ಮಹಾಮಾರಿ ಕೊರೊನಾ ವೈರಸ್ ದೇಶವನ್ನು ಸಂಕಷ್ಟಕ್ಕೆ ನೂಕಿದೆ. ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಲಾಕ್ ಡೌನ್ ಕಠಿಣ ನಿರ್ಧಾರವನ್ನು ಕೈಗೊಂಡಿದೆ. ಏತನ್ಮಧ್ಯೆ ಭಾರತದ ಲಾಕ್ ಡೌನ್ ಪರಿಸ್ಥಿತಿಯನ್ನು ಬಿಂಬಿಸಲು ಕಾಂಗ್ರೆಸ್ ನಾಯಕ ಪಾಕ್ ಚಿತ್ರವನ್ನು ಬಳಸಿ ವಿವಾದಕ್ಕೀಡಾಗಿದ್ದಾರೆ. ಕಾಂಗ್ರೆಸ್ ಮುಖಂಡ ಮತ್ತು ವಕ್ತಾರ ಅಮೆರಿಕೈ ವಿ ನಾರಾಯಣನ್ ಅವರು ತೀವ್ರವಾಗಿ ಕಾಲು ಒಡೆದ ಮಕ್ಕಳ ಫೋಟೋವನ್ನು ಟ್ವೀಟ್ ಮಾಡಿ ಈ ಸದ್ಯದ ಭಾರತದ ಪರಿಸ್ಥಿತಿ ಎಂದು ಬರೆದುಕೊಂಡಿದ್ದರು.
ಈ ಟ್ವೀಟ್ ನಲ್ಲಿ ತಮಿಳಿನಲ್ಲಿದ್ದು, ಈ ಫೋಟೋ ಕುರಿತಂತೆ ಫ್ಯಾಕ್ಟ್ ಚೆಕ್ ಮಾಡಿದಾಗ ಈ ಚಿತ್ರ 2018ರಲ್ಲಿ ಪ್ರಕಟವಾಗಿರುವುದಾಗಿ ತಿಳಿದುಬಂದಿದೆ.
Congress is resorting to cheap tactics to defame India & attack Modi govt’s lockdown decision.
Congress spokesperson @americai uses pictures of poor Pakistani kids to make false claims about Indian children starving due to lockdown.#IndiaFightsCorona #Covid_19 #lockdown pic.twitter.com/tjCzr0l43A
— Know The Nation (@knowthenation) April 16, 2020
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸಜವಾಲಾಬಾದ್ ಪ್ರದೇಶದ ಮಕ್ಕಳ ಪಾದಗಳಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ. ಇದು ಪಾಕಿಸ್ತಾನದ ಪ್ರಜಾಪ್ರಭುತ್ವದ ನೈಜ ಮುಖ ಎಂಬ ಹೆಸರಿನಲ್ಲಿ ಲೇಖನ ಪ್ರಕಟವಾಗಿತ್ತು. ಈ ಫೋಟೋವನ್ನೇ ನಾರಾಯಣನ್ ಬಳಸಿರುವುದಾಗಿ ತಿಳಿದುಬಂದಿದೆ.








