‘ನಾನವನಲ್ಲ’ ಎಂದವರು ಈಗ ‘ನಾನೇ ಅವನು’ ಎನ್ನುತ್ತಿದ್ದಾರೆ : ಮಾಜಿ ಸಚಿವರ ಬಂಧನ ಯಾವಾಗ..? Ramesh Zarakiholi
ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ವ್ಯಕ್ತಿ ತಾನೇ ಎಂದು ಆರೋಪಿ ಒಪ್ಪಿಕೊಂಡಿದ್ದು, ಮಾಜಿ ಸಚಿವರ ಬಂಧನ ಯಾವಾಗ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಲೈಂಗಿಕ ಕ್ರಿಯೆ ನಡೆಸುತ್ತಿರುವ ದೃಶ್ಯಾವಳಿಗಳನ್ನು ಹೊಂದಿರುವ ಸಿ.ಡಿಯಲ್ಲಿ ಇರುವ ವ್ಯಕ್ತಿ ನಾನೇ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದು ಅವರ ಬಂಧನ ಯಾವಾಗ..? ಎಂದು ಪ್ರಶ್ನಿಸಿದೆ.
‘ನಾನವನಲ್ಲ’ ಎಂದವರು ಈಗ ‘ನಾನೇ ಅವನು’ ಎನ್ನುತ್ತಿದ್ದಾರೆ! ರಮೇಶ್ ಜಾರಕಿಹೊಳಿ ಅವರೇ ಸಿಡಿ ಅಸಲಿ, ಅದು ತಾವೇ ಎಂದಮೇಲೆ ಮೊದಲು ನಿರಾಕರಿಸಿದ್ದೇಕೆ ಎಸ್ ಐಟಿ ರಚನೆ ಮಾಡಿಸಿದ್ದೇಕೆ ಜನರ ಹಣ ಪೋಲು ಮಾಡಿಸಿದ್ದೇಕೆ..?
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ, ಆರೋಪಿ ಒಪ್ಪಿಕೊಂಡಿದ್ದಾಯ್ತು, ಇನ್ನಾದರೂ ಸಂತ್ರಸ್ತೆಯ ದೂರಿನ ಮೆರೆಗೆ ಬಂಧಿಸಿ ಕಾನೂನು ಪಾಲಿಸುವಿರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.









