ನಿಖಿಲ್ ಕುಮಾರಸ್ವಾಮಿ-ರೇವತಿ ಮದುವೆ ನಾಳೆ ನಡೆಯಲಿದೆ. ಬಿಡದಿ ಸಮೀಪದಲ್ಲಿರುವ ಕೇತಗಾನಹಳ್ಳಿಯಲ್ಲಿನ ಫಾರಂ ಹೌಸ್ ನಲ್ಲಿ ಮದುವೆಗೆ ಸಿದ್ಧತೆ ನಡೆಸಲಾಗಿದೆ. ನಿಖಿಲ್-ರೇವತಿ ಮದುವೆಯನ್ನು ಈ ಮೊದಲು ರಾಮನಗ-ಚನ್ನಪಟ್ಟಣದ ಮಧ್ಯದಲ್ಲಿರುವ ಜಾನಪದ ಲೋಕದ ಸಮೀಪ ಅದ್ಧೂರಿ ಮಂಟಪ ನಿರ್ಮಿಸಿ ನಡೆಸಲು ತೀರ್ಮಾನಿಸಲಾಗಿತ್ತು. ಕೊರೊನಾ ವೈರಸ್ ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮದುವೆ ಸ್ಥಳವನ್ನು ಬೆಂಗಳೂರಿಗೆ ವಧುವಿನ ಮನಗೆ ಸ್ಥಳಾಂತರಿಸಲಾಗಿತ್ತು. ವಧುವಿನ ಮನೆಯಲ್ಲಿ ಸರಳವಾಗಿ ಮದುವೆ ನಡೆಸಲು ಎರಡು ಕುಟುಂಬಗಳು ತೀರ್ಮಾನಿಸಿದ್ದರು. ಇದೀಗ ರೇವತಿ ಅವರು ಇರುವ ಬಡವಾಣೆಯನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ಆ ಕಾರಣಕ್ಕಾಗಿ ಬಿಡದಿ ಬಳಿ ಇರುವ ಹೆಚ್ ಡಿಕೆ ತೋಟದ ಮನೆಗೆ ಸ್ಥಳಾಂತರಿಸಲಾಗಿದೆ. ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಧಾರೆ ಮೂಹೂರ್ತ ನಡೆಯಲಿದೆ. ಪುತ್ರನ ಮದುವೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜನರಲ್ಲಿ ವಿನಂತಿಸಿದ್ದಾರೆ. ಈ ಬಗ್ಗೆ ಕುರಿತು ಸಂದೇಶ ನೀಡಿದ ಅವರು, ನಿಖಿಲ್ ಗೌಡ ಹಾಗೂ ರೇವತಿ ಅವರ ವಿವಾಹ ಇದೇ 17 ರಂದು ಕೇತಗಾನಹಳ್ಳಿಯ ತೋಟದಲ್ಲಿ ಜರುಗಲಿದೆ. ಈ ವೇಳೆ ತಾವೆಲ್ಲರೂ ತಾವಿದ್ದ ಸ್ಥಳದಿಂದಲೆ ವಧುವರರನ್ಧು ಆಶೀರ್ವಾದ ಮಾಡಬೇಕಾಗಿ ವಿನಂತಿಸುತ್ತೇನೆ. ಕೊರೋನಾ ಪಿಡುಗು ಮರೆಯಾದ ಮೇಲೆ ತಮ್ಮೆಲ್ಲರ ಆಶೀರ್ವಾದಕ್ಕಾಗಿ ದಂಪತಿಗಳು ನಿಮ್ಮ ಮುಂದೇ ಬರಲಿದ್ದಾರೆ. ದಯಮಾಡಿ ತಾವು ಅಭಿಮಾನದಿಂದ ಬಂದು ನಮ್ಮಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುವುದು ಬೇಡ ಆರೋಗ್ಯ ಸಮಾಜ ನಿರ್ಮೀಸೋಣ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ
ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...








