BIGGBOSS 8 – 15 ದಿನಗಳ ಕಾಲ ಕ್ವಾರಂಟೈನ್ ಬಳಿಕ ಮನೆಗೆ ವಾಪಸ್ಸಾಗಲಿದ್ದಾರೆ ದಿವ್ಯಾ ಉರುಡುಗ..!
ಬಿಗ್ ಬಾಸ್ ಮನೆಯಲ್ಲಿ ಪ್ರಣಯ ಪಕ್ಷಿಗಳಂತೆ ಸದಾ ಒಟ್ಟಾಗಿ ಇರುತ್ತಿದ್ದ ಜೋಡಿ ಅಂದ್ರೆ ಅದು ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರದ್ದು.. ಈ ಜೋಡಿ ನಡುವಿನ ಕೆಮಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಅಲ್ಲದೇ ಈ ಜೋಡಿಯ ಹೆಸರಲ್ಲಿ ಹ್ಯಾಷ್ ಟ್ಯಾಗ್ ಫ್ಯಾನ್ ಪೇಜ್ ಗಳನ್ನೇ ಆರಂಭಿಸಿದ್ಧಾರೆ. #arviya ಟ್ರೆಂಡಿಂಗ್ ನಲ್ಲಿದೆ.
ಆದ್ರೆ ಇತ್ತೀಚೆಗೆ ದಿವ್ಯಾ ಉರುಡುಗ ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. ಇದ್ರಿಂದಾಗಿ ಪ್ರೇಕ್ಷಕರು ಬೇಸರಗೊಂಡಿದ್ದಾರೆ. ಮನೆ ಸದಸ್ಯರು ಸಾಕ್ ಆಗಿದ್ದು, ಬೇಜಾರಾಗಿದ್ದಾರೆ. ಆದ್ರೆ ಇವರೆಲ್ಲರಿಗಿಂತ ಹೆಚ್ಚು ದೂಃಖ ಆಗಿರುವುದು ಅರವಿಂದ್ ಗೆ.. ಅರವಿಂದ್ ಪದೇ ಪದೇ ದಿವ್ಯಾರನ್ನ ನೆನೆದು ಕಣ್ಣೀರು ಹಾಕುತ್ತಿರುವುದು ಕಂಡುಬರುತ್ತಿದೆ.
ಅದ್ರಲ್ಲೂ ದಿವ್ಯಾ ಉರುಡುಗ ಹಾಗೂ ಅರವಿಂದ್ ಅಭಿಮಾನಿಗಳು ದಿವ್ಯಾ ಉರುಡುಗ ಅವರನ್ನ ವಾಪಸ್ ಬಿಗ್ ಬಾಸ್ ಗೆ ಕರೆತರುವಂತೆ ಮನವಿ ಮಾಡಿಕೊಳ್ತಿದ್ದಾರೆ. ಬಿಗ್ ಬಾಸ್ ಮನೆಗೆ ಉರುಡುಗ ಆರೋಗ್ಯವಾಗಿ ವಾಪಸ್ ಆಗುವ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಈ ನಡುವೆ ದಿವ್ಯಾ ಮನೆಗೆ ವಾಪಸ್ ಬರಲಿದ್ದಾರೆ ಎನ್ನಲಾಗ್ತಿದೆ.
ಆದ್ರೆ ಕೊರೊನಾ ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಿದ್ದ ಕಾರಣ ದಿವ್ಯಾ 15 ದಿನಗಳ ಕಾಲ ಕ್ವಾರಂಟೈನ್ ಆಗಬೇಕಿದೆ. ಅದಾದ ನಂತರ ಬಿಗ್ ಬಾಸ್ ಗೆ ವಾಪಸ್ ಮರಳಬಹುದು ಎಂದು ಹೇಳಲಾಗ್ತಿದೆ. ಅಷ್ಟೇ ಅಲ್ಲದೇ ಶೋ ಮೇಕರ್ ಗಳು ಈ ಬಗ್ಗೆ ಖಚಿತಪಡಿಸಿದ್ದು, ‘ದಿವ್ಯಾ ಚೇತರಿಸಿಕೊಳ್ತಿದ್ದಾರೆ. ಆದ್ರೆ ಕೊರೊನಾ ಸಂದರ್ಭದಿಂದಾಗಿ ಅವರು 15 ದಿನಗಳವರೆಗೂ ಕ್ವಾರಂಟೈನ್ ಆದ ಬಳಿಕ ವಾಪಸ್ ಮನೆಗೆ ಮರಳಲಿದ್ದಾರೆ’ ಎಂದಿದ್ದಾರೆ.
ಇನ್ನೂ ಟಾಸ್ಕ್ ಆಗಲಿ ಇತರೇ ಯಾವುದೇ ವಿಚಾರಗಳು ಬಂದರೂ ದಿವ್ಯಾ ಉರುಡುಗ ಉತ್ತಮವಾಗಿ ಪ್ರದರ್ಶನ ನೀಡುತ್ತಾರೆ. ಮಹಿಳಾ ಸ್ಪರ್ಧಿಗಳು ಪೈಕಿ ಟಫ್ ಕಂಟೆಂಡರ್ ಆಗಿರುವ ಜೊತೆಗೆ ಪುರುಷ ಸ್ಪರ್ಧಿಗಳಿಗೂ ಗೇಮ್ ನಲ್ಲಿ ಅಷ್ಟೇ ಟಫ್ ಆಗಿ ಟಕ್ಕರ್ ಕೊಡ್ತಾರೆ ದಿವ್ಯಾ..








