ಚಾಮರಾಜನಗರ : ಕೊರೊನಾಗೆ ಹೆದರಿ ವೃದ್ಧೆ ನೇಣಿಗೆ ಶರಣು
ಚಾಮರಾಜನಗರ : ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ 2ನೇ ಅಲೆಯ ಪರಿಣಾಮ ಅತ್ಯಂತ ಭೀಕರವಾಗಿದೆ.. ರಾಜ್ಯದಲ್ಲಿ 2ನೇ ಅಲೆ ತಡೆಗೆ ಲಾಕ್ ಡೌನ್ ವಿಧಿಸಲಾಗಿದೆ.. ಇದ್ರಿಂದಾಗಿ ದಿನಗೂಲಿ ಕಾರ್ಮಿಕರು , ಬಡವರು ತೊಂದರೆ ಅನುಭವಿಸುತ್ತಿದ್ದಾರೆ.
ಮತ್ತೊಂದೆಡೆ ಸೋಂಕಿತರು ಸಾವಿನ ಸಂಖ್ಯೆಗಳು ಹೆಚ್ಚಾಗ್ತಿದ್ದು, ಈ ಪರಿಸ್ಥಿರಿಯಲ್ಲಿ ಜನರು ಹಾಗೂ ಸೋಂಕಿತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲಲ್ಲಿ ಕೋವಿಡ್ ಸೋಂಕಿತರು ಹೆದರಿ ಆತ್ಮಹತ್ಯೆಗೆ ಶರಣಾಗ್ತಿದ್ದಾರೆ. ಇಂತಹದ್ದೇ ಒಂದು ಘಟನೆ ಇದೀಗ ಚಾಮರಾಜನಗರದಲ್ಲಿಯೂ ನಡೆದಿದೆ. ಇತ್ತೀಚೆಗೆ ಚಾಮರಾಜನಗರದಲ್ಲಿ ಬೆಡ್ ಕೊರತೆಯಿಂದಾಗಿ 24 ಜನರು ಮೃತಪಟ್ಟ ಬಳಿಕ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದರು. ಇದೀ ಘಟನೆಯಿಂದ ಭಯಭೀತರಾಗಿದ್ದ ವೃದ್ಧೆಯೊಬ್ಬರು ನೇಣಿಗೆ ಶರಣಾಗಿದ್ದಾರೆ.








