ನನ್ನ ಜೀವಮಾನದಲ್ಲಿ ಇಂಥ ಹೀನಾಯ ಸರ್ಕಾರ ನೋಡಿಲ್ಲ : ಕೆ.ಹೆಚ್.ಮುನಿಯಪ್ಪ KH Muniyappa
ಚಿಕ್ಕಬಳ್ಳಾಪುರ : ನನ್ನ ಜೀವಮಾನದಲ್ಲಿ ಇಂಥ ಹೀನಾಯ ಸರ್ಕಾರ ನೋಡಿಲ್ಲ ಎಂದು ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿರ್ವಹಣೆ ಮಾಡುವ ಯೋಗ್ಯತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕಿಲ್ಲ.
ವೈದ್ಯಕೀಯ ಸೌಲಭ್ಯಗಳು ಸಿಗದೆ ಜನ ಬೀದಿಗಳಲ್ಲಿ ಸಾಯುತ್ತಿದ್ದಾರೆ. ನನ್ನ ಜೀವಮಾನದಲ್ಲಿ ಇಂಥ ಹೀನಾಯ ಸರ್ಕಾರ ನೋಡಿಲ್ಲ.
ಜಗತ್ತಿನಲ್ಲೆ ಇಂಥ ನಿರ್ಲಕ್ಷ್ಯ ಸರ್ಕಾರವನ್ನು ನಾನು ನೋಡಿಲ್ಲ ಎಂದು ಕಿಡಿಕಾರಿದರು.
ಇದಕ್ಕೂ ಮುನ್ನಾ ಕೋಲಾರದಲ್ಲಿ ಕಾಂಗ್ರೆಸ್ ಕೇರ್ ಆಂಬುಲೇನ್ಸ್ ಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಿ.ಆರ್ ಸುದರ್ಶನ್, ರಾಮಲಿಂಗಾ ರೆಡ್ಡಿ, ನಲಪ್ಪಾಡ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ಸೇರಿದಂತೆ ಹಲವರು ಭಾಗಿಯಾಗಿದ್ದರು.










