ವಾಷಿಂಗ್ಟನ್ : ಕೊರೊನಾ ವಿಚಾರದಲ್ಲಿ ವಿಶ್ವದ ಕಣ್ಣಿಗೆ ಮಣ್ಣೆರೆಚ್ಚುತ್ತಿರುವ ಚೀನಾ, ಕೊರೊನಾ ಸೋಂಕಿಗೆ ನಮ್ಮ ದೇಶದಲ್ಲಿ ಕೇವಲ 4,632 ಮಂದಿ ಮಾತ್ರ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ. ಆದ್ರೆ 2019ರ ಡಿಸೆಂಬರ್ ನಿಂದ ಮಾರ್ಚ್ ತಿಂಗಳವರೆಗೆ ಕೊರೊನಾ ಮಹಾಮಾರಿ ಚೀನಾದ ಎರಡು ಕೋಟಿ 10 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಆಹುತಿ ಪಡೆದಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಅಮೆರಿಕ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.
ಹೌದು..! ಚೀನಾದ ನರಿ ಬುದ್ಧಿಯ ಅರಿವಿರುವ ಅಮೆರಿಕ ಗುಪ್ತಚರ ಇಲಾಖೆ ಕೊರೊನಾ ಮಹಾಮಾರಿಗೆ ಕಮ್ಯುನಿಸ್ಟ್ ದೇಶದಲ್ಲಿ ಬಲಿಯಾದವರ ನೈಜ ಚಿತ್ರಣವನ್ನು ತೆರೆದಿಟ್ಟಿದೆ. ಡಿಜಿಟಲ್ ದೇಶವಾಗಿರುವ ಚೀನಾದ ಜನರು ತಮ್ಮ ಪ್ರತಿಯೊಂದು ಕಾರ್ಯಕ್ಕೂ ಮೊಬೈಲನ್ನೇ ಅವಲಂಬಿಸಿದ್ದಾರೆ. ಆದರೆ ಕಳೆದ ಡಿಸೆಂಬರ್ ನಿಂದ ಕೋಟಿ ಕೋಟಿ ಮೊಬೈಲ್ ಸಿಮ್ ಗಳು ಯೂಸ್ ಆಗಿಲ್ಲ. ಇದರ ಜೊತೆಗೆ 84 ಲಕ್ಷ ಲ್ಯಾಂಡ್ ಲೈನ್ ಫೋನ್ ಗಳು ಬಂದ್ ಆಗಿವೆ. ಇದರ ಮಾನದಂಡದ ಆಧಾರದ ಮೇಲೆ ಚೀನಾದಲ್ಲಿ 2.10 ಕೋಟಿ ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂಬ ಮಾಹಿತಿಯನ್ನು ಅಮೆರಿಕ ಬಹಿರಂಗಪಡಿಸಿದೆ.
ಇದೆಲ್ಲದರ ನಡುವೆ ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಚೀನಾ ಹರಸಾಹಸ ನಡೆಸುತ್ತಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಸ್ಥಾಪಿಸಿದ್ದ ಆಸ್ಪತ್ರೆಗಳ ನೆಲಮಾಳಿಗೆಗಳನ್ನು ಆಯಸಿಡ್ ವಾಶ್ ಮಾಡಿರುವುದು, ಬೇರೆ ದೇಶದಿಂದ ಲಕ್ಷ ಲಕ್ಷ ಕಾಫಿನ್ ಬಾಕ್ಸ್ ಗಳನ್ನು ತರಿಸಿಕೊಂಡಿರುವುದು ಇದೀಗ ಬೆಳಕಿಗೆ ಬಂದಿದೆ.








