ಸಿಎಂ ಮೇಲೆ ವಿಶ್ವಾಸ ಇಲ್ಲದವರನ್ನ ಸಂಪುಟದಿಂದ ತೆಗೆದು ಹಾಕಿ : ರಾಜುಗೌಡ
ಯಾದಗಿರಿ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯದ ಜನರ ಮೇಲೆ ಯಾರು ವಿಶ್ವಾಸ ಇಟ್ಟು ಕೆಲಸ ಮಾಡ್ತಾರೆ ಅಂತವರನ್ನು ಸಂಪುಟದಲ್ಲಿ ಮುಂದುವರೆಸಬೇಕು.
ವಿಶ್ವಾಸ ಇಲ್ಲದವರನ್ನು ಸಂಪುಟದಿಂದ ತೆಗೆದು ಹಾಕಿ ಎಂದು ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಶಾಸಕ ರಾಜು ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜು ಗೌಡ, ಸಿ.ಪಿ.ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ನನ್ನ ಹಿಂದೆ ಸುರಪುರ ಜನತೆ ಶಕ್ತಿ ಇದೆ, ಮತಬಾಂಧವರ ಶಕ್ತಿ ಇದೆ. ಈ ಧೈರ್ಯದ ಮೇಲೆ ಮಾತನಾಡುತ್ತೇನೆ. ಅಲ್ಲದೇ ನಾನು ಒಳ್ಳೆ ಕೆಲಸ ಮಾಡುತ್ತೇನೆ.
ನನಗೆ ಬಕೆಟ್ ಹಿಡಿಯೋಕೆ ಬರುವುದಿಲ್ಲ. ಬಕೆಟ್ ಹಿಡಿಯುವ ಮನುಷ್ಯ ಆದ್ರೆ ಮಾತನಾಡುವುದಕ್ಕೆ ಧೈರ್ಯ ಬರೋದಿಲ್ಲ ಎಂದು ಯೋಗೇಶ್ವರ್ ಅವರ ರಾಜು ಗೌಡರ ಹಿಂದೆ ಒಂದು ಶಕ್ತಿ ಇದೆ ಎಂಬ ಹೇಳಿಕೆಗೆ ತಿರುಗೇಟು ನೀಡಿದರು.
ಇನ್ನು ಯೋಗೇಶ್ವರ್ ವಿರುದ್ಧ ಮೊದಲು ಮಾತಾಡಿದ್ದೇನೆ. ಈಗಲೂ ಮಾತಾಡುತ್ತೇನೆ. ಯೋಗೇಶ್ವರ್ ಒಳ್ಳೆ ಕೆಲಸ ಮಾಡಿದರೆ ಶಹಬ್ಬಾಶ್ ಗಿರಿ ಕೊಡುತ್ತೇವೆ.
ಈ ರೀತಿ ಕೆಟ್ಟ ಕೆಲಸ ಮಾಡಿದರೆ ತಕ್ಕ ಉತ್ತರ ಕೊಡುವ ಶಕ್ತಿ ಸುರಪುರ ಮತ ಕ್ಷೇತ್ರದ ಜನತೆ ಕೊಟ್ಟಿದೆ, ಹಾಗಾಗಿ ಮಾತನಾಡುತ್ತಿದ್ದೇನೆ ಎಂದು ಟಾಂಗ್ ನೀಡಿದರು.










