ಐಪಿಎಲ್ | ಆರ್ ಸಿಬಿ v/s ಪಂಜಾಬ್ : ಗೆಲುವು ಯಾರಿಗೆ..? Match Prediction
ಅಹ್ಮದಾಬಾದ್ : ಐಪಿಎಲ್ ನ 26 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜಸ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಲಿವೆ. ಆಡಿದ ಆರು ಪಂದ್ಯಗಳಲ್ಲಿ ಒಂದರಲ್ಲಿ ಸೋತು ಐದರಲ್ಲಿ ಗೆದ್ದಿರುವ ಆರ್ ಸಿಬಿ ಇಂದಿನ ಪಂದ್ಯ ಗೆದ್ದು ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನಕ್ಕೇರುವ ತವಕದಲ್ಲಿದೆ. ಇತ್ತ ಆಡಿದ ಆರು ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನಷ್ಟೇ ಗೆದ್ದಿರುವ ಪಂಜಾಬ್, ಗೆಲುವಿನ ಕಾತುರದಲ್ಲಿದೆ.
ಹೆಡ್ ಟು ಹೆಡ್
ಐಪಿಎಲ್ ನಲ್ಲಿ ಈವರೆಗೂ 26 ಮ್ಯಾಚ್ ಗಳನ್ನು ಆಡಿದ್ದು, ಪಂಜಾಬ್ 14 ಪಂದ್ಯಗಳನ್ನ ಗೆದಿದ್ದು, ಬೆಂಗಳೂರು 12 ಪಂದ್ಯಗಳನ್ನ ಜಯ ಸಾಧಿಸಿದೆ.
ಪಿಚ್ ರಿಪೋರ್ಟ್
ಇಂದಿನ ಪಂದ್ಯ ಅಹಮದಬಾದ್ ನಲ್ಲಿ ನಡೆಯಲಿದೆ. ಪಿಚ್ ಬ್ಯಾಟಿಂಗ್‍ಗೆ ಅದ್ಭುತವಾಗಿದ್ದು. ನಿಧಾನಗತಿಯ ಬೌಲರ್‍ಗಳಿಗೂ ಸ್ವಲ್ಪ ನೆರವಾಗಬಹುದು. ಒಂದು ವೇಳೆ ಇದು ಸಾಧ್ಯವಾಗದೇ ಇದ್ದಲ್ಲಿ ಪಂದ್ಯವಿಡೀ ಬ್ಯಾಟಿಂಗ್‍ಗೆ ನೆರವಾಗಬಹುದು.
ಬಲಾಬಲ
ಆರ್‍ಸಿಬಿಗೆ ಮ್ಯಾಕ್ಸಿ, ಎಬಿಡಿ ಆನೆಬಲ. ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಸಾಲಿಡ್ ಓಪನಿಂಗ್ ನೀಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸಿ ಮೊದಲ ಪಂದ್ಯದಿಂದಲೂ ಅಬ್ಬರಿಸುತ್ತಿದ್ದಾರೆ. ಇವರಿಗೆ ಮಿ.360 ಡಿಗ್ರಿ ಎಬಿಡಿ ಉತ್ತಮ ಸಾಥ್ ನೀಡುತ್ತಿದ್ದಾರೆ. ಮ್ಯಾಕ್ಸಿ ಡೆತ್ ಓವರ್?ನಲ್ಲಿ ಎದುರಾಳಿ ತಂಡದ ಬೌಲರ್ ಗಳ ಬೆವರಿಳಿಸಬಲ್ಲರು. ಒಟ್ಟಾರೆ ಆರ್ ಸಿಬಿ ಬ್ಯಾಟಿಂಗ್ ಲೈನ್ ಆಪ್ ಸಾಲಿಡ್ ಆಗಿ ವರ್ಕೌಟ್ ಆಗುತ್ತಿದ್ದು, ಇವತ್ತು ಬ್ಯಾಟಿಂಗ್ ದರ್ಬಾರು ಮುಂದುವರೆಯುವ ಸಾಧ್ಯತೆಗಳಿವೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಹೊಸ ಬಾಲ್ ಮತ್ತು ಡೆತ್ ಓವರ್ ಗಳಲ್ಲಿ ಎದುರಾಳಿಗಳನ್ನು ಕಟ್ಟಿ ಹಾಕುತ್ತಿದ್ದಾರೆ. ಈ ಸೀಸನ್ ನಲ್ಲಿ ಹೆಚ್ಚು ಡಾಟ್ ಬಾಲ್ ಮಾಡಿದ್ದಾರೆ. ಇತ್ತ ಪರ್ಪಲ್ ಕ್ಯಾಪ್ ಹೋಲ್ಡರ್ ಹರ್ಷಲ್ ಪಟೇಲ್ ತಂಡಕ್ಕೆ ಬಲ ಹೆಚ್ಚಿಸುತ್ತಿದ್ದಾರೆ.
