇಕಾಗುವ ಸಾಮಗ್ರಿಗಳು
ಹಲಸಿನ ಹಣ್ಣಿನ ತೊಳೆ – 1/2 ಕಪ್
ಬೆಲ್ಲದ ಪುಡಿ – 6 ಚಮಚ
ಅಕ್ಕಿ ಹುಡಿ – 4 ಚಮಚ
ಮೈದಾ ಹುಡಿ – 1 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ

ಮೊದಲಿಗೆ ಹಲಸಿನ ಹಣ್ಣಿನ ತೊಳೆಯನ್ನು ತರಿ ತರಿಯಾಗಿ ರುಬ್ಬಿ. ನಂತರ ಇದಕ್ಕೆ ಅಕ್ಕಿ ಹುಡಿ, ಮೈದಾ ಹುಡಿ, ಉಪ್ಪು, ಬೆಲ್ಲದ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ಇದನ್ನು ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಕಾದ ಬಳಿಕ ಹಿಟ್ಟನ್ನು ಸ್ವಲ್ಪ ಸ್ವಲ್ಪ ತೆಗೆದು ಎಣ್ಣೆಯಲ್ಲಿ ಬಿಡಿ. (ಇದನ್ನು ಉಂಡೆ ಮಾಡುವ ಅಗತ್ಯ ಇಲ್ಲ) ಕೆಂಪಗಾಗುವವರೆಗೆ ಹುರಿದು ತೆಗೆಯಿರಿ. ಬಿಸಿ ಬಿಸಿ ಹಲಸಿನ ಹಣ್ಣಿನ ಮುಳಕ ಸವಿಯಲು ಸಿದ್ಧ.
https://twitter.com/SaakshaTv/status/1384696430070091776?s=19
https://twitter.com/SaakshaTv/status/1384714173343440896?s=19
https://twitter.com/SaakshaTv/status/1386566586421547008?s=19
ಕೊರೋನಾ ಸೋಂಕು ಧೃಡಪಟ್ಟರೆ ಏನು ಮಾಡಬೇಕು? ಇಲ್ಲಿದೆ ಆರೋಗ್ಯ ತಜ್ಞರ ಮಾಹಿತಿ#covidpositive #expertexplains https://t.co/SQKAbn69Dn
— Saaksha TV (@SaakshaTv) April 26, 2021
#Saakshatv #cookingrecipe #jackfruitmuluka








