ADVERTISEMENT
Monday, September 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಜ್ಯ ಬಿಜೆಪಿಗೆ ಮತ್ತೆ ಆವರಿಸಿಕೊಂಡ ಬಂಡಾಯದ ಸೋಂಕು..! ಸಿಎಂ ಬಿಎಸ್ ವೈಗೆ ಇದು ಕೋವಿಡ್‍ಗಿಂತಲೂ ಮಾರಕ…!

admin by admin
May 26, 2021
in Newsbeat, Politics, ರಾಜಕೀಯ
cm bsy saakshatv karnataka
Share on FacebookShare on TwitterShare on WhatsappShare on Telegram

ರಾಜ್ಯ ಬಿಜೆಪಿಗೆ ಮತ್ತೆ ಆವರಿಸಿಕೊಂಡ ಬಂಡಾಯದ ಸೋಂಕು..! ಸಿಎಂ ಬಿಎಸ್ ವೈಗೆ ಇದು ಕೋವಿಡ್‍ಗಿಂತಲೂ ಮಾರಕ…!

amith sha bsy saakshatvಮಹಾಮಾರಿ ಕೋವಿಡ್ ಸೋಂಕಿಗಿಂತಲೂ ಕರ್ನಾಟಕ ಬಿಜೆಪಿಗೆ ಅಧಿಕಾರದ ಆಮಲು ಆವರಿಸಿಕೊಂಡಂತಿದೆ. ಯಾಕಂದ್ರೆ ಸಿಎಂ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಜನರು ಒದ್ದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ.
ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣವನ್ನು ತಗ್ಗಿಸಲು ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಗಿದೆ. ಸೋಂಕಿನ ಪ್ರಮಾಣವನ್ನು ಕಮ್ಮಿ ಮಾಡಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿಗಳು, ಸೇವಾಕಾರ್ಯಕರ್ತರು ಹಾಗೂ ಕೆಲವು ಜನಪ್ರತಿನಿಧಿಗಳು ಜೀವದ ಹಂಗನ್ನು ತೊರೆದು ಕೆಲಸ ಮಾಡುತ್ತಿದ್ದಾರೆ.
ಆದ್ರೆ ಇನ್ನು ಕೆಲವು ಜನ ಪ್ರತಿನಿಧಿಗಳಿಗೆ ಜನರ ಹಿತಕ್ಕಿಂತ ಅಧಿಕಾರವೇ ಮುಖ್ಯವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಿಎಂ ಬದಲಾವಣೆಯ ಅಗತ್ಯವಾದ್ರೂ ಏನಿದೆ ಎಂಬ ಪ್ರಶ್ನೆಗೆ ಉತ್ತರಗಳು ಹಲವಾರು.

Related posts

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

ಗ್ಯಾರಂಟಿ ಯೋಜನೆಗಳೇ ಸರ್ಕಾರಕ್ಕೆ ಮುಳುವಾಯಿತೇ?ಡಿಕೆಶಿ ಸರ್ಕಾರಕ್ಕೆ ಸಚಿವ ಬಾಲಕೃಷ್ಣ ಶಾಕ್: ಗ್ಯಾರಂಟಿ ಇಲ್ಲದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ ಎಂದು ಅಸಹಾಯಕತೆ