ಇತ್ತ ಪಂಜಾಬ್ ತಂಡದ ಬ್ಯಾಟಿಂಗ್‍ನಲ್ಲಿ ವೈಫಲ್ಯ ಕಾಣುತ್ತಿದೆ. ಪಂಜಾಬ್ ಕಿಂಗ್ಸ್ ತಂಡ ಬ್ಯಾಟಿಂಗ್‍ನಲ್ಲಿ ಸಾಕಷ್ಟು ತಿಣುಕಾಡುತ್ತಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‍ಮನ್ ರನ್ ಗಳಿಸಲು ಪರದಾಡುತ್ತಿದ್ದಾರೆ. ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಕ್ರಿಸ್ ಗೇಲ್ ಅವರಿಂದ ಇನ್ನೂ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬಂದಿಲ್ಲ. ಆದರೆ, ಬೌಲಿಂಗ್ ವಿಭಾಗ ಅದ್ಭುತವಾಗಿದೆ.
ಸಂಭಾವ್ಯ ಆರ್‍ಸಿಬಿ ತಂಡ : ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ(ನಾಯಕ), ರಜತ್ ಪಾಟಿದರ್, ಗ್ಲೆನ್ ಮ್ಯಾಕ್ಸ್‍ವೆಲ್, ಎಬಿ ಡಿವಿಲಿಯರ್ಸ್(ವಿ.ಕೀ), ವಾಷಿಂಗ್ಟನ್ ಸುಂದರ್, ಡೇನಿಯಲ್ ಸ್ಯಾಮ್ಸ್, ಕೈಲ್ ಜೇಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಹಾಗು ಯುಜ್ವೇಂದ್ರ ಚಹಲ್.
ಸಂಭಾವ್ಯ ಪಂಜಾಬ್ ಕಿಂಗ್ಸ್ ತಂಡ : ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ದೀಪಕ್ ಹೂಡಾ, ಡೇವಿಡ್ ಮಲಾನ್, ಮೊಯ್ಸೆಸ್ ಹೆನ್ರಿಕ್ಸ್, ಶಾರೂಖ್ ಖಾನ್, ಕ್ರಿಸ್ ಜೋರ್ಡನ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ಹಾಗು ರವಿ ಬಿಷ್ಣೋಯ್.
ಸಾಕ್ಷಾ ಡ್ರೀಮ್ ಇಲೆವೆನ್ ಟೀಂ
ವಿಕೆಟ್ ಕೀಪರ್ : ಕೆ.ಎಲ್ ರಾಹುಲ್, ಎಬಿಡಿ ವಿಲಿಯರ್ಸ್
ಬ್ಯಾಟ್ಸ್ ಮೆನ್ : ದೆವದತ್ ಪಡಿಕಲ್ ( ನಾಯಕ) , ವಿರಾಟ್, ಮಯಾಂಕ್, ರಾಜತ್ ಪಾಟಿದರ್
ಆಲ್ ರೌಂಡರ್ : ದೀಪಕ್ ಹೂಡಾ
ಬೌಲರ್ : ಹರ್ಷಲ್ ಪಟೇಲ್, ಕೈಲ್ ಜೆಮಿನ್ಸನ್, ಸಿರಾಜ್ ( ಉಪನಾಯಕ) , ಅರ್ಶೀದೀಪ್ ಸಿಂಗ್










