“ಸಂಪೂರ್ಣವಾಗಿ ಲಸಿಕೆ ಪಡೆದವರು ಮಾಸ್ಕ್ ಧರಿಸಬೇಕಿಲ್ಲ”
ವಾಷಿಂಗ್ಟನ್ : ಕಿಲ್ಲರ್ ಕೊರೊನಾ ಕಾಟದಿಂದ ಚೇತರಿಸಿಕೊಂಡು ಸಹಜ ಸ್ಥಿತಿಯತ್ತ ಮರಳುತ್ತಿರುವ ಅಮೆರಿಕಾರದಲ್ಲಿ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರು ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ ಎಂದು ಅಲ್ಲಿನ ಸರ್ಕಾರ ಹೇಳಿದೆ.
ಈ ಬಗ್ಗೆ ಹೊಸ ಯುಎಸ್ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಸಂಪೂರ್ಣವಾಗಿ ವ್ಯಾಕ್ಸಿನ್ ಹಾಕಿಸಿಕೊಂಡ ಜನರು ಮಾಸ್ಕ್ ಧರಿಸಬೇಕಿಲ್ಲ.
ದೈಹಿಕ ಅಂತರ ಕಾಯ್ದುಕೊಳ್ಳಬೇಕಿಲ್ಲ. ದೇಶದೊಳಗೆ ಪ್ರಯಾಣಿಸುವವರು ಕ್ವಾರಂಟೈನ್ ಗೆ ಒಳಪಡುವ ಅಗತ್ಯತೆಯಿಲ್ಲ ಎಂದಿದೆ.
ಇನ್ನು ಈ ಬಗ್ಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಟ್ವೀಟ್ ಮಾಡಿದ್ದು, “ಕೋವಿಡ್ ವಿರುದ್ಧದ ಹೋರಾಟದಲ್ಲಿ ಇಂದು ಅಮೆರಿಕಕ್ಕೆ ಒಳ್ಳೆಯ ದಿನ.
ಲಸಿಕೆ ಪಡೆಯಿರಿ ಅಥವಾ ವ್ಯಾಕ್ಸಿನ್ ಹಾಕಿಸಿಕೊಳ್ಳುವವರೆಗೂ ಮಾಸ್ಕ್ ಧರಿಸಿ” ಎಂದು ಬರೆದುಕೊಂಡಿದ್ದಾರೆ.
ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಬೈಡನ್ ಇಬ್ಬರೂ ಮಾಸ್ಕ್ ಧರಿಸದೇ ಶ್ವೇತಭವನದ ಎದುರು ಮಾಧ್ಯಮಗಳ ಮುಂದೆ ಬಂದಿದ್ದಾರೆ.