September 28, 2026

ಹಾಗೇ ನೋಡಿದ್ರೆ ಕೋವಿಡ್ ವಿಚಾರದಲ್ಲಿ ಸಿಎಂ ಬಿಎಸ್ ವೈ ಕೆಲವೊಂದು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಆದ್ರೆ ಬಿಜೆಪಿಯ ಸಚಿವರು, ಶಾಸಕರು, ಹಾಗೂ ವಿರೋಧ ಪಕ್ಷಗಳ ಜನನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿಲ್ಲ ಎಂಬುದು ಕೂಡ ಗೊತ್ತಿಲ್ಲದ ವಿಚಾರವೇನೂ ಅಲ್ಲ.
ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವುದರಲ್ಲೇ ತಲ್ಲೀಣವಾಗಿದೆ. ಇನ್ನೊಂದೆಡೆ ಆಡಳಿತ ಪಕ್ಷ ಬಿಜೆಪಿಯಲ್ಲೂ ವಿರೋಧಿ ಬಣ ಹೆಚ್ಚಾಗಿದೆ. ಹೀಗಾಗಿ ಬಿಎಸ್ ವೈ ಗೆ ಅಧಿಕಾರ ನಡೆಸಲು ವಿರೋಧ ಪಕ್ಷಗಳಿಗಿಂತಲೂ ಸ್ವಪಕ್ಷದ ಶಾಸಕರ ವಿರೋಧವೇ ಹೆಚ್ಚಾಗುತ್ತಿದೆ.
ಪದೇ ಪದೇ ಸಿಎಂ ಬಿಎಸ್ ವೈ ಅವರನ್ನು ನಿದ್ದೆಗೆಡಿಸುತ್ತಿರುವ ಸ್ವಪಕ್ಷದ ಶಾಸಕರು ಮುಳ್ಳಾಗಿ ಚುಚ್ಚುತ್ತಿದ್ದಾರೆ. ಹೀಗಾಗಿ ಬಿಎಸ್ ವೈ ಅಧಿಕಾರ ನಡೆಸಲು ಒದ್ದಾಟ ನಡೆಸುತ್ತಿದ್ದಾರೆ.
ಇನ್ನು ಬಿಎಸ್ ವೈ, ಪುತ್ರ ವಿಜಯೇಂದ್ರ ಅವರ ಮೇಲಿನ ವ್ಯಾಮೋಹದಿಂದಾಗಿ ಪಕ್ಷದದಲ್ಲಿ ಹಿಡಿತವನ್ನು ಕಳೆದುಕೊಳ್ಳುತ್ತಿದ್ದಾರೆ. ವಿಜಯೇಂದ್ರ ಅವರು ಆಡಳಿತದಲ್ಲಿ ಮೂಗು ತೂರಿಸುತ್ತಿರುವುದರಿಂದ ಬಿಎಸ್ ವೈ ಗೆ ವಿರೋಧಿಗಳು ಹೆಚ್ಚಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

bjp karnataka saakshatvಇನ್ನು ಉತ್ತರ ಕರ್ನಾಟಕದ ಶಾಸಕರು ಪ್ರತ್ಯೇಕ ಬಣ ರಚಿಸಿಕೊಂಡಿದ್ದಾರೆ. ಇವರಿಗೆ ಕೆಲವೊಂದು ಮಠಾಧೀಶರ ಬೆಂಬಲವೂ ಇದೆ. ಅದೇ ರೀತಿ ಉತ್ತರ ಕರ್ನಾಟಕದ ಶಾಸಕರು ಮತ್ತು ಸಂಸದರಿಗೆ ಬಿಜೆಪಿ ಹೈಕಮಾಂಡ್ ಮತ್ತು ಆರ್ ಎಸ್ ಎಸ್ ನ ಬೆಂಬಲವೂ ಇದೆ.
ಇನ್ನೊಂದೆಡೆ ಬಿಎಸ್ ವೈ ಗೆ ವಯಸ್ಸು ಕೂಡ ಅಡ್ಡಿಯಾಗುತ್ತಿದೆ. ಹೀಗಾಗಿ ಬಿಎಸ್ ವೈ ಸಿಎಂ ಸ್ಥಾನದಿಂದ ಕೆಳಗಿಳಿಯುವುದು ಅನಿವಾರ್ಯವಾಗಿದೆ. ಆದ್ರೆ ಬಿಎಸ್ ವೈ ಅಷ್ಟೊಂದು ಸುಲಭವಾಗಿ ಅಧಿಕಾರದಿಂದ ಕೆಳಗಿಳಿಯುವ ಸಾಧ್ಯತೆಗಳಿಲ್ಲ.
ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸಲು ಮತ್ತು ಅಧಿಕಾರ ಚುಕ್ಕಾಣಿ ಹಿಡಿಯಲು ಪ್ರಮುಖ ಕಾರಣ ಬಿಎಸ್ ವೈ ನಾಯಕತ್ವ. ಹೀಗಾಗಿ ಬಿಜೆಪಿ ಹೈಕಮಾಂಡ್ ಬಹಳಷ್ಟು ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಯಾಕಂದ್ರೆ ಬಿಎಸ್ ವೈ ಅವರನ್ನು ಕೆಳಗಿಳಿಸಿದ್ರೆ ಅದರಿಂದ ಆಗುವಂತಹ ಹಿನ್ನಡೆಯ ಬಗ್ಗೆ ಯೋಚನೆ ಮಾಡಬೇಕಿದೆ.

