1,250 ಕೋಟಿ ಪ್ಯಾಕೇಜ್ ಘೋಷಿಸಿದ ಸಿಎಂ : ಯಾರಿಗೆ ಎಷ್ಟೆಷ್ಟು..?
ಬೆಂಗಳೂರು : ಕೊರೊನಾ ಲಾಕ್ ಡೌನ್ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪ 1,250 ಕೋಟಿ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಪರಿಹಾರ ಘೋಷಣೆ ಮಾಡಿದ್ದಾರೆ. ಬರೋಬ್ಬರಿ 1,250 ಕೋಟಿ ಪ್ಯಾಕೇಜ್ ಅನ್ನು ಸಿಎಂ ಘೋಷಣೆ ಮಾಡಿದ್ದು, ಕ್ಯಾಬ್, ಆಟೋ ಚಾಲಕರಿಗೆ ಪ್ರತಿ ಚಾಲಕನಿಗೆ 3000 ಸಹಾಯಧನ. ಕಟ್ಟಡ ಕಾರ್ಮಿಕರಿಗೆ ತಲಾ 3000 ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
ಮುಖ್ಯಾಂಶಗಳು
ಕ್ಯಾಬ್, ಆಟೋ ಚಾಲಕರಿಗೆ ಪ್ರತಿ ಚಾಲಕನಿಗೆ 3000 ಸಹಾಯಧನ
ಕಟ್ಟಡ ಕಾರ್ಮಿಕರಿಗೆ ತಲಾ 3000 ರೂ. ಪರಿಹಾರ
ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10,000 ರೂ. ಪರಿಹಾರ
ಕಲಾವಿದರು ಮತ್ತು ಕಲಾ ತಂಡಗಳಿಗೆ ತಲಾ 3000 ರೂ. ಪರಿಹಾರ
ಅಸಂಘಟಿತ ಕಾರ್ಮಿಕರಿಗೆ ತಲಾ 2000 ರೂ. ಪರಿಹಾರ
ಗರೀಬ್ ಕಲ್ಯಾಣ ಯೋಜನೆ ಅಡಿ ಪ್ರತಿ ತಿಂಗಳು 5 ಕೆಜಿ ಅಕ್ಕಿ
ಬೀದಿ ಬದಿ ವ್ಯಾಪಾರಿಗಳಿಗೆ 2000 ರೂಪಾಯಿ
ಬಿಬಿಎಂಪಿ ವ್ಯಾಪ್ತಿ, ನಗರ ಪ್ರದೇಶಗಳಲ್ಲಿ ಉಚಿತ ಊಟ
ಕೊರೊನಾ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ








