BIGGBOSS 8 – ದಿವ್ಯಾಗೆ ಕಾಳು ಹಾಕಿ, ಪ್ರಿಯಾಂಕಾಗೆ ಕವನ ಹೇಳಿ , ವೈಷ್ಣವಿ ಹಿಂದೆ ಬಿದ್ದ ಶಮಂತ್..!
ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲಿ ಸಿಕ್ಕಾಪಟ್ಟೆ ಲೈಮ್ ಲೈಟ್ ನಲ್ಲಿಯೇ ಇದ್ದ ಶಮಂತ್ ಕ್ರಮೇಣ ಸೈಡ್ ಲೈನ್ ಆಗೋದಕ್ಕೆ ಶುರುವಾದ್ರು. ಶಮಂತ್ ಎಲಿಮಿನೇಟ್ ಆದ್ರೂ ಅದೃಷ್ಟದಿಂದ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಈಗ ಸೈಲೆಂಟ್ ಆಗಿದ್ರೆ ಆಗಲ್ಲಾ ಅಂತ ಡಿಸೈಡ್ ಆಗಿರುವ ಶಮಂತ್ ಲೈಮ್ ಲೈಟ್ ನಲ್ಲಿಯೇ ಇರೋದಕ್ಕೆ ಏನಾದ್ರೂ ಮಾಡ್ತಾನೆ ಇರುತ್ತಾರೆ. ಇದ್ರಿಂದ ಶಮಂತ್ ಸಿಕ್ಕಾಪಟ್ಟೆ ಮುಂಚೆಗಿಂತಲೂ ಪವರ್ ಫುಲ್ ಸ್ಪರ್ಧಯಾಗಿ ಕಾಣಿಸಿಕೊಳ್ತಿದ್ಧಾರೆ.
ಅಂದ್ಹಾಗೆ ಶಮಂತ್ ಆರಂಬದಲ್ಲಿ ದಿವ್ಯಾ ಸುರೇಶ್ ಹಿಂದೆ ಬಿದ್ದಿದ್ದರು. ಆದ್ರೆ ಶಮಂತ್ ಎಷ್ಟೇ ಟ್ರೈ ಮಾಡಿದ್ರು ದಿವ್ಯಾಸುರೇಶ್ ಅದಕ್ಕೆ ಕ್ಯಾರೇ ಎನ್ನುತ್ತಿರಲಿಲ್ಲ. ಇದರಿಂದಾಗಿ ಪ್ರಸ್ಟ್ರೇಟ್ ಆಗಿದ್ದ ಶಮಂತ್ ಬಳಿಕ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಪ್ರಿಯಾಂಕಾ ತಿಮ್ಮೇಶ್ ಬಗ್ಗೆ ಸ್ಪಾಟ್ ಅಲ್ಲೇ ಕ್ಯೂಟ್ ಡೈಲಾಗ್ ಹೊಡೆದು ಪ್ರಿಯಾಂಕಾ ಗಮನ ಸೆಳೆದಿದ್ದರು. ಇದೀಗ ವೈಷ್ಣವಿಗೆ ಚಿನ್ನ ಅಂದು ಸುದ್ದಿಯಲ್ಲಿದ್ಧಾರೆ.
ಹೌದು ನಿಧಿ ಹಾಗೂ ವೈಷ್ಣವಿ ಬಾತ್ ರೂಮ್ ಏರಿಯಾದಲ್ಲಿ ನಿಂತು ಮುಖಕ್ಕೆ ಫೇಸ್ ಪ್ಯಾಕ್ ಹಾಗೂ ಕ್ರೀಮ್ ಹಚ್ಚಿಕೊಳ್ಳುತ್ತಿದ್ದ ವೇಳೆ ಶಮಂತ್ ಇಬ್ಬರ ಮಧ್ಯೆ ನಿಂತು ಕುಡಿದವರಂತೆ ನಟಿಸಿದ್ದಾರೆ. ಅಲ್ಲದೇ ನಿಧಿ ಸುಬ್ಬಯ್ಯಗೆ ಫೇಸ್ ಪ್ಯಾಕ್ ಹಾಕಿಕೊಳ್ಳಬೇಕಾದರೆ ಚಿನ್ನ ಹುಷಾರು ಕಣ್ಣಿಗೆ ಹೋಗಿ ಬಿಟ್ಟೀತು ಎನ್ನುತ್ತಾರೆ. ಆಗ ವೈಷ್ಣವಿ ಎಷ್ಟು ಕಾಳಜಿ ಎಂದು ಹೇಳಿದಾಗ ಶಮಂತ್ ಚಿನ್ನ ನೀನು ಹಾಗೇ ಮಾತನಾಡಬೇಡ ಎಂದು ಹೇಳುತ್ತಾರೆ.
