ಲಂಡನ್: ಕೊರೊನಾ ಹೊಡೆತಕ್ಕೆ ಇಡಿ ವಿಶ್ವವೇ ನಲುಗಿದೆ. ಒಂದೆಡೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ವಿಶ್ವದ ಬಹುತೇಕ ದೇಶಗಳು ಕೊರೊನಾ ವೈರಸ್ ಗೆ ಲಸಿಕೆ ಲಭ್ಯವಾಗಬಹುದು ಎಂದು ಕಾಯುತ್ತಿದ್ದಾರೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ವಿಶೇಷ ರಾಯಭಾರಿ ಡೇವಿಡ್ ನಬರೋ ಅವರು ಆಡಿರುವ ಮಾತುಗಳು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚು ಮಾಡಿದೆ. ಈ ಬಗ್ಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕೋವಿಡ್-19 ಗೆ ಲಸಿಕೆ ಕಂಡುಹಿಡಿಯುತ್ತಿರುವ ಪ್ರಯತ್ನಗಳು ಯಶ್ವಸಿಯಾಗುತ್ತವೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಮುಂದಿನ ದಿನಗಳಲ್ಲಿ ಕೊರೋನಾ ವೈರಸ್ ಭೀತಿ, ಅಪಾಯಗಳ ನಡುವೆಯೇ ಜನರು ಜೀವನ ನಡೆಸಬೇಕಿದೆ. ಏಕೆಂದರೆ ಇದಕ್ಕೆ ಲಸಿಕೆ ಸಿದ್ಧವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
ಕೆಲವು ವೈರಸ್ ಗಳಿಗೆ ಲಸಿಕೆ ಅಭಿವೃದ್ಧಿಪಡಿಸುವುದು ತುಂಬಾ ಕಷ್ಟ. ಕೊರೋನಾ ವೈರಸ್ ಗ ನಿಂದ ಪಾರಾಗಬೇಕು ಎಂದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಐಸೊಲೇಷನ್ ನಲ್ಲಿರುವುದೇ ಸಧ್ಯಕ್ಕೆ ಇರುವ ಮಾರ್ಗ ಎಂದು ಡೇವಿಡ್ ನಬರೋ ತಿಳಿಸಿದ್ದಾರೆ. ಡೇವಿಡ್ ನಬರೋ ವಿಶ್ವದ ಪ್ರಖ್ಯಾತ ತಜ್ಞರಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ಅವರ ಮಾತುಗಳು ಹೆಚ್ಚು ಆತಂಕ ಮೂಡಿಸಿವೆ.