ಈ ನಡುವೆ, ಬಿಜೆಪಿ ಹೈಕಮಾಂಡ್ ನ ಸೂಚನೆಯಂತೆ ಜೂನ್ 7ರಂದು ಶಾಸಕಾಂಗ ಸಭೆಯನ್ನು ಕರೆದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಂಸದ ಪ್ರಹ್ಲಾದ್ ಜೋಶಿಯವರ ನೇತೃತ್ವದಲ್ಲಿ ಕೆಲವೊಂದು ಶಾಸಕರ ಜೊತೆ ಸಭೆ ಕೂಡ ನಡೆದಿದೆ.
ಒಟ್ಡಿನಲ್ಲಿ ರಾಜ್ಯದಲ್ಲಿ ಈಗ ಕೋವಿಡ್ ಗಿಂತಲೂ ರಾಜಕೀಯ ಬೆಳವಣಿಗೆಯ ಹೆಚ್ಚು ಮಹತ್ವ ಪಡೆದುಕೊಂಡಿದೆ, ಈಗಾಗಲೇ ಬಿಎಸ್ ವೈ ಉತ್ತರಾಧಿಕಾರಿಯಾಗಲು ಆರೇಳು ಮಂದಿ ರೇಸ್ ನಲ್ಲಿದ್ದಾರೆ. ಒಟ್ಟಾರೆ, ಸಿಎಂ ಬಿಎಸ್ ವೈ ಸಿಎಂ ಸ್ಥಾನದಿಂದ ಕೆಳಗಿಳಿಯುವುದು ಪಕ್ಕಾ ಅಂತನೇ ಹೇಳಲಾಗುತ್ತಿದೆ. ಆದ್ರೂ ಬಿಎಸ್ ವೈ ಅಧಿಕಾರ ಬಿಟ್ಟುಕೊಡುವುದು ಅಂದುಕೊಂಡಷ್ಟು ಸುಲಭವಿಲ್ಲ.

Tags: #saakshatvbengalurucm bsycovid karntaka\Covid19karnatakakarntakabjpstate BJP
ShareTweetSendShare
Join us on:

Related Posts

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

ಗ್ಯಾರಂಟಿ ಯೋಜನೆಗಳೇ ಸರ್ಕಾರಕ್ಕೆ ಮುಳುವಾಯಿತೇ?ಡಿಕೆಶಿ ಸರ್ಕಾರಕ್ಕೆ ಸಚಿವ ಬಾಲಕೃಷ್ಣ ಶಾಕ್: ಗ್ಯಾರಂಟಿ ಇಲ್ಲದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ ಎಂದು ಅಸಹಾಯಕತೆ

by Shwetha
September 28, 2026
0

ರಾಮನಗರ: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಈಗ ತನ್ನದೇ ಪಕ್ಷದ ಪ್ರಭಾವಿ ಸಚಿವರಿಂದ ದೊಡ್ಡ ಮುಜುಗರ ಎದುರಾಗಿದೆ. ಸರ್ಕಾರದ ಅತಿ ದೊಡ್ಡ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಬಗ್ಗೆ...

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

by Shwetha
September 28, 2026
0

ಹೈದರಾಬಾದ್: ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ದಿ ಪ್ಯಾರಡೈಸ್ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಮಾ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಮಾತ್ರ...