ಆಗ ನಿಧಿ ಎಷ್ಟು ಚಿನ್ನ ನಿನಗೆ ಎನ್ನುತ್ತಾರೆ. ಇದಕ್ಕೆ ಉತ್ತರಿಸಿದ ಶಮಂತ್ ನಿಧಿಗೆ ನೀನು ನನ್ನ ಚಿನ್ನ, ವೈಷ್ಣವಿ ನನ್ನ ರನ್ನ ಎಂದು ಹೇಳುತ್ತಾರೆ. ಈ ವೇಳೆ ವೈಷ್ಣವಿ ನೀನು ಯಾರು ಹಾಗಾದ್ರೆ ಅಂದಾಗ, ನಾನು ಮುನ್ನ ಎನ್ನುತ್ತಾರೆ. ಇದಕ್ಕೆ ವೈಷ್ಣವಿ ರೌಡಿ ಬೇಬಿ ಸ್ಟೈಲ್ ನಲ್ಲಿ ನೀನು ಹೀಗೆ ಹೆಚ್ಚಿಗೆ ಮಾತನಾಡುತ್ತಿದ್ದರೆ ನಿನಗೆ ಗುನ್ನ ಇಟ್ಟು ಬಿಡುತ್ತೇನೆ ಎಂದು ಹೇಳುತ್ತಾರೆ.
ಈ ವೇಳೆ ಶಮಂತ್ ಅಗ್ನಿಸಾಕ್ಷಿ ಧಾರವಾಹಿಯ ವಿಚಾರ ಎಳೆತಂದು ಕಾಮಿಡಿ ಮಾಡಿದ್ದಾರೆ. ನೀನು 6 ವರ್ಷ ವಿಲನ್ ನನ್ನು ಮನೆಯಲ್ಲಿಯೇ ಇಟ್ಟುಕೊಂಡು ಕಣ್ಣಾ ಮುಚ್ಚಾಲೆ ಆಟ ಆಡಿದ್ಯಾ. ತಾಕತ್ತು ಇರಬೇಕು ಯಾವಾಗಲೂ, ಒಂದೇ ಒಂದು ಸುಳಿವು ನೀನು ಸಿದ್ದಾರ್ಥ್‍ಗೆ ಕೊಟ್ಟಿದ್ದರೆ ನೀನು ಎಲ್ಲೋ ಹೋಗಿ ಬಿಡುತ್ತಿದ್ದೆ. ಚಿನ್ನ 6 ವರ್ಷ ನನ್ನ ಲೈಫ್‍ನಲ್ಲಿ ಅರ್ಧಗಂಟೆ 8 ರಿಂದ 8.30ವರೆಗೂ ನಿನಗೋಸ್ಕರ ಎತ್ತಿಟ್ಟು ಬಿಟ್ಟಿದ್ದೆ. ನಂತರ ಬಾರ್ ಕಡೆಗೆ ಹೋಗುತ್ತಿದ್ದೆ ಎಂದು ಕುಡಿದವರ ರೀತಿಯಲ್ಲೇ ವಾಲಾಡುತ್ತಾ ಮಾತನಾಡಿದ್ದಾರೆ.
BIGGBOSS 8 – ವೇಶ್ಯೆಯರ ಮನೆಯಲ್ಲಿ ಹುಟ್ಟಿದ ಪ್ರೀತಿ ಭಯಾನಕ ಅಂತ್ಯ ಕಂಡ ಸತ್ಯ ಬಿಚ್ಚಿಟ್ಟ ಚಕ್ರವರ್ತಿ..!