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

ವರ್ಷದ ಕೊನೆಯ ಅಂಗಾರಕ ಸಂಕಷ್ಟಿ ಚತುರ್ಥಿ:ನಿಮ್ಮ ಇಷ್ಟಾರ್ಥ ಸಿದ್ಧಿಗಾಗಿ ಗಣೇಶನಿಗೆ ಹೀಗೆ ಅರ್ಪಿಸಿ ಗರಿಕೆ

by Shwetha
September 28, 2026
0

ವಿನಾಯಕನ ಭಕ್ತರಿಗೆ ಇದು ಅತ್ಯಂತ ಪುಣ್ಯದಾಯಕ ಸಮಯ. ಭಾದ್ರಪದ ಮಾಸದ ಪವಿತ್ರ ದಿನಗಳಲ್ಲಿ ವಿಘ್ನರಾಜ ಸಂಕಷ್ಟಿ ಚತುರ್ಥಿಯು ಸನ್ನಿಹಿತವಾಗಿದ್ದು, ಈ ಬಾರಿ ಇದು ಮಂಗಳವಾರದಂದು ನಾಳೆ ಬಂದಿರುವುದು...

ರಂಗಭೂಮಿಯ ಶಾಶ್ವತ ಮುಖ್ಯಮಂತ್ರಿಗೆ ಮಾಜಿ ಮತ್ತು ಹಾಲಿ ಸಿಎಂಗಳ ಸಲಾಂ ಮುಖ್ಯಮಂತ್ರಿ ನಾಟಕದ 900ನೇ ಪ್ರದರ್ಶನ ಯಶಸ್ವಿ:ಮುಖ್ಯಮಂತ್ರಿ ಚಂದ್ರು ಅಬ್ಬರಕ್ಕೆ ಸಾಕ್ಷಿಯಾದ ರಾಜಕೀಯ ಗಣ್ಯರು

ರಂಗಭೂಮಿಯ ಶಾಶ್ವತ ಮುಖ್ಯಮಂತ್ರಿಗೆ ಮಾಜಿ ಮತ್ತು ಹಾಲಿ ಸಿಎಂಗಳ ಸಲಾಂ ಮುಖ್ಯಮಂತ್ರಿ ನಾಟಕದ 900ನೇ ಪ್ರದರ್ಶನ ಯಶಸ್ವಿ:ಮುಖ್ಯಮಂತ್ರಿ ಚಂದ್ರು ಅಬ್ಬರಕ್ಕೆ ಸಾಕ್ಷಿಯಾದ ರಾಜಕೀಯ ಗಣ್ಯರು

by Shwetha
September 28, 2026
0

ಬೆಂಗಳೂರು ರಂಗಭೂಮಿಯ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಕ್ಷರಗಳ ಪುಟ ತೆರೆದುಕೊಂಡಿತು. ದಶಕಗಳಿಂದ ಕನ್ನಡಿಗರ ಮನಗೆದ್ದಿರುವ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಭಿನಯದ ಐತಿಹಾಸಿಕ ನಾಟಕ ಮುಖ್ಯಮಂತ್ರಿ ತನ್ನ...

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

ನೆಗೆದುಬಿದ್ದು ಹೋಗುತ್ತೆ ಈ ಸರ್ಕಾರ: 2028ರವರೆಗೆ ಇರ್ತಾರೋ ಇಲ್ವೋ ಗೊತ್ತಿಲ್ಲ ಎಂದು ಡಿಕೆಶಿಗೆ ಕುಮಾರಸ್ವಾಮಿ ಏಕವಚನದಲ್ಲೇ ಕ್ಲಾಸ್

by Shwetha
September 28, 2026
0

ಚನ್ನಪಟ್ಟಣ: ಬಿಡದಿ ಟೌನ್ ಶಿಪ್ ವಿಚಾರವಾಗಿ ರೈತರು ನಡೆಸುತ್ತಿರುವ ಹೋರಾಟ ಈಗ ಮಹಾ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿದ ಕೇಂದ್ರ ಸಚಿವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram